Strange disease: ಊಟ ಮಾಡುವಾಗ ಜೋರಾಗಿ ಅಳುತ್ತಾನೆ, ಇದೂ ಒಂದು ಖಾಯಿಲೆಯಂತೆ!

Viral Story: ಚೀನಾದ ಮೂಲದ ವ್ಯಕ್ತಿಗೆ ಆಹಾರ ತಿನ್ನುವಾಗ ಕಣ್ಣಲ್ಲಿ ನೀರು ಬರುತ್ತದೆ. ಆತ ಆಹಾರವನ್ನು ಸೇವಿಸಿದಾಗಲೆಲ್ಲಾ ಅಳಲು ಪ್ರಾರಂಭಿಸುತ್ತಾನೆ.

First published:

  • 16

    Strange disease: ಊಟ ಮಾಡುವಾಗ ಜೋರಾಗಿ ಅಳುತ್ತಾನೆ, ಇದೂ ಒಂದು ಖಾಯಿಲೆಯಂತೆ!

    ಸಾಮಾನ್ಯವಾಗಿ ಒಬ್ಬ ವ್ಯಕ್ತಿಯು ಭಾವನಾತ್ಮಕವಾಗಿದ್ದಾಗ, ನೋವು ಆದಾಗ, ದುಃಖದಲ್ಲಿ ಅಥವಾ ನಗುತ್ತಿರುವಾಗ ಕಣ್ಣಲ್ಲಿ ನೀರು ಬರುತ್ತದೆ. ಆದರೆ ಇಲ್ಲೊಬ್ಬ ವಿಚಿತ್ರ ವ್ಯಕ್ತಿ ಇದ್ದಾನೆ. ಆತ ತಿನ್ನುವಾಗ ಅಳುತ್ತಾನೆ. ಆತನನ್ನು ಕಂಡು ವೈದ್ಯರು ಏನು ಹೇಳಿದ್ದಾರೆ.

    MORE
    GALLERIES

  • 26

    Strange disease: ಊಟ ಮಾಡುವಾಗ ಜೋರಾಗಿ ಅಳುತ್ತಾನೆ, ಇದೂ ಒಂದು ಖಾಯಿಲೆಯಂತೆ!

    ಚೀನಾದ ಮೂಲದ ವ್ಯಕ್ತಿಗೆ ಆಹಾರ ತಿನ್ನುವಾಗ ಕಣ್ಣಲ್ಲಿ ನೀರು ಬರುತ್ತದೆ. ಆತ ಆಹಾರವನ್ನು ಸೇವಿಸಿದಾಗಲೆಲ್ಲಾ ಅಳಲು ಪ್ರಾರಂಭಿಸುತ್ತಾನೆ.

    MORE
    GALLERIES

  • 36

    Strange disease: ಊಟ ಮಾಡುವಾಗ ಜೋರಾಗಿ ಅಳುತ್ತಾನೆ, ಇದೂ ಒಂದು ಖಾಯಿಲೆಯಂತೆ!

    ಜನಪ್ರಿಯ ವೆಬ್​ಸೈಟ್​  ಆಡಿಟಿ ಸೆಂಟ್ರಲ್ ಇತ್ತೀಚೆಗೆ ಚೀನಾದಲ್ಲಿ ಅಪರೂಪದ ಸಿಂಡ್ರೋಮ್ ಹೊಂದಿರುವ ವ್ಯಕ್ತಿಯ ಬಗ್ಗೆ ಹೇಳಿದೆ. ಆಡಿಟಿ ಸೆಂಟ್ರಲ್ ವೆಬ್​ಸೈಟ್​ ತನ್ನ ವೆಬ್​ಸೈಟ್​ನಲ್ಲಿ ಚೀನಾ ಮಾಧ್ಯಮವನ್ನು ಉಲ್ಲೇಖಿಸಿ ಈ ಸುದ್ದಿಯನ್ನು ಮಾಡಿದೆ. ಆದರೆ ಇದು ನೈಜ್ಯ ಘಟನೆಯೇ ಎಂದು ತಿಳಿದು ಬರಬೇಕಿದೆ.

    MORE
    GALLERIES

  • 46

    Strange disease: ಊಟ ಮಾಡುವಾಗ ಜೋರಾಗಿ ಅಳುತ್ತಾನೆ, ಇದೂ ಒಂದು ಖಾಯಿಲೆಯಂತೆ!

    ವರದಿಗಳ ಪ್ರಕಾರ, ಜಾಂಗ್ ಎಂಬ ವ್ಯಕ್ತಿ ಊಟ ಮಾಡುವಾಗ ಅಳುತ್ತಾನೆ. ಆದರೆ ಆತನಲ್ಲಿ ಏನೋ ಒಂದು ತೊಂದರೆ ಇದೆ ಎಂದು ಅವನಿಗೆ ಅನಿಸಿತು. ಆತನಿಗೆ ಆಹಾರ ಸೇವಿಸುವಾಗ ಕಣ್ಣಲ್ಲಿ ನೀರು ಬರುತ್ತದೆ ಎಂಬ ಕಾರಣದಿಂದ ಆತ ಹೊಟೇಲ್ನಲ್ಲಿ ತಿನ್ನುತ್ತಿರಲಿಲ್ಲ. ಅಷ್ಟು ಮಾತ್ರವಲ್ಲದೆ ಇದರಿಂದಾಗಿ ಮುಜುಗರಕ್ಕೊಳಗಾಗುತ್ತಿದ್ದ. ಕೊನೆಗೆ ಆತನಿಗೆ ತಾನೊಂದು ಕಾಯಿಲೆಯಿಂದ ಬಳಲುತ್ತಿದ್ದೇನೆ ಎಂದು ಕಂಡುಕೊಂಡನು.

    MORE
    GALLERIES

  • 56

    Strange disease: ಊಟ ಮಾಡುವಾಗ ಜೋರಾಗಿ ಅಳುತ್ತಾನೆ, ಇದೂ ಒಂದು ಖಾಯಿಲೆಯಂತೆ!

    ಊಟ ನೋಡಿ ಬಾಯಲ್ಲಿ ನೀರು ಬರುವ ಬದಲು ಕಣ್ಣಲ್ಲಿ ನೀರು ಬರುತ್ತಿತ್ತು: ಜಾಂಗ್ ತಪಾಸಣೆಗಾಗಿ ವುಹಾನ್ ಆಸ್ಪತ್ರೆಗೆ ಹೋದರು, ಅಲ್ಲಿ ವೈದ್ಯರು ಅವರಿಗೆ ಮೊಸಳೆ ಸಿಂಡ್ರೋಮ್ ಎಂಬ ಅಪರೂಪದ ರೋಗಲಕ್ಷಣವನ್ನು ಪತ್ತೆಹಚ್ಚಿದರು.

    MORE
    GALLERIES

  • 66

    Strange disease: ಊಟ ಮಾಡುವಾಗ ಜೋರಾಗಿ ಅಳುತ್ತಾನೆ, ಇದೂ ಒಂದು ಖಾಯಿಲೆಯಂತೆ!

    ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಡಾ.ಚೆಂಗ್, ಈ ರೋಗಲಕ್ಷಣವು ವ್ಯಕ್ತಿಯ ಮುಖದ ಪಾರ್ಶ್ವವಾಯು ಸಮಸ್ಯೆಗೆ ಸಂಬಂಧಿಸಿದೆ ಎಂದು ಹೇಳಿದರು. ಅವನ ಮುಖದ ಪಾರ್ಶ್ವವಾಯು ರೋಗದಿಂದ ಚೇತರಿಸಿಕೊಂಡಾಗಿನಿಂದ ಅವನ ಕಣ್ಣುಗಳು ಲ್ಯಾಕ್ರಿಮಲ್ ಗ್ರಂಥಿಯಿಂದ ಕೆಟ್ಟದಾಗಿ ಪ್ರಭಾವಿತವಾಗಿವೆ. ವಿಶ್ರಾಂತಿ ಸಮಯದಲ್ಲಿ, ಮುಖದ ನರಗಳ ದಿಕ್ಕು ಬದಲಾಗುತ್ತದೆ. ಆಹಾರದ ವಾಸನೆ ಅಥವಾ ರುಚಿಯಿಂದ ಲಾಲಾರಸದ ಬದಲಿಗೆ ಕಣ್ಣುಗಳಲ್ಲಿ ಕಣ್ಣೀರು ಉಂಟಾಗುತ್ತದೆ ಎಂದು ಗೊತ್ತಾಯಿತು.

    MORE
    GALLERIES