ಈ ಬಾರಿ ಮಾರ್ಚ್ 8 ರಂದು ಈ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ, ಉತ್ತರಾಖಂಡದಲ್ಲಿರುವ ರುದ್ರಪ್ರಯಾಗದಲ್ಲಿ ಈ ಹಬ್ಬವನ್ನು ಆಚರಿಸೋದಿಲ್ಲ. ಇಲ್ಲಿ 2 ಹಳ್ಳಿಗಳು ಇವೆ. ಅವು ಸುಮಾರು 150 ವರ್ಷಗಳಿಂದ ಹೋಳಿ ಆಚರಿಸುತ್ತಿಲ್ಲ. ಗ್ರಾಮದ ಸ್ಥಳೀಯ ದೇವತೆಯಾದ ತ್ರಿಪುರ ಸುಂದರಿ ಶಬ್ದವನ್ನು ಇಷ್ಟಪಡುವುದಿಲ್ಲ ಎಂದು ನಂಬುತ್ತಾರೆ. ಈ ಕಾರಣದಿಂದಲೇ ಗ್ರಾಮಸ್ಥರು ಗದ್ದಲದ ಹಬ್ಬಗಳನ್ನು ಆಚರಿಸುವುದನ್ನು ನಿಷೇಧಿಸಿದ್ದಾರೆ. ಅಲಕನಂದಾ ಮತ್ತು ಮಂದಾಕಿನಿ ನದಿಗಳು ಸಂಗಮಿಸುವ ಸ್ಥಳ ರುದ್ರಪ್ರಯಾಗ.