ಅತ್ಯಂತ ರುಚಿಕರವಾದ ಈ ಹಣ್ಣನ್ನು ಉಪ್ಪಿನಕಾಯಿ ಐಸ್ ಕ್ರೀಮ್ ಸ್ಮೂಥಿಗಳು (Smoothies) ಮಾವಿನ ಶೇಕ್ಗಳು, ಚಾಕಲೇಟ್, ಜ್ಯೂಸ್ ಹೀಗೆ ವಿವಿಧ ರೀತಿಯಾದ ಪಾಕ ಪದ್ಧತಿಗಳಲ್ಲಿ ಬಳಸಲಾಗುತ್ತದೆ. ಇದು ವಿಶೇಷವಾಗಿ ವಿಟಮಿನ್ ಎ, ಸಿ ಮತ್ತು ಡಿ ಗಳ ಉತ್ತಮ ಮೂಲವಾಗಿದೆ. ಈ ಕಾರಣದಿಂದಾಗಿ, ದೇಹದ ರೋಗನಿರೋಧಕ ಶಕ್ತಿಯು ಉತ್ತಮಗೊಳ್ಳುತ್ತದೆ.