Miguel Oliveira: ತಂಗಿಯನ್ನೇ ಮದುವೆಯಾದ ರೇಸರ್ ಮಿಗುಯೆಲ್ ಒಲಿವೇರಾ; 11 ವರ್ಷಗಳ ಲವ್ಸ್ಟೋರಿ ಬಯಲು!
Miguel Oliveira Married Step Sister: MotoGP ತಾರೆ ಮಿಗುಯೆಲ್ ಒಲಿವೇರಾ ತನ್ನ ತಂಗಿಯನ್ನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದಾರೆ. 26 ವರ್ಷದ ಒಲಿವೇರಾ ತನ್ನ ಮಲತಂಗಿಯಾದ ಆಂಡ್ರಿಯಾ ಪಿಮೆಂಟಾರನ್ನು ಮದುವೆಯಾಗಿದ್ದಾರೆ. ತಂಗಿಯೊಂದಿಗಿನ ಸಂಬಂಧವನ್ನು 11 ವರ್ಷಗಳ ಕಾಲ ರಹಸ್ಯವಾಗಿಟ್ಟಿದ್ದರು. ಅಂತಿಮವಾಗಿ ಈಗ ತಮ್ಮ ಸಂಬಂಧವನ್ನು ಬಹಿರಂಗಪಡಿಸಿದದ್ದಾರೆ. ಜೊತೆಗೆ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.
ತನ್ನ ತಂದೆಯ ಎರಡನೇ ಹೆಂಡತಿಯ ಮಗಳನ್ನೇ ಮದುವೆಯಾಗಿದ್ದೇನೆ. ಮಲತಂಗಿಯಾಗಿದ್ದರಿಂದ ಸಂಬಂಧವನ್ನು 11 ವರ್ಷಗಳ ಕಾಲ ಗುಟ್ಟಾಗಿ ಇಡಬೇಕಾಯಿತು ಎಂದು ಪೋರ್ಚುಗೀಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಒಲಿವೇರಾ ಹೇಳಿಕೊಂಡಿದ್ದಾರೆ.
2/ 8
ಕಳೆದ ಬೇಸಿಗೆಯಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷ ಜುಲೈನಲ್ಲಿ ಒಲಿವೇರಾ ಮತ್ತು ಆಂಡ್ರಿಯಾ ವಿವಾಹವಾಗಿದ್ದಾರೆ.
3/ 8
ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ರೇಸರ್ ಪೋಸ್ಟ್ ಮಾಡಿದ್ದರು. 11 ವರ್ಷಗಳ ಮುಚ್ಚಿಟ್ಟಿದ್ದ ಪ್ರೀತಿಯನ್ನು ಮದುವೆಯ ಮೂಲಕ ಬಹಿರಂಗ ಪಡಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದರು.
4/ 8
ನಾನು ಆಂಡ್ರಿಯಾ ಪಿಮೆಂಟಾ ಜೊತೆ ನನ್ನ ಜೀವನ ಕಳೆಯಲು ಇಚ್ಛಿಸುತ್ತೇನೆ ಎಂದು ಮದುವೆಯ ಫೋಟೋವನ್ನು ಹಂಚಿಕೊಂಡಿದ್ದರು.
5/ 8
ಹೊಸದಾಗಿ ಮದುವೆಯಾಗಿರುವ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
6/ 8
ರೇಸರ್ ಅಲ್ಟ್ರಾಸೌಂಡ್ ಮತ್ತು ಬೇಬಿ ಬಂಪ್ ಚಿತ್ರವನ್ನು ಹಂಚಿಕೊಂಡಿದೆ.
7/ 8
ನಮ್ಮ ಜೀವನಕ್ಕೆ ಹೊಸ ಅತಿಥಿಯ ಆಗಮನವಾಗುತ್ತಿದೆ. ಆದಷ್ಟು ಬೇಗ ಮಗುವನ್ನು ಭೇಟಿಯಾಗಲು ಇಬ್ಬರು ಕಾಯುತ್ತಿದ್ದೇವೆ ಎಂದಿದ್ದಾರೆ.
8/ 8
ಪ್ರತಿಭಾನ್ವಿತ ಬೈಕ್ ರೇಸರ್ ಮಲತಂಗಿಯನ್ನೇ ಮದುವೆಯಾಗಿರುವುದ್ದಕ್ಕೆ ಅನೇಕ ವಿರೋಧಗಳನ್ನು, ಟೀಕೆಗಳನ್ನೂ ಎದುರಿಸಬೇಕಾಗಿದೆ.