ಈ ಭೂಮಿ ಮೇಲೆ ಮನುಷ್ಯರಷ್ಟೇ ಪ್ರಾಣಿಗಳಿಗೂ ಬದುಕುವ ಹಕ್ಕು- ಸ್ವಾತಂತ್ರ್ಯ ಇದೆ. ಮೂಕ ಪ್ರಾಣಿಗಳಿಗೆ ತೊಂದರೆ ಕೊಟ್ಟರೆ, ಪ್ರಾಣ ಹಾನಿ ಮಾಡಿದರೆ ಮನುಷ್ಯರಿಗೂ ಶಿಕ್ಷೆ ನೀಡುವ ಕಾನೂನುಗಳಿವೆ. ಆದರೆ ಅವು ಪುಸ್ತಕಕ್ಕೆ ಮಾತ್ರ ಸೀಮಿತವಾಗಿದ್ದು, ಕಾರ್ಯರೂಪಕ್ಕೆ ಬಂದಿಲ್ಲ. ಆದರೆ ಬೇರೆ ದೇಶಗಳಲ್ಲಿ ಹೀಗಿಲ್ಲ. ಪ್ರಾಣಿ ಹಿಂಸೆ ಮಾಡಿದರೆ ಅಲ್ಲಿ ನೀಡುವ ಶಿಕ್ಷೆಗಳು ಕಠಿಣವಾಗಿರುತ್ತವೆ. ಅಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ.
ಆರೋಪಿಯನ್ನು 20 ವರ್ಷದ ಜೇಮ್ಸ್ ಹೊವಾರ್ಡ್ ಜಾಕ್ಸನ್ ಎಂದು ಗುರುತಿಸಲಾಗಿದೆ. ಈತ ಈ ಹಿಂದೆಯೂ ಸಹ ಇಂತಹದ್ದೇ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಫೆಬ್ರವರಿ 2021 ರಲ್ಲಿ, ಜಾಕ್ಸನ್ ಮತ್ತು ಇತರ ಇಬ್ಬರು- 21 ವರ್ಷದ ಜೈಲಿನ್ ಕೀಶಾನ್ ವೈಟ್ ಮತ್ತು 28 ವರ್ಷದ ಲಫಯೆಟ್ಟೆ ಶೋನ್ ವೇಲಿ - ಫಿಶರ್ನ್ನು ಭೇಟಿ ಮಾಡಿ, ಅವರ ಮೂರು ಫ್ರೆಂಚ್ ಬುಲ್ಡಾಗ್ಗಳನ್ನು ಕದಿಯಲು ಪ್ರಯತ್ನಿಸಿದ್ದರು.