2.ಪೃಥ್ವಿರಾಜ್ ಚೌಹಾಣ್ ಮತ್ತ ಸಂಯುಕ್ತ : ಇತಿಹಾಸದಲ್ಲಿ ಅಚ್ಚಳಿಯಾಗಿ ಉಳಿದ ಕಥೆಗಳಲ್ಲಿ ಸಂಯುಕ್ತ ಮತ್ತು ಪೃಥ್ವಿರಾಜ್ ಚೌಹಾನ್ ಕಥೆಯು ಒಂದು. ಇವರಿಬ್ಬರ ಪ್ರೀತಿ ತಂದೆ ಜಯಚಂದ್ ಕಾನೌಜ್ಗೆ ತಿಳಿದು ಸಂಯುಕ್ತಳನ್ನು ಸಯಂವರದ ಮೂಲಕ ಮದುವೆ ಮಾಡಲು ಮುಂದಾಗುತ್ತಾನೆ. ಮದುವೆಗೆ ಏಲ್ಲಾ ರಾಜರುಗಳ ಸಮೇತ ಪೃಥ್ವಿರಾಜ್ ಚೌಹಾನನ್ನು ಆಹ್ವಾನಿಸಲಾಗಿತ್ತು. ಆದರೆ ಚೌಹಾನನ್ನು ಮಾತ್ರ ಅವಮಾನಿಸಲೆಂದು ದ್ವಾರ ಪಾಲಕನಾಗಿ ನೇಮಿಸಿದ್ದರು. ಆದರೆ ಸಂಯುಕ್ತ ತನ್ನ ಹೂವಿನ ಹಾರವನ್ನು ಪೃಥ್ವಿರಾಜ್ ಚೌಹಾನನ ಮೇಲೆ ಹಾಕಿ ಪ್ರೀತಿಯ ಸಾರ್ಥಕತೆ ಮೆರೆದಳು.