ದೇವರು ಎಲ್ಲಾ ಕಡೆ ಇರುವುದಕ್ಕೆ ಸಾಧ್ಯವಿಲ್ಲ ಅಂತಾನೆ ತಾಯಿಯನ್ನು ಸೃಷ್ಟಿ ಮಾಡಿದ್ದಾರೆ ಅಂತ ಹೇಳುವ ಮಾತನ್ನು ನಾವು ಕೇಳಿರುತ್ತೇವೆ. ಈ ಮಾತು ತುಂಬಾನೇ ನಿಜ ಕಣ್ರೀ, ತ್ಯಾಗಕ್ಕೆ, ಪ್ರೀತಿಗೆ ಮತ್ತು ವಾತ್ಸಲ್ಯಕ್ಕೆ ಇನ್ನೊಂದು ಹೆಸರೇ ಆ ತಾಯಿ. ಜೀವನ ಪರ್ಯಂತ ಅಪ್ಪ-ಅಮ್ಮನ ಬಗ್ಗೆ, ಒಡಹುಟ್ಟಿದವರ ಬಗ್ಗೆ, ಗಂಡನ ಮನೆಯವರ ಬಗ್ಗೆ ಮತ್ತು ತನ್ನ ಮಕ್ಕಳ ಬಗ್ಗೆ ಆಲೋಚಿಸುವವಳೇ ಆ ತಾಯಿ.