Snake Village: ಹಾವಿನಿಂದಲೇ ಹೊಟ್ಟೆ ತುಂಬಿಸಿಕೊಳ್ಳೋ ಹಳ್ಳಿ! ಇವರಿಗೆ ಹಾವಿನ ಭಯವೇ ಇಲ್ಲ

ಛತ್ತೀಸ್‌ಗಢದ ಬಲೋದ್ ಜಿಲ್ಲೆಯ ಸಿಯೋನಿ ಗ್ರಾಮದಲ್ಲಿ 80ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಹಾವುಗಳ ಬಲದ ಮೇಲೆ ಇವರ ಜೀವನ ನಡೆಯುತ್ತದೆ. ಸರ್ಪಗಳ ಬಲದಿಂದ ಅವರಿಗೆ ಪ್ರತಿದಿನ ಹೊಟ್ಟೆತುಂಬುತ್ತದೆ. ಇಲ್ಲಿನ ಜನರಿಗೆ ಹಾವುಗಳೇ ಉದ್ಯೋಗದ ಮೂಲ. ಅವರ ಆದಾಯ ಕೇವಲ ಹಾವುಗಳಿಂದ. ಅವರು ಕೊರ್ಬಾ ಪ್ರದೇಶಕ್ಕೆ ಸೇರಿದವರು, ಆದರೆ ಅವರ ಪೂರ್ವಜರು ದಶಕಗಳ ಹಿಂದೆ ಸಿಯೋನಿ ಗ್ರಾಮಕ್ಕೆ ಬಂದಿದ್ದರಿಂದ, ಅವರು ಇಂದಿಗೂ ಅಲ್ಲಿ ವಾಸಿಸುತ್ತಿದ್ದಾರೆ. ಕುಟುಂಬದ ಪುರುಷರು ಹಾವು ಹಿಡಿಯಲು ಸಮೀಪದ ಹಳ್ಳಿಗೆ ಹೋಗಿ ಅದರಿಂದ ಜೀವನ ಸಾಗಿಸುತ್ತಾರೆ.

First published: