ಪ್ರಸ್ತುತ ಪ್ಲೇಯರ್ಸ್ ಅನೌನ್ಸ್ ಬ್ಯಾಟಲ್ ಗ್ರೌಂಡ್ (ಪಬ್ಜಿ ) ಜನಪ್ರಿಯ ಗೇಮ್ ಆಗಿ ಗುರುತಿಸಿಕೊಂಡಿದೆ. ವಿಶ್ವದಾದ್ಯಂತ ಸಾಕಷ್ಟು ಜನರು ಈ ಗೇಮ್ಗಳ ವ್ಯಸನಿಗಳಾಗಿದ್ದಾರೆ. ಲಾಕ್ಡೌನ್ ಅವಧಿಯಲ್ಲಂತೂ ಪಬ್ಜಿ ಹೆಚ್ಚು ಡೌನ್ಲೋಡ್ ಕಂಡಿದೆ.
2/ 10
ಪಬ್ಜಿ ವ್ಯಸನಕ್ಕೆ ಅನೇಕರು ತುತ್ತಾಗುತ್ತಿದ್ದಾರೆ. ಈಗಾಗಲೇ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ . ಅದರಂತೆ ಜಮ್ಮುನಿನಲ್ಲಿ ಪಬ್ಜಿ ಆಟಗಾರರಿಂದ ವ್ಯಕ್ತಿಯೊಬ್ಬ ಹತನಾಗಿದ್ದಾನೆ.
3/ 10
ಜಮ್ಮುವಿನ ಬಾದಲ್ ಕ್ವಾಜಿಯಾನ್ನಲ್ಲಿ ಈ ಘಟನೆ ನಡೆದಿದೆ. ಹೆಚ್ಚು ಶಬ್ಧ ಮಾಡಬೇಡಿ ಎಂದಿದ್ದಕ್ಕೆ ಸಿಟ್ಟಿಗೆದ್ದ ಪಬ್ಜಿ ಆಟಾಗಾರರು ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ.
4/ 10
ವ್ಯಕ್ತಿಯ ಸಾವಿಗೆ ಕಾರಣರಾದವರು ರಾಜ್ ಕುಮಾರ್, ಬಿಕ್ರಮ್ರ್ ಜೀತ್ ಮತ್ತು ರೋಹಿತ್ ಕುಮಾರ್ ಎಂದು ತಿಳಿದುಬಂದಿದೆ. ಈ ಮೂವರು ಪಬ್ ಆಡುತ್ತಿದ್ದ ವೇಳೆ ಗಟ್ಟಿಯಾಗಿ ಶಬ್ಧ ಮಾಡುತ್ತಿದ್ದರು. ಇದನ್ನು ಕೇಳಿ ದಲೀಪ್ ರಾಜ್ ಎಂಬಾತ ಹೆಚ್ಚು ಶಬ್ಧ ಮಾಡಬೇಡಿ ಎಂದು ಹೇಳಲು ಬಂದಿದ್ದಾನೆ.
5/ 10
ಅಷ್ಟರಲ್ಲಾಗಲೇ ಈ ನಾಲ್ವರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮೂರು ಜನ ಸೇರಿ ದಲೀಪ್ ರಾಜ್ ಅವರಿಗೆ ಹೊಡೆದಿದ್ದಾರೆ. ಪರಿಣಾಮ ದಲೀಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
6/ 10
ಹಿಂದಿನ ದಿನ ದಲೀಪ್ ರಾಜ್ ಪಬ್ಜಿ ಆಡುವಾಗ ಶಬ್ಥ ಮಾಡಬೇಡಿ ಎಂದು ಹಲಗೆಯಲ್ಲಿ ಬಾರಿಸಿದ್ದರು. ಹಾಗಾಗಿ ಅದೇ ಸಿಟ್ಟಿನಿಂದ ಮೂವರು ದಲೀಪ್ ರಾಜ್ ಜೊತೆ ಜಗಳ ಮಾಡಿದ್ದಾರೆ.
7/ 10
ಪಬ್ಜಿ ಆಟಗಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಒಂದೊಂದೆ ಹಿಂಸಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇತ್ತೀಚೆಗೆ ಪಂಜಾಬ್ ಜಲಂಧರ್ ಕಾಲೇಜು ವಿದ್ಯಾರ್ಥಿಯೊಬ್ಬ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದ.
8/ 10
ಪಂಜಾಬ್ನ ಖರಾರ್ನಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಅಜ್ಜನ ಪೆನ್ಶನ್ ದುಡ್ಡು ಎಗರಿಸಿರುವುದು ಘಟನೆ ಬೆಳಕಿಗೆ ಬಂದಿತ್ತು. ಸುಮಾರು 16 ಲಕ್ಷ ರೂ ಪಬ್ಜಿ ಆಡಲು ವ್ಯಯಿಸಿರುವುದು ವಿವಾರ ವೈರಲ್ ಆಗಿತ್ತು.