ಬಿರಿಯಾನಿ ರುಚಿಗೆ ಸೋತು ಹೋಗದವರು ಯಾರಿದ್ದಾರೆ ?. ಬಹುತೇಕ ಜನರಿಗೆ ಬಿರಿಯಾನಿ ಎಂದರೆ ಇಷ್ಟ. ಅದರಲ್ಲಿ ವೆಜ್ ಹಾಗೂ ನಾನ್ ವೆಜ್ ಬಿರಿಯಾನಿಗಳು ಎರಡನ್ನು ತಿನ್ನುವ, ಇಷ್ಟ ಪಡುವ ಜನರಿದ್ದಾರೆ.
2/ 10
ಹಲವಾರು ವೆರೈಟಿ ಬಿರಿಯಾನಿಗಳು ಹೋಟೆಲ್ಗಳಲ್ಲಿವೆ. ಅವೆಲ್ಲವನ್ನು ಸವಿದು ತೇಗಿದವರು ಹಲವರಿರಬಹುದು. ಆದರೆ ಇಲ್ಲೊಂದು ದುಬಾರಿ ಬಿರಿಯಾನಿಯಿದೆ ಅದ ನ್ನು ಸವಿಯಲು ಸಾಧ್ಯವೇ ಇಲ್ಲ!
3/ 10
ಹೌದು ಇಲ್ಲೊಂದು ಬಿರಿಯಾನಿ ಅಂತ್ಯತ ದುಬಾರಿ ಎನಿಸಿಕೊಂಡಿದೆ. ಅಷ್ಟು ಮಾತ್ರವಲ್ಲ, ಐಷಾರಾಮಿ ಹೋಟೆಲ್ವೊಂದಲ್ಲಿ ಈ ಬಿರಿಯಾನಿ ಸಿಗುತ್ತಿದೆ.
4/ 10
ದುಬೈನ ಇಂಟರ್ ನ್ಯಾಷನಲ್ ಫೈನಾನ್ಶಿಯಲ್ ಸೆಂಟರ್ನಲ್ಲಿರುವ ಬಾಂಬೆ ಬಾರೋ ಎನ್ನುವ ಐಷಾರಾಮಿ ಹೋಟೆಲ್ನ ಲ್ಲಿ ಈ ದುಬಾರಿ ಬಿಯಿಯಾನಿ ಸಿಗುತ್ತದೆ.
5/ 10
ಅಂದಹಾಗೆಯೇ ಈ ಬಿರಿಯಾನಿ ರಾಯಲ್ ಗೋಲ್ಡ್ ಬಿರಿಯಾನಿ ಎಂದು ಕರೆಸಿಕೊಂಡಿದೆ. ಇನ್ನು ಇದರ ಬೆಲೆ ಬಗ್ಗೆ ಕೇಳಿದರೆ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ.
6/ 10
ಈ ರಾಯಲ್ ಗೋಲ್ಡ್ ಬಿರಿಯಾನಿ ಬೆಲೆ 1000 ಧಿರಮ್ಸ್. ಭಾರತ ರೂಪಾಯಿಗೆ ಹೋಲಿಸಿದರೆ 19,709 ರೂ. 86 ಪೈಸೆ.
7/ 10
ಇದು 3 ಕೆ.ಜಿ ತೂಕವಿದ್ದು, ದೊಡ್ಡದಾದ ಗೋಲ್ಡನ್ ಮೆಟಾಲಿಕ್ ಪ್ಲೇಟ್ನಲ್ಲಿ ಅಲಂಕರಿಸಲಾಗುತ್ತದೆ. ಇದರಲ್ಲಿ ಚಿಕನ್ ಬಿರಿಯಾನಿ ರೈಸ್, ಕೀಮಾ ರೈಸ್, ವೈಟ್ ಮತ್ತು ಕೇಸರಿ ಅಕ್ಕಿ ಸೇರಿದಂತೆ ಮೂರು ಬಗೆಯ ಅನ್ನವಿರುತ್ತದೆ.
8/ 10
ಅದರ ಜೊತೆಗೆ ಆಲೂಗಡ್ಡೆ ಮತ್ತು ಬೇಯಿಸಿದ ಮೊಟ್ಟೆಗಳನ್ನು ಈ ಬಿರಿಯಾನಿಯಲ್ಲಿ ನೀಡಲಾಗುತ್ತದೆ. ಅಷ್ಟು ಮಾತ್ರವಲ್ಲದೆ, ಮೂರು ಬಗೆಯ ಚಿಕನ್ ಗ್ರಿಲ್-ಮಲೈ ಚಿಕನ್, ರಜಪೂತಾನ ಮುರ್ಗ್ ಸುಲಾ, ಚಿಕನ್ ಮೀಟ್ ಬಾಲ್ ನೀಡಲಾಗುತ್ತದೆ.
9/ 10
ಲ್ಯಾಂಬ್ಚಾಪ್ಸ್, ಲ್ಯಾಂಬ್ ಸೀಖ್ ಕಬಾಬ್, ಪುದೀನ, ಹುರಿದ ಗೊಡಂಬಿ, ದಾಳಿಂಬೆ, ನೀರುಳ್ಳಿಯಿಂದ ಅಲಂಕರಿಸಲಾಗುತ್ತದೆ. ಅದರ ಜೊತೆಗೆ ದೊಡ್ಡದಾದ ತಟ್ಟೆಯಲ್ಲಿ ನಿಹಾರಿ ಸಲಾನ್, ಜೋಧಪುರಿ ಸಲಾನ್, ಬಾದಾಮಿ ಸಾಸ್, ದಾಳಿಂಬೆ ರೈತಾ ನೀಡಲಾಗುತ್ತದೆ.
10/ 10
ಈ ಬಿರಿಯಾನಿ ರಾಯಲ್ ಫ್ಯಾಮಿಲಿಗೆ ಹೇಳಿ ಮಾಡಿಸಿದಂತಿದೆ. ಹಾಗಾಗಿ ಬೆಲೆಗೆ ತಕ್ಕಂತೆ ದುಬಾರಿ ಬಿರಿಯಾನಿ ಎನಿಸಿಕೊಂಡಿದೆ. ದುಬೈ ತೆರಳಿದರವರಿಗೆ ಈ ಬಿರಿಯಾನಿ ಸವಿಯಬಹುದಾಗಿದೆ.