ಇಲ್ಲಿ ವಾಸಿಸುತ್ತಿರುವ ಮಹಿಳೆಯ ಹೆಸರು ಎಲ್ಸಿ ಆಯ್ಲರ್. ಇದೀಗ ಅವರ ವಯಸ್ಸು ಸುಮಾರು 86 ವರ್ಷ. ಈ ಗ್ರಾಮದ ಎಲ್ಲ ಕೆಲಸಗಳನ್ನು ಎಲ್ಸಿಯೇ ಮಾಡುತ್ತಾಳೆ. ಅವಳು ಈ ಗ್ರಾಮದಲ್ಲಿ ಬಾರ್ಟೆಂಡರ್ ಆಗಿ ಕೆಲಸ ಮಾಡುತ್ತಾಳೆ ಮತ್ತು ಸ್ವತಃ ಈ ಗ್ರಾಮದ ಮೇಯರ್ ಕೂಡ ಆಗಿದ್ದಾಳೆ. ಮೊದಲು ಇಲ್ಲಿ ತನ್ನ ಪತಿಯೊಂದಿಗೆ ವಾಸವಾಗಿದ್ದಳು. ಆದರೆ ಆಕೆಯ ಪತಿಯ ಸಾವಿನ ನಂತರ, ಎಲ್ಸಿ ಒಂಟಿಯಾಗಿದ್ದಾಳೆ.
ಮೊನೊವಿ ಗ್ರಾಮವು 54 ಹೆಕ್ಟೇರ್ಗಳಲ್ಲಿ ಹರಡಿದೆ. ವರದಿಗಳ ಪ್ರಕಾರ, 1930 ರವರೆಗೆ ಸುಮಾರು 150 ಜನರು ಈ ಗ್ರಾಮದಲ್ಲಿ ವಾಸಿಸುತ್ತಿದ್ದರು. ಆದರೆ ಕ್ರಮೇಣ ಇಲ್ಲಿಯ ಜನ ಹೊರಗೆ ಹೋದರು ನಂತರ ಜನರ ಸಂಖ್ಯೆ ಕಡಿಮೆಯಾಯಿತು. 1980 ರ ಹೊತ್ತಿಗೆ, ಇಲ್ಲಿ ಕೇವಲ 18 ಜನರು ಉಳಿದಿದ್ದರು. ಕ್ರಮೇಣ ಸಂಖ್ಯೆ ಮತ್ತಷ್ಟು ಕಡಿಮೆಯಾಯಿತು ಮತ್ತು ಈಗ ಅನೇಕ ವರ್ಷಗಳಿಂದ ಇಲ್ಲಿ ಒಬ್ಬ ಮಹಿಳೆ ಮಾತ್ರ ಉಳಿದುಕೊಂಡಿದ್ದಾಳೆ.