ಯಾರಾದರು ಆತ್ಮೀಯರು ಸತ್ತರೆ ಆ ದುಖಃವನ್ನು ಸಹಿಸಿಕೊಳ್ಳೋದು ಬಲು ಕಷ್ಟ. ಅದರೊಂದಿಗಿನ ಒಡನಾಟ, ಆಡಿದ ಮಾತು, ನೆನಪುಗಳಿಂದ ಹೊರಬರಲು ಸಾಕಷ್ಟು ಸಮಯ ಹಿಡಿಯುತ್ತದೆ. ಆಗಾಗ ನೆನಪಾಗಿ ಬರುವ ದುಖಃವನ್ನು ಸಹಿಸಲು ಪ್ರಯತ್ನಿಸುತ್ತೇವೆ. ಕೆಲವರಿಗಂತೂ ಇಂತಹ ಸನ್ನಿವೇಶವನ್ನು ಅರಗಿಸಿಕೊಳ್ಳಲು ಆಗುವುದಿಲ್ಲ. ಇನ್ನು ಕೆಲವರು ಆತ್ಮೀಯನ ಸಾವಿನ ಬಗ್ಗೆ ನೆನಸಿಕೊಂಡು ಬೇಸರವಾಗುತ್ತದೆ ಎಂದು ಆ ಬಗ್ಗೆ ಮಾತನಾಡಲು, ಯೋಚಿಸಲು ಹೋಗುವುದಿಲ್ಲ.