ಆಹಾರ ಸರಬರಾಜು ಕಂಪೆನಿ ಝೊಮ್ಯಾಟೊ ತನ್ನ 2018-19 ರ ವಾರ್ಷಿಕ ವ್ಯವಹಾರ ವರದಿಯನ್ನು ಪ್ರಕಟಿಸಿದೆ. ಈ ವರದಿಯಲ್ಲಿ ಹಿಂದೆಂದೂ ಕಂಡಿರದ ಒಂದು ಅಚ್ಚರಿ ಅಂಶ ಎಲ್ಲರನ್ನೂ ದಂಗಾಗಿಸಿದೆ. ಕಂಪೆನಿ ಕಳೆದ ವರ್ಷ ಡೆಲಿವರಿ ನೀಡಿದ ಆರ್ಡರ್ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು 1.84 ಲಕ್ಷ ರೂ. ಮೌಲ್ಯದ ಡೆಲಿವರಿ. ಒಂದೇ ಆರ್ಡರ್ನಲ್ಲಿ ಝೊಮ್ಯಾಟೊ 1,84,760 ರೂ. ಮೌಲ್ಯದ ಆಹಾರವನ್ನು ಸರಬರಾಜು ಮಾಡಿ ದೇಶದಲ್ಲೇ ಹೊಸ ದಾಖಲೆ ಬರೆದಿದೆ. ಜೈಪುರದಲ್ಲಿ 415 ಬಾಕ್ಸ್ಗಳ ಫುಡ್ ಆರ್ಡರ್ ಅನ್ನು ಸರಿಯಾದ ಸಮಯಕ್ಕೆ ತಲುಪಿಸುವ ಮೂಲಕ ಝೊಮ್ಯಾಟೊ ಒಂದೇ ಕಾಲ್ನಲ್ಲಿ 1.85 ಲಕ್ಷ ರೂ.ನ ವ್ಯವಹಾರ ನಡೆಸಿದೆ. ಆಹಾರ ತಲುಪಿಸಲು ದೋಣಿಯಲ್ಲಿ ಬ್ರಹ್ಮಪುತ್ರ ನದಿಯನ್ನು ದಾಟಿ ಗ್ರಾಹಕರ ಸೇವೆ ಸಲ್ಲಿಸುವ ಮೂಲಕ ಡೆಲಿವರಿ ಬಾಯ್ಯೊಬ್ಬ ಗಮನ ಸೆಳೆದಿದ್ದಾನೆ. 2018-19 ರಲ್ಲಿ ಗುಜರಾತ್ ರಾಜ್ಯದಿಂದ ಹೆಚ್ಚಿನ ಪಿಜ್ಜಾಗೆ ಆರ್ಡರ್ ಬಂದಿರುವುದಾಗಿ ಝೊಮ್ಯಾಟೊ ತಿಳಿಸಿದೆ. ಗುಜರಾತ್ನ ಆನಂದ್ ನಗರದಿಂದ ಫಿಜ್ಜಾಗೆ ಹೆಚ್ಚು ಆರ್ಡರ್ ಲಭಿಸಿದರೆ, ತಮಿಳುನಾಡಿನ ಮಧುರೈ ಸಿಟಿಯಿಂದ ಚಿಕನ್ ಬಿರಿಯಾನಿಗೆ ಹೆಚ್ಚು ಕೋರಿಕೆ ಬಂದಿದೆ ಎಂದು ವರದಿಯಲ್ಲಿ ತಿಳಿಸಿದೆ. ಇನ್ನು ಅತೀ ಹೆಚ್ಚು ಡೆಲಿವರಿಯನ್ನು ಗುಜರಾತ್ನ ಅಹಮದಾಬಾದ್ ನಗರಕ್ಕೆ ನೀಡಲಾಗಿದೆ. ಇನ್ನು ಮಧ್ಯರಾತ್ರಿಯಲ್ಲಿ ಹೆಚ್ಚು ಕೋರಿಕೆ ಮಧ್ಯಪ್ರದೇಶದಿಂದ ಬಂದಿದೆ. ಅಲ್ಲದೆ ತನ್ನ ವ್ಯವಹಾರದಲ್ಲಿ ಕಳೆದ ವರ್ಷಕ್ಕಿಂತ ಈ ಸಾಲಿನಲ್ಲಿ ಶೇ.200 ರಷ್ಟು ಹೆಚ್ಚಳವಾಗಿರುವುದಾಗಿ ಝೊಮ್ಯಾಟೊ ಹೇಳಿಕೊಂಡಿದೆ.