ಅತಿಥಿ ಸತ್ಕಾರ ಸರಿಯಾಗ್ಬೇಕು ಅಂದ್ರೆ ಹೆಂಡತಿ ಒಂದು ರಾತ್ರಿ ಅವನೊಂದಿಗೆ ಇರಬೇಕು!
Ovazimba tribes: ಈ ಜನಾಂಗದವರಲ್ಲಿ ಹುಡುಗಿಯರು ಪ್ರೌಢವ್ಯವಸ್ಥೆಗೆ ಬಂದಾಗ ತಂದೆ ಆಯ್ಕೆ ಮಾಡಿದ ಪುರುಷನ್ನು ವಿವಾಹವಾಗಬೇಕು. ಒವಹಿಂಬಾ ಮತ್ತು ಒವಾಜಿಂಬಾ ಬುಡಕ್ಟಟು ಜನಾಂಗದವರು ಕೆಂಪು ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾರೆ. ಇದು ಭೂಮಿ ಮತ್ತು ರಕ್ತವನ್ನು ಸೂಚಿಸುತ್ತದೆ ಎಂಬ ನಂಬಿಕೆ.
ಉತ್ತರ ನಮೀವಿಯಾದ ಕುನೆನೆ ಮತ್ತು ಓಮುನಾಡಿ ಪ್ರದೇಶದಲ್ಲಿ ವಾಸಿಸುವ ಒವಹಿಂಬಾ ಮತ್ತು ಒವಾಜಿಂಬಾ ಬುಡಕ್ಟಟು ಜನಾಂಗ ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿದ್ದಾರೆ. ಇವರ ಆಚಾರ-ವಿಚಾರ ಬಾರಿ ಭಿನ್ನವಾಗಿದ್ದು, ಕೆಲವೊಂದು ವಿಚಾರಗಳು ಅಚ್ಚರಿಗೂ ಕಾರಣವಾಗಿವೆ.
2/ 8
ಸುಮಾರು 50 ಸಾವಿರದಷ್ಟು ಒವಹಿಂಬಾ ಮತ್ತು ಒವಾಜಿಂಬಾ ಬುಡಕ್ಟಟು ಜನಾಂಗ ವಾಸಿಸುತ್ತಿದ್ದಾರೆ. ಮಹಿಳೆಯರು ಪ್ರತಿದಿನ ಮಕ್ಕಳ ಪಾಲನೆ ಪೋಷಣೆ ಮತ್ತು ಹಸುಗಳ ಹಾಲು ಕರೆಯುವುದು, ಇನ್ನಿತರ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಾರೆ.
3/ 8
ಪುರುಷರು ಬೇಟೆಯಾಡಲು ತೆರಳುತ್ತಾರೆ. ಹೆಚ್ಚು ದಿನಗಳ ಕಾಲ ಬೇಟೆಯಲ್ಲೇ ಸಮಯ ಕಳೆಯುತ್ತಾರೆ. ಅತಿ ಹೆಚ್ಚು ದನವನ್ನು ಹೊಂದಿದವರು ಶ್ರೀಮಂತ ವ್ಯಕ್ತಿಯೆಂದು ಇವರ ನಂಬಿಕೆ. ಒವಹಿಂಬಾ ಮತ್ತು ಒವಾಜಿಂಬಾ ಬುಡಕ್ಟಟು ಜನಾಂಗದಲ್ಲಿ ಬಹುಪತ್ನಿತ್ವವಿದೆ.
4/ 8
ಈ ಜನಾಂಗದವರಲ್ಲಿ ಹುಡುಗಿಯರು ಪ್ರೌಢವ್ಯವಸ್ಥೆಗೆ ಬಂದಾಗ ತಂದೆ ಆಯ್ಕೆ ಮಾಡಿದ ಪುರುಷನ್ನು ವಿವಾಹವಾಗಬೇಕು. ಒವಹಿಂಬಾ ಮತ್ತು ಒವಾಜಿಂಬಾ ಬುಡಕ್ಟಟು ಜನಾಂಗದವರು ಕೆಂಪು ಬಣ್ಣವನ್ನು ಹೆಚ್ಚು ಇಷ್ಟಪಡುತ್ತಾರೆ. ಇದು ಭೂಮಿ ಮತ್ತು ರಕ್ತವನ್ನು ಸೂಚಿಸುತ್ತದೆ ಎಂಬ ನಂಬಿಕೆ.
5/ 8
ಮಹಿಳೆಯರು ಸ್ನಾನ ಮಾಡುವುದಿಲ್ಲ. ಬದಲಿಗೆ ಹೊಗೆ ಹಾಕಿ ನಂತರ ಚರ್ಮದ ಮೇಲೆ ಕೆಂಪು ಬಣ್ಣವನ್ನು ಮತ್ತು ಆರೊಮ್ಯಾಟಿಕ್ ರಾಳಗಳನ್ನು ಹಚ್ಚುತ್ತಾರೆ.
6/ 8
ಒವಹಿಂಬಾ ಮತ್ತು ಒವಾಜಿಂಬಾ ಬುಡಕ್ಟಟು ಜನಾಂಗ ಅತಿಥಿಗಳಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಯಾರಾದರು ಅತಿಥಿಗಳು ಮನೆಗೆ ಬಂದಾಗ ಒಕುಜೆಪಿಸಾ ಓಮುಕಾಜೆಂಡು ಆತಿಥ್ಯ ನೀಡುವ ಮೂಲಕ ಅವವನ್ನು ಸಂತೋಷ ಪಡಿಸಬೇಕು.
7/ 8
ಒಕುಜೆಪಿಸಾ ಓಮುಕಾಜೆಂಡು ಎಂದರೆ ಮನೆ ಮಾಲೀಕ ಅತಿಥಿಯನ್ನು ಸಂತೋಷವಾಗಿರಿಸಲು ತನ್ನ ಮಡದಿಯನ್ನು ಆತನಿಗೆ ಒಂದು ರಾತ್ರಿ ಕಳೆಯಲು ಅವಕಾಶ ಮಾಡಿಕೊಡಬೇಕು. ಮನೆಯಲ್ಲಿ ಒಂದೇ ಕೊಠಡಿ ಇದ್ದರೆ. ಮಾಲೀಕ ಒಬ್ಬನೇ ಹೊರಗೆ ಮಲಗಬೇಕು.
8/ 8
ಇಂತಹ ಸಂಸ್ಕೃತಿ ಅವರಲ್ಲಿ ಅಸೂಯೆ ಕಡಿಮೆ ಮಾಡುತ್ತದೆ ಮತ್ತು ಸಂಬಂಧಗಳನ್ನು ಬೆಳೆಸುತ್ತದೆ ಎಂದು ನಂಬಿದ್ದಾರೆ. ಇಲ್ಲಿ ಮಹಿಳೆಯರಿಗೆ ನಿರ್ಧಾರ ತೆಗೆದುಕೊಳ್ಳುವ ಅವಕಾಶ ಕಡಿಮೆ. ಪತಿಯ ಬೇಡಿಕೆಗೆ ಹೆಚ್ಚು ಮುಖ್ಯವಾಗುತ್ತದೆ. ಮಹಿಳೆಗೆ ಅತಿಥಿಯೊಂದಿಗೆ ಮಲಗಲು ನಿರಾಕರಿಸುವ ಅವಕಾಶವಿದೆ. ಆದರೆ ಅದೇ ಕೋಣೆಯಲ್ಲಿ ಮಲಗಬೇಕು.