ಇಂದು ನನ್ನ ಜೀವನ ಅತ್ಯಂತ ಪ್ರಮುಖವಾದ ದಿನ. ಅಸರ್ ಮತ್ತು ನಾನು ಮದುವೆ ಬಂಧನದಲ್ಲಿ ಬಂಧಿಯಾಗುತ್ತಿದ್ದೇವೆ. ಬರ್ಮಿಂಗ್ ಹ್ಯಾಂನ ನಮ್ಮ ಮನೆಯಲ್ಲಿ ಸರಳವಾಗಿ ಮದುವೆ ನಡೆದಿದೆ. ಈ ವೇಳೆ ಕುಟುಂಬಸ್ಥರು ಮಾತ್ರ ಉಪಸ್ಥಿತರಿದ್ದರು. ನಿಮ್ಮ ಆಶೀರ್ವಾದ ಮತ್ತು ಹಾರೈಕೆ ನಮ್ಮ ಮೇಲಿರಲಿ. ನಾವು ಜೊತೆಯಾಗಿ ಜೀವನ ನಡೆಸಲು ಉತ್ಸಾಹಿತರಾಗಿದ್ದೇವೆ ಎಂದು ಮಲಾಲಾ ಹೇಳಿಕೊಂಡಿದ್ದಾರೆ.
24 ವರ್ಷದ ಮಲಾಲಾ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಧ್ಚನಿ ಎತ್ತಿದ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತೆ. ಅತಿ ಚಿಕ್ಕ ವಯಸ್ಸಿನಲ್ಲಿ ನೊಬೆಲ್ ಶಾಂತಿ ಪುರಸ್ಕಾರ ಪಡೆದ ಮೊದಲಿಗರು. 2012ರಲ್ಲಿ ಮಲಾಲಾ ಬಾಲಕಿಯರಿಗೂ ಶಿಕ್ಷಣ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ್ದಕ್ಕೆ ತಾಲಿಬಾನಿಗಳು ಮಲಾಲಾ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ಸಮಯದಲ್ಲಿ ಮಲಾಲಾ ಜಾಗತಿಕವಾಗಿ ಗುರುತಿಸಿಕೊಂಡಿದ್ದರು.