ಕೊರೋನಾ ಸಮಯ ಅನೇಕರಿಗೆ ಒತ್ತಡದ ಸಮಯವಾಗಿ ಪರಿಣಮಿಸಿದೆ. ಕೆಲವರಿಗೆ ಆರ್ಥಿಕ ಸಮಸ್ಯೆಯಾದರೆ. ಇನ್ನು ಕೆಲವರಿಗೆ ಕೆಲಸವಿಲ್ಲದೆ ಪರದಾಡುವಂತಹ ಸ್ಥಿತಿ. ಹೀಗಾಗಿ ಅನೇಕರು ಸಂಕಷ್ಟದ ನೆರಳಿನಲ್ಲಿ ಬದುಕುತ್ತಿದ್ದಾರೆ
2/ 7
ಅದರಂತೆ ಸೂರತ್ನಲ್ಲಿ ಕೊರೋನಾ ತಂದೊಡ್ಡಿದ ಸಂಕಷ್ಟದಿಂದಾಗಿ ಯುವಕನೊಬ್ಬ ತನ್ನ ಮಾನಸಿಕ ಸ್ಥಿತಿಯನ್ನು ಕಳೆದುಕೊಂಡು ಬೆತ್ತಲಾಗಿ ಓಡಾಡಿದ್ದಾನೆ.
3/ 7
ಸೂರತ್ನ ಅದಜನ್ ಪ್ರದೇಶದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬೆಳಿಗ್ಗೆ ಯುವಕನೊಬ್ಬ ಇದ್ದಕ್ಕಿದ್ದಂತೆಯೇ ಧರಿಸಿರುವ ಬಟ್ಟೆಯನ್ನು ತೆಗೆದು ಬೆತ್ತಲೆಯಾಗಿ ಓಡಾಡಿದ್ದಾನೆ. ಸ್ಪಲ್ಪ ಹೊತ್ತಿನಲ್ಲಿ ಆತನನ್ನು ಕಂಡು ರಸ್ತೆಯ ತುಂಬೆಲ್ಲಾ ಜನರು ಸೇರಿದ್ದಾರೆ.
4/ 7
ಜನರನ್ನು ಕಂಡು ಆ ಯುವಕ ನಿಂದನೆಯ ಪದಗಳನ್ನು ಆಡಲು ಶುರು ಮಾಡುತ್ತಾನೆ. ನಂತರ ಸ್ಥಳೀಯರು ಪೊಲೀಸರಿಗೆ ವಿಚಾರ ತಿಳಿಸುತ್ತಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಹಿಡಿದು ಠಾಣೆಗೆ ಕರೆದೊಯ್ಯುತ್ತಾರೆ. ಆ ನಂತರ ಆತನ ಮನೆಯವರ ಮೂಲಕ ಸತ್ಯ ಘಟನೆಯನ್ನು ಬೆಳಕಿಗೆ ಬಂದಿದೆ.
5/ 7
ವ್ಯಕ್ತಿ ಕೆನಡಾದ ಐಇಎಲ್ಟಿಎಸ್ ಪರೀಕ್ಷೆಗೆಗಾಗಿ ಸಿದ್ಧತೆ ಮಾಡಿಕೊಂಡಿದ್ದ. ಆದರೆ ಆ ಪರೀಕ್ಷೆ ಕೊರೋನಾದಿಂದಾಗಿ ರದ್ದಾಗಿದೆ. ಇದರಿಂದಾಗಿ ಆತ ಕೆಲಸವನ್ನು ಕಳೆದುಕೊಂಡಿದ್ದಾನೆ. ಈ ಶಾಕ್ನಿಂದಾಗಿ ಮಾನಸಿಕ ಸಮತೋಲನ ಕಳೆದುಕೊಂಡು ರಸ್ತೆಯಲ್ಲಿ ಬೆತ್ತಲಾಗಿ ಓಡಾಡಿದ್ದಾನೆ.
6/ 7
ಇನ್ನು ಯುವಕನ ಹೆಸರು ವಿಜಯ್ ಧನ್ವನ್ ಗೋಹಿಲ್ ಎಂದು ತಿಳಿದು ಬಂದಿದೆ. ಬಹಳ ಸಮಯದಿಂದ ವಿಜಯ್ ಕೆನಡಾಗೆ ಹೋಗಲು ಪರೀಕ್ಷೆ ತಯಾರಿ ನಡೆಸಿದ್ದ. 22 ವರ್ಷದ ವಿಜಯ್ ಕಠಿಣ ಅಧ್ಯಯನ ನಡೆಸಿ ಪರೀಕ್ಷೆ ಬರೆಯಬೇಕು ಎಂದಾಗ ಕೊರೋನಾದಿಂದಾಗಿ ಪರೀಕ್ಷೆ ರದ್ಧಾಗಿದೆ. ಇದರಿಂದ ಮಾನಸಿಕವಾಗಿ ನಿರಾಸೆಗೊಂಡಿದ್ದಾನೆ.
7/ 7
ನಂತರ ಪೊಲೀಸರು ಆತನ ಫ್ಯಾಮಿಲಿಗೆ ಕರೆ ಮಾಡಿ ತಿಳಿಸುತ್ತಾರೆ. ವಿಚಾರ ತಿಳಿದಂತೆ ಠಾಣೆಗೆ ಓಡೋಡಿ ಬಂದ ಕುಟುಂಬಸ್ಥರು ಆತನ ಪರೀಕ್ಷೆಗಾಗಿ ಭಾರೀ ಅಧ್ಯಯನ ನಡೆಸಿದ್ದ ಎಂದು ಹೇಳಿದರು. ಇದೀಗ ಪರೀಕ್ಷೆ ರದ್ದಾಗಿರುವುದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾನೆ ಎಂದು ಹೇಳಿದರು.