Rajkummar Rao-Patralekha Wedding: 11 ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಜೋಡಿ: ಇಲ್ಲಿದೆ ಫೋಟೋ ಅಲ್ಬಂ
ಬಾಲಿವುಡ್ ನಟ ರಾಜ್ ಕುಮಾರ್ ರಾವ್ (Rajkummar Rao) ಮತ್ತು ಪತ್ರಲೇಖಾ (Patralekha) ತಮ್ಮ 11 ವರ್ಷಗಳ ಪ್ರೀತಿಗೆ ಮದುವೆ (Marriage) ಮುದ್ರೆ ಒತ್ತಿದ್ದಾರೆ. ಸೋಮವಾರ ಸಪ್ತಪದಿ ತುಳಿದಿರುವ ಜೋಡಿಯ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಫೋಟೋಗಳಲ್ಲಿ ಜೋಡಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಸೇರಿದಂತೆ ಬಿಟೌನ್ ತಾರೆಯರು ನವದಂಪತಿಗೆ ಶುಭ ಹಾರೈಸುತ್ತಿದ್ದಾರೆ.
ರಾಜ್ ಕುಮಾರ್ ಶ್ವೇತ ಬಣ್ಣದ ಕುರ್ತಾದ ಜೊತೆ ಕೆಂಪು ಪೇಟ ಧರಿಸಿದ್ದಾರೆ. ಇನ್ನು ಪತ್ರಲೇಖಾ ಕೆಂಪು ಬಣ್ಣದ ಡಿಸೈನರ್ ಡ್ರೆಸ್ ಧರಿಸಿ ಕಂಗೊಳಿಸಿದ್ದಾರೆ. ರಾಜ್ ಕುಮಾರ್ ಮದುವೆ ಫೋಟೋ ಶೇರ್ ಮಾಡಿಕೊಂಡ ಒಂದು ಗಂಟೆಯಲ್ಲಿ 10 ಲಲ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.
2/ 5
ವಧು ಪತ್ರಲೇಖಾ ತಮ್ಮ ಚುನರಿ ಬಟ್ಟೆಯಲ್ಲಿ ಸ್ಪೆಷಲ್ ನೋಟ್ ಬರೆದುಕೊಂಡಿದ್ದರು ಎಂದು ವರದಿಯಾಗಿದೆ. ಪತ್ರಲೇಖಾ ಬಂಗಾಳಿ ಭಾಷೆಯಲ್ಲಿ ಪ್ರೀತಿ ತುಂಬಿದ ಈ ಹೃದಯಕ್ಕೆ ನನ್ನನ್ನು ಸಮರ್ಪಿಸಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದರು.
3/ 5
ರಾಜ್ ಕುಮಾರ್ ಸಿಲ್ಕ್ ಬಟ್ಟೆಯಿಂದ ತಯಾರಾದ ಶ್ವೇತ ಕುರ್ತಾ ಜೊತೆಗೆ ಪಿಂಕ್ ದುಪ್ಪಟ್ಟಾ ಹಾಕಿಕೊಂಡಿದ್ದರು. ಇದಕ್ಕೆ ಡ್ರೆಸ್ ಗೆ ರಾಜ್ ಕುಮಾರ್ ಧರಿಸಿದ್ದ ಗಾಢ ಕೆಂಪು ಬಣ್ಣದ ಪೇಟ ಕಂಗೊಳಿಸುತ್ತಿತ್ತು. ಗೆಳತಿ ಪತ್ರಲೇಖಾ ಸಿಂಧೂರ ಇಡುತ್ತಿರುವ ಫೋಟೋ ಹೆಚ್ಚು ವೈರಲ್ ಆಗುತ್ತಿದೆ.
4/ 5
ಕಳೆದ ಕೆಲ ವರ್ಷಗಳಿಂದ ರಾಜ್ ಕುಮಾರ್ ರಾವ್ ಮತ್ತು ಪತ್ರಲೇಖಾ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಆದ್ರೆ ತಾವು ಪ್ರೇಮಿಗಳು ಎಂಬುದನ್ನು ಜೋಡಿ ಹೇಳಿಕೊಂಡಿರಲಿಲ್ಲ. ಆದ್ರೆ ಜೊತೆ ಜೊತೆಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು.
5/ 5
ಮದುವೆಗೆ ಕೇವಲ ಎರಡೂ ಕುಟುಂಬದ ಆಪ್ತರು ಮತ್ತು ಬೆರಳಣಿಕೆಯಷ್ಟು ಸ್ನೇಹಿತರನ್ನು ಮಾತ್ರ ಆಹ್ವಾನಿಸಲಾಗಿತ್ತು. ಮದುವೆ ಹಿಂದಿನ ನಡೆದ ಪಾರ್ಟಿಯಲ್ಲಿ ರಾಜ್ ಕುಮಾರ್ ಗೆಳತಿಗೆ ಮಂಡಿಯೂರಿ ಪ್ರಪೋಸ್ ಮಾಡಿದ್ದರು. ಈ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.