ಬೇರೆ ನಟಿಯರಿಗೆ ಹೋಲಿಸಿ ಬಿಳಿ ಕೂದಲ ಬಗ್ಗೆ ಪ್ರಶ್ನಿಸಿದ ನೆಟ್ಟಿಗರಿಗೆ ಸಖತ್ತಾಗಿ ಉತ್ತರಿಸಿದ Samreera Reddy
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಬಹುಭಾಷಾ ನಟಿ ಸಮೀರಾ ರೆಡ್ಡಿ ಅವರು ಆಗಾಗ ಬಾಡಿಶೇಮಿಂಗ್ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಹೌದು, ಸಮೀರಾ ರೆಡ್ಡಿ (Sameera Reddy) ಅವರಿಗೆ ಈ ಹಿಂದೆ ಕೆಲ ನೆಟ್ಟಿಗರು ದಪ್ಪವಾಗಿದ್ದರೆ, ಚೆನ್ನಾಗಿ ಕಾಣುತ್ತಿಲ್ಲ ಎಂದು ಟೀಕಿಸಿದ್ದರು. ಈಗ ಮತ್ತೊಬ್ಬರು ಸಮೀರಾ ರೆಡ್ಡಿ ಅವರನ್ನು ಬೇರೆ ನಟಿಯರಿಗೆ ಹೋಲಿಕೆ ಮಾಡಿ, ನಿಮಗೇಕೆ ಇಷ್ಟು ಬಿಳಿ ಕೂದಲು (Gray/White Hair) ಬಂದಿದೆ ಎಂದು ಪ್ರಶ್ನಿಸಿದ್ದಾರೆ. (ಚಿತ್ರಗಳು ಕೃಪೆ: ಸಮೀರಾ ರೆಡ್ಡಿ ಇನ್ಸ್ಟಾಗ್ರಾಂ ಖಾತೆ)
ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ, ಹಾಟ್ ನಟಿ ಎಂದು ಗುರುತಿಸಿಕೊಂಡಿದ್ದವರು ಸಮೀರಾ ರೆಡ್ಡಿ. ಮದುವೆಯಾದ ನಂತರ ಗಂಡ-ಮಕ್ಳಳು ಹಾಗೂ ಮನೆ ಅಂತ ಕಾಲ ಕಳೆಯುತ್ತಿದ್ದಾರೆ.
2/ 6
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸಮೀರಾ ರೆಡ್ಡಿ ಆಗಾಗ ತಾವು ದಪ್ಪಗಾಗಿರುವ ಬಗ್ಗೆ, ತಮ್ಮ ಚರ್ಮ ದಿನೇ ದಿನೇ ಸುಕ್ಕುಗಟ್ಟುತ್ತಿರುವ ಬಗ್ಗೆ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ನಮ್ಮ ದೇಹ ಹೇಗಿದೆಯೋ ಹಾಗೆಯೇ ಅದನ್ನು ಒಪ್ಪಿಕೊಳ್ಳಿ ಎಂದು ಹೇಳುತ್ತಲೇ ಇರುತ್ತಾರೆ.
3/ 6
ವಯಸ್ಸಿಗೆ ತಕ್ಕಂತೆ ದೇಹವೂ ಸಹ ಬದಲಾಗುತ್ತಿರುತ್ತದೆ. ಅದನ್ನು ನಾವು ಒಪ್ಪಿಕೊಂಡಾಗಲೇ ಖುಷಿಯಾಗಿರಲು ಸಾಧ್ಯ ಎನ್ನುವ ಸಮೀರಾ ರೆಡ್ಡಿ ಅವರಿಗೆ ಆಗಾಗ ಕೆಲ ನೆಟ್ಟಿಗರು ಅವರು ದಪ್ಪಗಾಗಿರುವ ಹಾಗೂ ಮುಖದ ಮೇಲಿನ ಮೊಡವೆಗಳ ಕುರಿತಾಗಿ ಖಾರವಾಗಿ ಕಮೆಂಟ್ ಮಾಡುತ್ತಿರುತ್ತಾರೆ.
4/ 6
ನೆಟ್ಟಿಗರು ಬಾಡಿಶೇಮಿಂಗ್ ಬಗ್ಗೆ ಎಷ್ಟೇ ಪ್ರಶ್ನೆ ಕೇಳಲಿ ಹಾಗೂ ಅವರ ಸೌಂದರ್ಯದ ಬಗ್ಗೆ ಎಷ್ಟೇ ಖಾರವಾಗಿ ಕಮೆಂಟ್ ಮಾಡಲಿ, ಎಲ್ಲವನ್ನೂ ಸಮೀರಾ ರೆಡ್ಡಿ ಬಹಳ ಶಾಂತವಾಗಿ ಸ್ವೀಕರಿಸಿ, ಉತ್ತರಿಸುತ್ತಾರೆ.
5/ 6
ಈಗಲೂ ಸಹ ನೆಟ್ಟಿಗರೊಬ್ಬರು ಸಮೀರಾ ಅವರ ತಲೆಗೂದಲು ಬೆಳ್ಳಗಾಗಿರುವ ಕುರಿತಾಗಿ ಪ್ರಶ್ನಿಸಿದ್ದಾರೆ. ನಿಮ್ಮಂತೆಯೇ 42 ವರ್ಷವಾಗಿರುವ ಬೃರೆ ನಟಿಯರಿಗೆ ದಟ್ಟವಾದ ಕಪ್ಪು ಕೂದಲಿದೆ. ಆದರೆ ನಿಮಗೇಕೆ ಇಷ್ಟು ಬೇಗ ಕೂದಲು ಬೆಳ್ಳಗಾಗಿದೆ ಎಂದು ಪ್ರಶ್ನಿಸಿದ್ದಾರೆ.
6/ 6
ನೆಟ್ಟಿಗರೊಬ್ಬರ ಈ ಪ್ರಶ್ನೆಗೆ ಬಹಳ ಸಮಾಧಾನದಿಂದ ಉತ್ತರಿಸಿರುವ ಸಮೀರಾ ರೆಡ್ಡಿ, ಈಗ ಇಲ್ಲಿ ಬರೆಯವರ ಬಗ್ಗೆ ಚರ್ಚೆ ಬೇಡ. ಆರೋಗ್ಯಕರ ಚರ್ಚೆ ಮಾಡೋಣ. ಕೆಲವರು ಬಿಳಿ ಕೂದಲನ್ನು ಬಣ್ಣದಿಂದ ಕವರ್ ಮಾಡಿಕೊಳ್ಳುತ್ತಾರೆ. ಆದರೆ, ನಾನು ಈ ಬದಲಾವಣೆಯನ್ನು ಸ್ವೀಕರಿಸಿದ್ದೇನೆ ಅಷ್ಟೆ. ಎಂದಿದ್ದಾರೆ.