ನದಿಗೆ ನಾಣ್ಯ ಹಾಕಿದರೆ ಅದೃಷ್ಟ ಬರುತ್ತದೆ ಎಂದು ಪ್ರಾಚೀನ ಕಾಲದಿಂದಲೂ ಹೇಳಲಾಗಿದೆ. ಆದರೆ ಇದು ಕೇವಲ ಅದೃಷ್ಟವೇ ಅಥವಾ ಅದರ ಹಿಂದೆ ಬೇರೆ ಕಾರಣವಿದೆಯೇ? ನಾಣ್ಯವನ್ನು ನೀರಿನಲ್ಲಿ ಎಸೆಯುವುದು ಮೂಢನಂಬಿಕೆ ಮಾತ್ರವಲ್ಲ. ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಪ್ರಾಚೀನ ಕಾಲದಲ್ಲಿ, ನಾಣ್ಯಗಳನ್ನು ತಾಮ್ರದಿಂದ ಮಾಡಲಾಗುತ್ತಿತ್ತು. ಅವುಗಳನ್ನು ನೀರಿನಲ್ಲಿ ಹಾಕುವುದು ನೀರಿನ ಮೇಲೆ ಪರಿಣಾಮ ಬೀರಿತು.