ಅದ್ಧೂರಿ, ಆಡಂಬರದಿಂದ ಮದುವೆಯಾಗುವ ಆಸೆ ಪ್ರತಿಯೊಬ್ಬರಿಗೆ ಇರುತ್ತೆ. ಅವರವರ ಹಣಕಾಸಿನ ಸ್ಥಿತಿ ಆಧಾರದ ಮೇಲೆ ಮದುವೆ ಸಮಾರಂಭಗಳನ್ನು ಮಾಡಲಾಗುತ್ತೆ. ಆದರೆ ಶ್ರೀಮಂತರ ಮಕ್ಕಳ ಮದುವೆಯನ್ನು ಅದ್ಧೂರಿಯಾಗಿ ನೇರವೇರಿಸಲಾಗುತ್ತೆ. ಅದೇ ಸಾಲಿಗೆ ಈಗ ರಾಜ್‌ಕೋಟ್-ಸೌರಾಷ್ಟ್ರದ ಖ್ಯಾತ ಉದ್ಯಮಿ ಮೌಲೇಶಭಾಯ್ ಉಕಾನಿ ಅವರ ಮಗನ ಮದುವೆ ಸೇಪರ್ಡೆಯಾಗಿದೆ.