Scooter Teacher: ಸ್ಕೂಟಿ ಟೀಚರ್ ಫೇಮಸ್! 85 ಮಕ್ಕಳನ್ನು ಒಬ್ಬರೇ ಪಿಕಪ್ ಮಾಡಿ ಡ್ರಾಪ್ ಕೂಡಾ ಮಾಡ್ತಾರೆ

ಬುಡಕಟ್ಟು ಪ್ರದೇಶವಾದ ಬೆತುಲ್‌ನಲ್ಲಿ ಇಂತಹ ಅನೇಕ ದುರ್ಗಮ ಪ್ರದೇಶಗಳಿವೆ. ಅಲ್ಲಿ ಮಕ್ಕಳು ಶಾಲೆಗೆ ಹೋಗುವಾಗ ಸಾಕಷ್ಟು ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಭೀತಿಯನ್ನು ಬೇತುಲ್‌ ಶಾಲೆ ಕೂಡಾ ಎದುರಿಸುತ್ತಿದೆ. ಅದು ಬಹುತೇಕ ಮುಚ್ಚಲ್ಪಟ್ಟಿದೆ, ಆದರೆ ಈಗ ಅದು ಮತ್ತೆ ಪುನರಾರಂಭಗೊಂಡಿದೆ. ಇಲ್ಲಿ ಮತ್ತೆ ಮಕ್ಕಳ ಚಟುವಟಿಕೆಗಳು, ಆಟ ಪಾಠ ಶುರುವಾಗಿದೆ. ಅದಕ್ಕೆ ಕಾರಣ ಈ ಸ್ಕೂಟಿ ಟೀಚರ್.

First published: