Deepavali 2021; ವಿದೇಶದಲ್ಲಿ ಪತಿ ಜೊತೆ ದೀಪಾವಳಿ ಅಚರಿಸಿದ ದೇಸಿ ಗರ್ಲ್ ಪ್ರಿಯಾಂಕಾ; ಫೋಟೋಗಳಲ್ಲಿ ನೋಡಿ

ಭಾರತೀಯರು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ದೀಪಾವಳಿ (Priyanak Chopra) ಆಚರಿಸೋದನ್ನು ಮರೆಯಲ್ಲ. ನೆರೆಹೊರೆಲಯಲ್ಲಿ ಭಾರತೀಯರು (Indians) ಇಲ್ಲದಿದ್ದರೂ, ಮನೆ ಮುಂದೆ ರಂಗೋಲಿಯ ಚಿತ್ತಾರ ಬಿಡಿಸಿ, ಹೊಸ ಬಟ್ಟೆ ತೊಟ್ಟು ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ವಿದೇಶಗಳಲ್ಲಿ ಭಾರತೀಯರು ಹಬ್ಬದ ದಿನದಂದು ಒಂದೆಡೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜಿಸುತ್ತಾರೆ. ವಿದೇಶಿ ಹುಡುಗನನ್ನು ಮದುವೆಯಾಗಿರುವ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ (Priyanka Chopra) ಪತಿ ಮನೆಯಲ್ಲಿಯೇ ದೀಪಾವಳಿ ಆಚರಿಸಿದ್ದಾರೆ.

First published:

  • 15

    Deepavali 2021; ವಿದೇಶದಲ್ಲಿ ಪತಿ ಜೊತೆ ದೀಪಾವಳಿ ಅಚರಿಸಿದ ದೇಸಿ ಗರ್ಲ್ ಪ್ರಿಯಾಂಕಾ; ಫೋಟೋಗಳಲ್ಲಿ ನೋಡಿ

    ಮನೆಯಲ್ಲಿ ದೀಪಾವಳಿ ಆಚರಿಸಿರುವ ಫೋಟೋಗಳನ್ನು ಇನ್ ಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ದೀಪಾವಳಿ ಆಚರಣೆಯ ಫೋಟೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ನಿಕ್ ಜೋನಸ್ (Nick Jonas) ಕುಟುಂಬಕ್ಕೆ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಪ್ರಿಯಾಂಕಾ ಹಳದಿ ಬಣ್ಣದ ಸೀರೆ ಮತ್ತು ನಿಕ್ ಶ್ವೇತ ವರ್ಣದ ಕುರ್ತಾ ಧರಿಸಿ ಸಾಂಪ್ರದಾಯಿಕ ಲುಕ್ ನಲ್ಲಿರೋದನ್ನು ಫೋಟೋಗಳಲ್ಲಿ ನೋಡಬಹುದಾಗಿದೆ.

    MORE
    GALLERIES

  • 25

    Deepavali 2021; ವಿದೇಶದಲ್ಲಿ ಪತಿ ಜೊತೆ ದೀಪಾವಳಿ ಅಚರಿಸಿದ ದೇಸಿ ಗರ್ಲ್ ಪ್ರಿಯಾಂಕಾ; ಫೋಟೋಗಳಲ್ಲಿ ನೋಡಿ

    ಫೋಟೋ ಶೇರ್ ಮಾಡಿಕೊಂಡಿರುವ ಪ್ರಿಯಾಂಕಾ, ಯಾ ದೇವೀ ಸರ್ವಭೂತೇಷು ಲಕ್ಷ್ಮೀ ರೂಪೇನ್ ಸಂಸ್ಥಾ । ನಮಸ್ತಸ್ಯ ನಮಸ್ತಸ್ಯ ನಮಸ್ತಸ್ಯ ನಮೋ ನಮಃ ಎಂದು ಬರೆದುಕೊಂಡು ಎಲ್ಲರಿಗೂ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಮನೆಯಲ್ಲಿ ಮಹಾಲಕ್ಷ್ಮಿ ದೇವಿಯ ಪೂಜೆ ಮಾಡಿರುವ ವಿಷಯವನ್ನು ಸಹ ಹಂಚಿಕೊಂಡಿದ್ದಾರೆ.

    MORE
    GALLERIES

  • 35

    Deepavali 2021; ವಿದೇಶದಲ್ಲಿ ಪತಿ ಜೊತೆ ದೀಪಾವಳಿ ಅಚರಿಸಿದ ದೇಸಿ ಗರ್ಲ್ ಪ್ರಿಯಾಂಕಾ; ಫೋಟೋಗಳಲ್ಲಿ ನೋಡಿ

    ಫೋಟೋಗಳಲ್ಲಿ ನಿಕ್ ಮತ್ತು ಪ್ರಿಯಾಂಕಾ ಜೊತೆಯಾಗಿ ದೀಪ ಹಚ್ಚೋದು, ಆರತಿ ಬೆಳಗುತ್ತಿರೋದನ್ನು ಕಾಣಬಹುದು, ಜೋಡಿಯ ಕ್ಯೂಟ್ ಫೋಟೋಗಳು ನೆಟ್ಟಿಗರಿಗೆ ಇಷ್ಟವಾಗಿದ್ದು, ಬೆಸ್ಟ್ ಕಪಲ್, ಕ್ಯೂಟ್ ಪೇರ್ ಅಂತ ಬರೆದು ಮೆಚ್ಚುಗೆ ಸೂಚಿಸುತ್ತಿದ್ದಾರೆ, ನಿಕ್  ಜೋನಸ್  ಜೊತೆ ಮದುವೆಯಾದ ಬಳಿಕ ಪ್ರಿಯಾಂಕಾ ವಿದೇಶದಲ್ಲಿಯೇ ನೆಲೆಸಿದ್ದಾರೆ.

    MORE
    GALLERIES

  • 45

    Deepavali 2021; ವಿದೇಶದಲ್ಲಿ ಪತಿ ಜೊತೆ ದೀಪಾವಳಿ ಅಚರಿಸಿದ ದೇಸಿ ಗರ್ಲ್ ಪ್ರಿಯಾಂಕಾ; ಫೋಟೋಗಳಲ್ಲಿ ನೋಡಿ

    2018 ಡಿಸೆಂಬರ್ 1ರಂದು ಜೋಧಪುರ ನಗರದ ಉಮೈದ್ ಭವನದಲ್ಲಿ ಪ್ರಿಯಾಂಕಾ ಚೋಪ್ರಾ ಮದುವೆಯಾಗಿದ್ದರು. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ನಡೆದಿತ್ತು. ಮದುವೆಗೆ ಕೇವಲ ಅತ್ಯಾಪ್ತರನ್ನು ಮಾತ್ರ ಆಹ್ವಾನಿಸಿತ್ತು. ಸದ್ಯ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ.

    MORE
    GALLERIES

  • 55

    Deepavali 2021; ವಿದೇಶದಲ್ಲಿ ಪತಿ ಜೊತೆ ದೀಪಾವಳಿ ಅಚರಿಸಿದ ದೇಸಿ ಗರ್ಲ್ ಪ್ರಿಯಾಂಕಾ; ಫೋಟೋಗಳಲ್ಲಿ ನೋಡಿ

    ಇದಕ್ಕೂ ಮೊದಲು ಸ್ನೇಹಿತರ ಜೊತೆ ದೀಪಾವಳಿ ಆಚರಿಸಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು.ಈ ಫೋಟೋಗಳಲ್ಲಿ ಟ್ರೆಡಿಷನಲ್ ಲುಕ್ ನಲ್ಲಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ, ಈ ಫೋಟೋಗಳು 8 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿವೆ.

    MORE
    GALLERIES