Culture: ಪತಿಯ ಶವದ ಜೊತೆಗೆ ಮಲಗಬೇಕು.. ಜಗಳದ ಬಳಿಕ ಸೆಕ್ಸ್ ಮಾಡಬೇಕು! ಇದೊಂದು ಆಚರಣೆ ಕಂಡ್ರಿ
Luo Tribe: ಭಾರತ ಮಾತ್ರವಲ್ಲ ವಿದೇಶಗಳಲ್ಲಿ ವಿಲಕ್ಷಣ ಪದ್ದತಿಗಳಿವೆ ಅದರಲ್ಲೂ ಪಚ್ಚಿಮ ಕೀನ್ಯಾ ಲುವೋ ಬುಡಕಟ್ಟಿನ ಜನರು ವಿಚಿತ್ರ ಸಂಪ್ರದಾಯವನ್ನು ಆಚರಿಸುತ್ತಾರೆ. ಇವರ ಕೆಲವೊಂದು ಪದ್ದತಿಯನ್ನು ಕೇಳಿದಾಗಲೇ ಅಚ್ಚರಿಯಾಗುತ್ತದೆ. ಏಕೆಂದರೆ ಕಲ್ಪನೆಗೂ ನಿಲುಕದ್ದಾಗಿದೆ.
ವಿಶ್ವದ ಮೂಲೆ ಮೂಲೆ ಸುತ್ತಾಡಿದರೆ ಆ ದೇಶಗಳ ಸಂಸ್ಕೃತಿ, ಪದ್ಧತಿ ಆಚಾರ ವಿಚಾರದ ಬಗ್ಗೆ ತಿಳಿಯುತ್ತದೆ. ಭಾರತವನ್ನೇ ಗಮನಿಸಿದಾಗ ಇಲ್ಲಿ ನಾನಾ ಜಾತಿಗಳಿವೆ. ಒಂದಕ್ಕಿಂತ ಒಂದು ಭಿನ್ನವಾದ ಸಂಸ್ಕತಿ, ಪದ್ಧತಿಯನ್ನು ಆಚರಿಸುವ ಜನರಿದ್ದಾರೆ.
2/ 7
ಹಬ್ಬ, ಮದುವೆ, ಜಾತ್ರೆ, ದೇವರು ಹೀಗೆ ವಿಭಿನ್ನವಾದ ಸಂಸ್ಕೃತಿಗಳನ್ನು ಭಾರತದಲ್ಲಿ ಕಣ್ತುಂಬಿಕೊಳ್ಳಬಹುದು. ಆದರೆ ಕೆಲವೊಂದು ರಾಜ್ಯದ ಮತ್ತು ಪ್ರದೇಶಗಳಲ್ಲಿ ವಿಲಕ್ಷಣ ಪದ್ದಗಳನ್ನು ಆಚರಿಸುವವರಿದ್ದಾರೆ. ಕೆಲವು ಸಂಗತಿಗಳು ಬೆಳಕಿಗೆ ಬಂದರೆ ಇನ್ನು ಕೆಲವು ಮರೆಯಲ್ಲೇ ಇರುತ್ತದೆ.
3/ 7
ಭಾರತ ಮಾತ್ರವಲ್ಲ ವಿದೇಶಗಳಲ್ಲಿ ವಿಲಕ್ಷಣ ಪದ್ದತಿಗಳಿವೆ ಅದರಲ್ಲೂ ಪಚ್ಚಿಮ ಕೀನ್ಯಾ ಲುವೋ ಬುಡಕಟ್ಟಿನ ಜನರು ವಿಚಿತ್ರ ಸಂಪ್ರದಾಯವನ್ನು ಆಚರಿಸುತ್ತಾರೆ. ಇವರ ಕೆಲವೊಂದು ಪದ್ದತಿಯನ್ನು ಕೇಳಿದಾಗಲೇ ಅಚ್ಚರಿಯಾಗುತ್ತದೆ. ಏಕೆಂದರೆ ಕಲ್ಪನೆಗೂ ನಿಲುಕದ್ದಾಗಿದೆ.
4/ 7
ಲುವೋ ಬುಡಕಟ್ಟಿನ ಜನಾಂಗದಲ್ಲಿ ಪತಿ ಸಾವಿನ ನಂತರ ಪತ್ರಿಯ ಶುದ್ಧೀಕರಣ ನಡೆಯುತ್ತದೆ. ಗಂಡ ಸತ್ತ ನಂತರ ಹೆಂಡತಿಯಾದವಳು ಒಂದು ರಾತ್ರಿ ಶವದ ಜೊತೆ ಮಲಗಬೇಕು. ಗಂಡನ ಜೊತೆಗೆ ಸಂಬಂಧ ಬೆಳೆಸಿದಂತೆ ಕಲ್ಪನೆ ಮಾಡಬೇಕು. ಆಗ ಪತಿಯ ಆತ್ಮಕ್ಕೆ ಶಾತಿ ಸಿಗುವುದು ಮಾತ್ರವಲ್ಲದೆ ಪತ್ನಿ ಶುದ್ಧವಾಗುತ್ತಾಳೆ. ಈ ಸಂಪ್ರದಾಯ ಆಚರಿಸಿದ ನಂತರ ಪತ್ನಿ ಬೇರೊಂದು ವಿವಾಹ ಆಗಬಹುದು
5/ 7
ಗಂಡ ಹೆಂಡತಿ ನಡುವೆ ಜಗಳ ನಡೆಯುವುದು ಸಾಮಾನ್ಯ . ಆದರೆ ಒಂದು ವೇಳೆ ಜಗಳವಾದರೆ ಇಬ್ಬರು ಕೋಲಿನಿಂದ ಹೊಡೆದುಕೊಳ್ಳುವಂತಿಲ್ಲ. ಹೀಗೆ ಮಾಡಿದರೆ ಪಾಪ ಅಂಟಿಕೊಳ್ಳುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಲುವೋ ವಿಚಿತ್ರ ಸಂಪ್ರದಾಯವನ್ನು ನಂಬಿ ಬದುಕುತ್ತಿದ್ದಾರೆ.
6/ 7
ಜಗಳದ ಬಳಿಕ ಪತಿ ಮತ್ತು ಪತ್ನಿ ಹಿರಿಯರು ಗಿಡಮೂಲಿಕೆಯನ್ನು ಕುಡಿಯಲು ನೀಡಿತ್ತಾರೆ, ಇದನ್ನು ಸೇವಿಸಿ ಶಾರೀರಿಕ ಸಂಬಂಧ ಬೆಳೆಸಲು ಹೇಳುತ್ತಾರೆ. ಇದರಿಂದ ಇಬ್ಬರ ನಡುವಿನ ಮನಸ್ಥಾಪಗಳು ಕಡಿಮೆಯಾಗುತ್ತದೆ ಎಂಬ ನಂಬಿಕೆ ಲುವೋ ಬುಡಕಟ್ಟಿನಲ್ಲಿದೆ.
7/ 7
ಲುವೋ ಬುಡಕಟ್ಟಿನಲ್ಲಿ ಬಹುಪತ್ನಿತ್ವ ಜಾರಿಯಲ್ಲಿದೆ. ಗಂಡ ಎಷ್ಟು ಜನರನ್ನು ವಿವಾಹವಾಗಬಹುದು. ಇದಕ್ಕೆ ಹೆಂಡತಿಯರು ವಿರೋಧ ವ್ಯಕ್ತಪಡಿಸುವುದಿಲ್ಲ. ಮೊದಲೇ ಹೇಳಿದಂತೆ ಇಷ್ಟು ಮಾತ್ರವಲ್ಲ, ಪ್ರಪಂಚವನ್ನು ಒಂದು ಬಾರಿ ಸುತ್ತಾಡಿದರೆ ಅಲ್ಲಿನ ಸಂಸ್ಕೃತಿ ಮತ್ತು ವಿಲಕ್ಷಣ ಪದ್ಧತಿಗಳ ಬಗ್ಗೆ ತಿಳಿಯುತ್ತದೆ.