ತಯಾರಿಸುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ನೀರು ಇಟ್ಟು ಬಿಸಿ ಮಾಡಿ. ಸ್ವಲ್ಪ ಉಪ್ಪು ಹಾಕಿ, ನೀರು ಉಗುರು ಬೆಚ್ಚಗಾದರೆ ಸಾಕು. ನೀರು ಬಿಸಿಯಾಗುತ್ತಿದ್ದಂತೆ ಅದಕ್ಕೆ ದ್ರಾಕ್ಷಿಯನ್ನು ಹಾಕಿ. ಯಾಕೆಂದರೆ ದ್ರಾಕ್ಷಿ ಬೆಳೆಸುವ ಸಮಯದಲ್ಲಿ ಕೆಮಿಕಲ್ ಬಳಸಲಾಗುತ್ತದೆ. ಆದ್ದರಿಂದ ಬಿಸಿ ನೀರಿನಲ್ಲಿ ಹಾಕಿ ದ್ರಾಕ್ಷಿಯನ್ನು ಚೆನ್ನಾಗಿ ತೊಳೆಯಿರಿ. ಅರ್ಧ ಗಂಟೆಗಳಷ್ಟು ದ್ರಾಕ್ಷಿಯನ್ನು ಬಿಸಿ ನೀರಿನಲ್ಲಿ ನೆನೆಸಿಡಬೇಕು. ಆಗ ಕೆಮಿಕಲ್ ಹೋಗುತ್ತದೆ.