My Second Wife: ಈ ರೆಸ್ಟೋರೆಂಟ್ ಹೆಸರು ‘ನನ್ನ 2ನೇ ಹೆಂಡತಿ’: ಮೊದಲ ಪತ್ನಿ ಫುಲ್ ಗರಂ!
ಅಂಗಡಿ, ರೆಸ್ಟೋರೆಂಟ್ ಗಳನ್ನು ತೆರೆಯುವವರು ತಮಗೆ ಇಷ್ಟವಾದ ಹೆಸರುಗಳನ್ನು ಇಡುತ್ತಾರೆ. ಕೆಲವರು ದೇವರ ಹೆಸರು ಇಟ್ಟರೆ, ಕೆಲವರು ತಮ್ಮ ಕುಟುಂಬದವರ ಹೆಸರನ್ನು ಇಡುತ್ತಾರೆ. ಗ್ರಾಹಕರನ್ನು ಸೆಳೆಯರು ಕೆಲವೊಮ್ಮೆ ಕ್ಯಾಚಿ ಹೆಸರುಗಳನ್ನು ಸಹ ಇಡುತ್ತಾರೆ. ನಮ್ಮಲ್ಲೂ ಕೆಲ ದಿನಗಳ ಹಿಂದೆ ‘ಬಾ ಗುರು ಕಾಫಿ ಕುಡಿ’ ಎಂಬ ಹೆಸರಿನ ಅಂಗಡಿ ಸುದ್ದಿಯಾಗಿತ್ತು.
ಇದೇ ರೀತಿ ಸಖತ್ ಡಿಫರೆಂಡ್ ಅನ್ನೋ ರೀತಿಯ ಹೆಸರಿನಿಂದ ಇಲ್ಲೊಂದು ರೆಸ್ಟೋರೆಂಟ್ ಸದ್ದು ಮಾಡುತ್ತಿದೆ. ಈ ರೆಸ್ಟೋರೆಂಡ್ ಹೆಸರು ‘ನನ್ನ 2ನೇ ಹೆಂಡತಿ’. ಶಾಕ್ ಆದರೂ ಇದು ಸತ್ಯ. ಈ ವಿಚಿತ್ರ ಹೆಸರಿನ ರೆಸ್ಟೋರೆಂಟ್ ಇರೋದು ಪಾಟ್ನಾ ಸಮೀಪ.
2/ 8
ಪಾಟ್ನಾದಿಂದ 70 ಕಿಮೀ ದೂರದಲ್ಲಿರುವ ಬರ್ಹ್ ಥಾನಾ ರಸ್ತೆಯಲ್ಲಿರುವ ಸವೇರಾ ಸಿನಿಮಾ ಹಾಲ್ ಬಳಿ 'ಮೈ ಸೆಕೆಂಡ್ ವೈಫ್ ಫ್ಯಾಮಿಲಿ ರೆಸ್ಟೋರೆಂಟ್’ ಇದೆ. ಈ ರೆಸ್ಟೋರೆಂಟ್ ನಲ್ಲಿ ಚಹಾದ ಜೊತೆಗೆ ಬರ್ಗರ್ ಜೊತೆಗೆ ಅನೇಕ ಆಹಾರ ಮತ್ತು ಪಾನೀಯಗಳು ಲಭ್ಯವಿದೆ.
3/ 8
ಈ ರಸ್ತೆಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರು ಒಮ್ಮೆ ಈ ರೆಸ್ಟೋರೆಂಟ್ ಹೆಸರು ನೋಡಿ ಹುಬ್ಬೇರಿಸುತ್ತಾರೆ. ಅಯ್ಯೋ ಹೀಗೆಲ್ಲಾ 2ನೇ ಹೆಂಡತಿ ಹೆಸರನ್ನು ಇಡ್ತಾರಾ? ಏನಿದು ವಿಚಿತ್ರ ಅಂತ ಜನ ರೆಸ್ಟೋರೆಂಟ್ ಮಾಲೀಕರನ್ನು ವಿಚಾರಿಸುತ್ತಾರಂತೆ.
4/ 8
ತನ್ನ ರೆಸ್ಟೋರೆಂಟ್ ಹೆಸರಿನ ಹಿಂದಿರುವ ಸ್ವಾರಸ್ಯಕರ ಕಥೆಯನ್ನು ಮಾಲೀಕ ರಂಜಿತ್ ಕುಮಾರ್ ಖುದ್ದು ಹೇಳಿದ್ದಾರೆ. ಇವರು ಮನೆಗಿಂತ ರೆಸ್ಟೋರೆಂಟ್ ನಲ್ಲೇ ಹೆಚ್ಚು ಸಮಯ ಕಳೆಯುತ್ತಾರೆ. ಮುಂಜಾನೆಯಿಂದ ತಡರಾತ್ರಿಯವರೆಗೂ ಇಲ್ಲೇ ಇರಬೇಕಾಗುತ್ತದೆ. ಅದಕ್ಕಾಗಿಯೇ ಅವರು ತಮ್ಮ ರೆಸ್ಟೋರೆಂಟ್ ಗೆ 'ಮೈ ಸೆಕೆಂಡ್ ವೈಫ್' ಎಂದು ಹೆಸರಿಸಿದ್ದಾರೆ.
5/ 8
ಒಬ್ಬ ಹೆಂಡತಿ ಮನೆಯಲ್ಲಿದ್ದರೆ, ಇನ್ನೊಬ್ಬಳು ಈ ರೆಸ್ಟೋರೆಂಟ್ ಎಂದು ರಂಜಿತ್ ಕುಮಾರ್ ನಗುತ್ತಾರೆ. ಇನ್ನು ಈ ರೆಸ್ಟೋರೆಂಟ್ ತೆರೆಯುವ ವೇಳೆ ಅನೇಕರು ಈ ರೀತಿಯ ಹೆಸರೆಲ್ಲಾ ಇಡಬೇಡಿ ಎಂದು ಸಲಹೆ ಕೊಟ್ಟಿದ್ದರಂತೆ.
6/ 8
ರಂಜಿತ್ ಕುಮಾರ್ ಅವರ ಪತ್ನಿ ಸುಷ್ಮಾ ಕುಮಾರಿ ಕೂಡ ಪತ್ನಿಯೊಂದಿಗೆ ವಾಸಿಸುವಾಗ ಎರಡನೇ ಹೆಂಡತಿ ಅಂತೆಲ್ಲಾ ಹೆಸರನ್ನು ಇಡಬಾರದು ಎಂದು ತಾಕೀತು ಮಾಡಿದ್ದರಂತೆ.
7/ 8
ಆದರೆ ರಂಜಿತ್ ಮಾತ್ರ ತಮ್ಮ 2ನೇ ಹೆಂಡತಿ ಹೆಸರಿನ ಮೋಹದಿಂದ ಹಿಂದೆ ಸರಿದಿಲ್ಲ. ಬೇರೆಯವರ ಮಾತಿಗೂ ಕಿವಿಗೊಡದೆ ಇಂಥ ಹೆಸರು ಇಟ್ಟಿದ್ದಾರೆ. ಇದರಿಂದಲೇ ಫೇಮಸ್ ಆಗಿದ್ದಾರೆ. ರೆಸ್ಟೋರೆಂಟ್ ಬ್ಯುಸಿನೆಸ್ ಕೂಡ ಚೆನ್ನಾಗಿದೆ.
8/ 8
ಇಷ್ಟೇ ಅಲ್ಲದೇ ನಿಜವಾಗಿಯೂ 2ನೇ ಮದುವೆಯಾದವರಿಗೆ ಈ ರೆಸ್ಟೋರೆಂಟ್ ನಲ್ಲಿ ಡಿಸ್ಕೌಂಟ್ ಬೇರೆ ಇದೆಯಂತೆ. ಮಾಲೀಕರ ಬಳಿ ನಾನು 2ನೇ ಹೆಂಡತಿ, 2ನೇ ಗಂಡ ಅಂತ ಹೇಳಿಕೊಂಡರೆ.. ಬಿಲ್ ಮೇಲೆ ರಿಯಾಯಿತಿ ಕೊಡ್ತಾರಂತೆ.