ಸ್ಯಾಂಡಲ್ವುಡ್ ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಹೃದಯಾಘಾತದಿಂದ ನಿನ್ನೆ (ಅ.29) ನಿಧನರಾಗಿದ್ದಾರೆ. ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಸಹಸ್ರಾರು ಅಭಿಮಾನಿಗಳು ಅಗಲಿದ ಪುನೀತ್ ರಾಜ್ ಕುಮಾರ್ ಅವರ ದರ್ಶನ ಮಾಡುತ್ತಿದ್ದಾರೆ. ನಾನಾ ಊರುಗಳಿಂದ ಬಂದು ಪ್ರೀತಿಯ ನಟ ಅಪ್ಪು ಅಗಲಿಕೆಯನ್ನು ನೋಡಿ ಕಣ್ಣೀರು ಸುರಿಸುತ್ತಿದ್ದಾರೆ. ಸ್ಯಾಂಡಲ್ವುಡ್ (Sandalwood) ತಾರೆಯರು ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪುನೀತ್ ಅಗಲಿಕೆ ಬಗ್ಗೆ ನೋವನ್ನು ಹೊರಹಾಕುತ್ತಿದ್ದಾರೆ.
ಚಿರಂಜೀವಿ ಸರ್ಜಾ ಕೂಡ ಅಕ್ಟೋಬರ್ 17 ರಂದು ಜನಿಸಿದವರು. ಇವರು ಕೂಡ ಹೃದಯಾಘಾತದಿಂದಾಗಿ ಆಸ್ಪತ್ರೆ ಸೇರಿ ಕೊನೆಗೆ ಅಭಿಮಾನಿಗಳಿ ಶಾಕಿಂಗ್ ಸುದ್ದಿ ನೀಡುವ ಮೂಲಕ ಜೂನ್ 7 ರಂದು ಇಹಲೋಕ ತ್ಯಜಿಸಿದರು. ಸಾಕಷ್ಟು ಸಿನಿಮಾ ಮೂಲಕ ಜನಮನಗೆದ್ದ ಚಿರುಗೆ ಫ್ಯಾಮಿಲಿ, ಸ್ನೇಹಿತರು ಮತ್ತು ತಮ್ಮ ಧ್ರುವ ಸರ್ಜಾ ಎಂದರೆ ಬಹಳ ಪ್ರೀತಿ. ಜನರಿಗೆ ಬಹಳ ಹತ್ತಿರವಾಗಿದ್ದ ಚಿರು ಹುಟ್ಟಿದ್ದು ಕೂಡ 17ನೇ ತಾರೀಖು ಎಂಬುದು ನೆನಪಿಸಿಕೊಳ್ಳಬೇಕಾದ ಸಂಗತಿ.
ಹೌದು.ಇಟಲಿಯ ಜನರಿಗೆ 17ನೇ ತಾರೀಖು ಎಂದರೆ ಅಶುಭ ಎಂದು ನಂಬುತ್ತಾರೆ. ಪ್ರತಿ ತಿಂಗಳಿನಲ್ಲಿ 17ನೇ ತಾರೀಖು ಬಂತೆಂದರೆ ಅಂಗಡಿ, ಮಳಿಗೆ ಮುಚ್ಚುತ್ತಾರೆ. ಯಾವ ದುಷ್ಟ ಶಕ್ತಿ ಅಂಗಡಿ ಹೊಕ್ಕ ಬಾರದು ಎಂಬ ನಂಬಿಕೆ ಅವರಲ್ಲಿದೆ. ಮಾಹಿತಿಯಂತೆ ರೋಮನ್ ಸಂಖ್ಯೆ XVII ಅನ್ನು ಮರು-ಜೋಡಿಸಿದಾಗ ‘VIXI’ ಎಂಬ ಪದವೂ ರೂಪುಗೊಂಡಿದೆ. ಅಂದರೆ ಲ್ಯಾಟಿನ್ ಭಾಷೆಯಲ್ಲಿ 'ನನ್ನ ಜೀವನ ಈಗ ಪೂರ್ಣಗೊಂಡಿದೆ' ಎಂಬ ಅರ್ಥ ನೀಡುತ್ತದೆ.