ಹೆಸರು ಎಕಟೆರಿನಾ ಲಿಸಿನಾ. ಈಕೆ ರಷ್ಯಾದ ಪೆಂಜಾ ಮೂಲದ ರೂಪದರ್ಶಿ. 29ರ ಹರೆಯದ ಎಕಟೆರಿನಾ ವಿಶ್ವದ ಅತಿ ಎತ್ತರದ ಮಾಡೆಲ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
2/ 18
ಸರಿಸುಮಾರು 6.8 ಅಡಿ ಎತ್ತರದ ಈ ಮಾಡೆಲ್ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಗೊಂಡಿದ್ದಾರೆ.
3/ 18
ಎಕಟೆರಿನಾ ಲಿಸಿನಾ ಬಾಸ್ಕೆಟ್ ಬಾಲ್ ಆಟಗಾರ್ತಿ ಕೂಡ ಹೌದು. 2014 ರಲ್ಲಿ ಬಾಸ್ಕೆಟ್ ಬಾಲ್ಗೆ ಗುಡ್ ಬೈ ಹೇಳಿ, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.
4/ 18
ಎಕಟೆರಿನಾ ಹೆಸರಲ್ಲಿ ಇನ್ನೂ ಒಂದಷ್ಟು ದಾಖಲೆಗಳಿವೆ. ಈಕೆಯ ಕಾಲುಗಳ ಉದ್ದ 52 ಇಂಚು ಉದ್ದವಿದ್ದು, ರಷ್ಯಾದಲ್ಲಿ ಅತಿ ದೊಡ್ಡ ಪಾದ ಹೊಂದಿದ ಮಹಿಳೆ ಅನ್ನೋ ಹೆಗ್ಗಳಿಕೆಯನ್ನು ಪಡೆದಿದ್ದಾರೆ.
5/ 18
ಈಕೆ 13 ನಂಬರಿನ ಚಪ್ಪಲಿ ಮತ್ತು ಶೂಗಳನ್ನು ಧರಿಸುತ್ತಾರಂತೆ.
6/ 18
ಎಕಟೆರಿನಾ ಲಿಸಿನಾ ಜನಿಸಿದಾಗ ಆಕೆಯ ಪೋಷಕರು ಬಹಳ ಎತ್ತರ ಬೆಳೆಯುತ್ತಾಳೆ ಎಂದು ಭಾವಿಸಿದ್ದರಂತೆ. ಲಿಸಿನಾ 16 ವರ್ಷದವಳಿದ್ದಾಗ 6 ಅಡಿ 6 ಇಂಚು ಎತ್ತರವಿದ್ದರು.
7/ 18
2008ರಲ್ಲಿ ಮೊದಲ ಬ್ಯಾಸ್ಕೆಟ್ಬಾಲ್ ಒಪ್ಪಂದಕ್ಕೆ ಲಿಸಿನಾ ಸಹಿ ಹಾಕಿದ್ದರು, ರಾಷ್ಟ್ರೀಯ ತಂಡದ ಸದಸ್ಯರಾಗಿ ಹಲವಾರು ಪಂದ್ಯಗಳನ್ನು ಆಡಿದ್ದಾರೆ. ಒಲಿಂಪಿಕ್ಸ್ನಲ್ಲಿ ಕಂಚಿನ ಪದಕವನ್ನೂ ಗೆದ್ದಿದ್ದಾರೆ.
8/ 18
ಲಿಸಿನಾ ಕುಟುಂಬದಲ್ಲಿ ಎಲ್ಲರೂ ಎತ್ತರವಾಗಿಯೇ ಇದ್ದಾರಂತೆ. ಎಕಟೆರಿನಾ ತಂದೆಯ ಎತ್ತರ 6 ಅಡಿ 5 ಇಂಚು. ತಾಯಿ ಕೂಡ 6 ಅಡಿ ಎತ್ತರವಿದ್ದಾರೆ. ಸಹೋದರ 6.6 ಅಡಿ ಎತ್ತರವಿದ್ದಾರಂತೆ.