Rakul Preet Singh-Jackky Bhagnani: ಬರ್ತ್ ಡೇಯಂದು ಬಾಯ್ಫ್ರೆಂಡ್ ಬಗ್ಗೆ ಬಾಯ್ಬಿಟ್ಟ ನಟಿ ರಾಕುಲ್
ಕನ್ನಡದ ಗಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ ರಾಕುಲ್ ಪ್ರೀತ್ ಸಿಂಗ್ ನಂತರ ಟಾಲಿವುಡ್ ನಲ್ಲಿ ಬಹುಬೇಡಿಯ ನಟಿಯಾದರು. ತೆಲುಗಿನ ಟಾಪ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿರುವ ಗ್ಲ್ಯಾಮರಸ್ ನಟಿ ಇಂದು 31ನೇ ಹುಟ್ಟುಹಬ್ಬದ ಖುಷಿಯಲ್ಲಿದ್ದಾರೆ. ಬರ್ತ್ ಡೇಯಂದೇ ತಮ್ಮ ಲವ್ ಲೈಫ್ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಕನ್ಫರ್ಮ್ ಮಾಡಿದ್ದಾರೆ.
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚಾಗಿ ಮಿಂಚಿನ ನಟಿ ರಾಕುಲ್ , ಬಾಲಿವುಡ್ ಖ್ಯಾತ ನಿರ್ಮಾಪಕನ ಪುತ್ರ-ನಟನೂ ಆಗಿರುವ ಜಾಕಿ ಭಗನಾನಿಯನ್ನು ಪ್ರೀತಿಸುತ್ತಿರುವುದಾಗಿ ತಿಳಿಸಿದ್ದಾರೆ.
2/ 6
ಜಾಕಿ ಭಗನಾನಿ-ರಾಕುಲ್ ಇಬ್ಬರು ಒಂದೇ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ರಿಲೇಷನ್ ಶಿಪನ್ನು ಕನ್ಫರ್ಮ್ ಮಾಡಿದ್ದಾರೆ.
3/ 6
ಜಾಕಿ ಭಗನಾನಿ ಪ್ರೇಯಸಿ ರಾಕುಲ್ ಗೆ ಬರ್ತ್ ಡೇ ವಿಷ್ ಜೊತೆಗೆ ತಾವಿಬ್ಬರು ಪ್ರೀತಿಸುತ್ತಿರುವುದಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.
4/ 6
ರಾಕುಲ್ ಕೂಡ ನನ್ನ ಬರ್ತ್ ಯಂದು ನಂಗೆ ಸಿಕ್ಕಿರುವ ದೊಡ್ಡ ಗಿಫ್ಟ್ ನೀನು ಎಂದು ಜಾಕಿಯ ಬಗ್ಗೆ ಪ್ರೀತಿಯ ಸಾಲುಗಳನ್ನು ಬರೆದಿದ್ದಾರೆ.
5/ 6
ತಾರಾ ಜೋಡಿ ತಮ್ಮ ಪ್ರೀತಿಯನ್ನು ಬಹಿರಂಗಪಡಿಸುತ್ತಿದಂತೆ ಸಾಕಷ್ಟು ತಾರೆಯರು ಶುಭಾಶಯ ಕೋಡಿದ್ದಾರೆ. ನಟಿ ಕೃತಿ ಸನಸ್, ರಾಮ್ ಚರಣ್ ತೇಜಾ ಪತ್ನಿ ಉಪಾಸನ ಸೋಷಿಯಲ್ ಮೀಡಿಯಾದಲ್ಲಿ ವಿಷ್ ಮಾಡಿದ್ದಾರೆ.
6/ 6
ಜಾಕಿ-ರಾಕುಲ್ ಇಬ್ಬರು ಜೊತೆಯಾಗಿ ನಡೆಯುತ್ತಿರುವ ಪೋಟೋ ಮೂಲಕ ಲವ್ ಸ್ಟೋರಿ ಬಿಚ್ಚಿಟ್ಟಿದ್ದು ಸದ್ಯ ಆ ಫೋಟೋ ವೈರಲ್ ಆಗಿದೆ.