ಭಾರತದಲ್ಲಿ ಈ ವರ್ಷ ಪ್ರವಾಸ ಹೋಗಲು ಅತ್ಯುತ್ತಮ ರಾಜ್ಯ ರಾಜಸ್ಥಾನವಂತೆ. ಹಾಗೆಂದು ಟ್ರಾವಲ್ ಅಂಡ್ ಲೀಷರ್ ಕಂಪನಿ ಹೇಳಿದೆ. ತನ್ನ ಈ ವರ್ಷದ ಇಂಡಿಯಾಸ್ ಬೆಸ್ಟ್ ಅವಾರ್ಡ್ಸ್ 2021 ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಪ್ರವಾಸೋದ್ಯಮಕ್ಕೆ ರಾಜಸ್ಥಾನ ಬೆಸ್ಟ್ ಸ್ಟೇಟ್ ಎಂದು ಪರಿಗಣಿಸಿದೆ.
2/ 6
Travel & Leisure ಪತ್ರಿಕೆ ತನ್ನ ಹತ್ತನೇ ಆವೃತ್ತಿಯ ಇಂಡಿಯಾಸ್ ಬೆಸ್ಟ್ ಅವಾರ್ಡ್ ಪ್ರಕಟಿಸಿದ್ದು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನ ಘೋಷಿಸಿದೆ.
3/ 6
ಪ್ರವಾಸಕ್ಕೆ ರಾಜಸ್ಥಾನಕ್ಕೆ ಅತ್ಯುತ್ತಮ ರಾಜ್ಯ ಎಂದು ಹೇಳಿದೆ. ಹಾಗೆಯೇ, ವಿವಾಹ ಸಮಾರಂಭಗಳಿಗೂ ರಾಜಸ್ಥಾನ ಬೆಸ್ಟ್ ಸ್ಟೇಟ್ ಎನಿಸಿದೆ.
4/ 6
ರಾಜಸ್ಥಾನ ರಾಜ್ಯ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರಶಸ್ತಿಯಿಂದ ಆ ಕೀರ್ತಿಗೆ ಇನ್ನಷ್ಟು ಮಾನ್ಯತೆ ಸಿಕ್ಕಿದಂತಾಗಿದೆ ಎಂದು ರಾಜಸ್ಥಾನ್ ಪ್ರವಾಸೋದ್ಯಮ ಇಲಾಖೆ ಹೇಳಿದೆ.
5/ 6
ಹಲವು ಶತಮಾನಗಳಿಂದಲೂ ರಾಜಸ್ಥಾನ ರಾಜ್ಯವು ತನ್ನ ಅದ್ಭುತ ಪ್ರವಾಸೀ ತಾಣಗಳಿಂದ ಜನರನ್ನ ಸೆಳೆಯಲು ಯಶಸ್ವಿಯಾಗಿದೆ. ಇತ್ತೀಚೆಗೆ ಈ ರಾಜ್ಯದಲ್ಲಿ ಆಗಿರುವ ಮೂಲಸೌಕರ್ಯ ವೃದ್ಧಿ ಜನರನ್ನ ಇನ್ನಷ್ಟು ಆಕರ್ಷಣೆಗೊಳಿಸಿದೆ.
6/ 6
ಟ್ರಾವೆಲ್ ಅಂಡ್ ಲೀಷರ್ ಪತ್ರಿಕೆಯು ಪ್ರವಾಸಿ ತಾಣಗಳ ಬಗ್ಗೆ ಲೇಖನ, ಮಾಹಿತಿ ಇತ್ಯಾದಿಗಳನ್ನ ಪ್ರಕಟಸುತ್ತದೆ. ಪ್ರವಾಸಿಪ್ರಿಯರ ನೆಚ್ಚಿನ ಪತ್ರಿಕೆಗಳಲ್ಲಿ ಅದೂ ಒಂದೆನಿಸಿದೆ.