ದೇಶ ಸುತ್ತಬೇಕು ಮತ್ತು ಕೋಶ ಓದಬೇಕು ಎಂಬ ಮಾತಿದೆ. ಪ್ರತಿಯೊಂದು ದೇಶಗಳಲ್ಲಿ ಆಚಾರ, ವಿಚಾರಗಳು ವಿಭಿನ್ನವಾಗಿರುತ್ತದೆ. ಮಾತ್ರವಲ್ಲದೆ ಭೌಗೋಳಿಕ ನೆಲೆಯಲ್ಲಿ ಗಮನಿಸುದಾದರೆ ಅಲ್ಲಿನ ಆಡುಗೆ, ಮಾತನಾಡುವ ಭಾಷೆ, ವಿವಾಹ, ಆಚರಿಸುವ ಪದ್ಧತಿಗಳಲ್ಲಿ ವ್ಯತ್ಯಾಸ ಕಾಣಬಹುದು. ವಿವಿಧ ದೇಶಗಳನ್ನು ಇಣುಕಿ ನೋಡುತ್ತಿದ್ದಂತೆ ಅಲ್ಲಿನ ಸೂಕ್ಷ್ಮ ವಿಚಾರಗಳು ಬೆಳಕಿಗೆ ಬರುತ್ತದೆ.
ಅಂದಹಾಗೆಯೇ ಈ ಜನಾಂಗದಲ್ಲಿ 3800 ಮುಂದಿಯಿದ್ದಾರೆ. ಪಾಕಿಸ್ತಾನದ ಖೈಬರ್-ಪಖ್ತುಂಕ್ವಾ ಪ್ರಾಂತ್ಯದ ಚಿತ್ರಾಲ್ ಕಣಿವೆಯ ರಾಂಬೂರ್, ಬಿರಿರ್ ಮತ್ತು ಬಂಬುರೇಟ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಪಾಕಿಸ್ತಾನದ ಅಲ್ಪಸಂಖ್ಯಾತರಲ್ಲಿ ಈ ಜನಾಂಗ ಕೂಡ ಸೇರಿದೆ. ಇವರು ಹಳೆಯ ಪದ್ಧತಿಗಳನ್ನು ಈಗಲೂ ಅನುಸರಿಸುತ್ತಾ ಬಂದಿದ್ದಾರೆ. ಮಾತ್ರವಲ್ಲದೆ, ಇವರ ಆಚಾರ, ವಿಚಾರಗಳು ವಿಭಿನ್ನವಾಗಿದೆ.