ಲೈಗಿಂಕ ಆನಂದಕ್ಕಾಗಿ ವ್ಯಕ್ತಿಯೋರ್ವ ಖಾಸಗಿ ಅಂಗವನ್ನು ಬಾಟಲಿಗೆ ತೂರಿಸಿ ಬಾಕಿಯಾಗಿ ಕೊನೆಗೆ ಸಾವನ್ನೇ ಜಯಿಸಿ ಬಂದ ಘಟನೆಯೊಂದು ನೇಪಾಳದಲ್ಲಿ ನಡೆದಿದೆ. ಮಧ್ಯ ವಯಸ್ಕನು ತನ್ನ ಲೈಂಗಿಕ ಆಸೆಯನ್ನು ತೀರಿಸಿಕೊಳ್ಳಲು ಬಾಟಲಿಯನ್ನು ಬಳಸಿಕೊಂಡಿದ್ದು, ಇದರಿಂದಾಗಿ ಸಂಕಷ್ಟ ಅನುಭವಿಸಿದ್ದಾನೆ.
2/ 6
ಲೈಗಿಂಕ ಆನಂದಕ್ಕಾಗಿ ಎನೋನೋ ಮಾಡಲು ಹೋಗಿ ಕಷ್ಟದ ಪರಿಸ್ಥಿತಿಗೆ ಸಿಲುಕಿರುವ ಅನೇಕ ಘಟನೆಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ನೇಪಾಲದ 45 ವರ್ಷದ ವ್ಯಕ್ತಿ ನೀರು ಕುಡಿಯಲು ಬಳಸುವ ಪ್ಲಾಸ್ಟಿಕ್ ಬಾಟಲಿ ಬಳಸಿಕೊಂಡಿದ್ದಾನೆ. ಅದಕ್ಕೆ ಶಿಶ್ನವನ್ನು ತೂರಿಸಿದ್ದಾನೆ ಪರಿಣಾಮ ಶಿಶ್ನವು ಅದರಲ್ಲೇ ಬಾಕಿಯಾಗಿದೆ.
3/ 6
ಬಾಟಲಿಯಿಂದ ಮತ್ತು ಲೈಗಿಂಕ ಬಯಕೆ ಈಡೇರಿಸುವ ಆಸೆಯಿಂದ ಸಂಕಷ್ಟದಲ್ಲಿ ಸಿಲುಕಿದ ವ್ಯಕ್ತಿ ಎರಡು ತಿಂಗಳ ಕಾಲ ನಾನಾ ಪ್ರಯತ್ನ ಮಾಡಿದರು ಶಿಶ್ನವನ್ನು ಹೊರತೆಗೆಯಲು ಸಾಧ್ಯವಾಗಿಲ್ಲ ಕೊನೆಗೆ ವೈಧ್ಯರನ್ನು ಕಾಣಬೇಕಾದ ಅನಿವಾರ್ಯತೆ ಆತನಿಗೆ ಎದುರಾಗಿದೆ. ವ್ಯಕ್ತಿ ಅವಸ್ಥೆಯನ್ನು ನೋಡಿ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿ ಬಂದಿದೆ.
4/ 6
ಶಿಶ್ನವು ರಕ್ತ ಪೂರೈಕೆಯನ್ನು ಕಡಿತಗೊಳಿಸಿದ್ದರಿಂದ ಮತ್ತು ಬಾಟಲಿಯೊಳಗಿರುವುದರಿಂದ ಕೊಳೆಯಲು ಕಾರಭವಾಗಬಹುದು ಎಂಬ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವ್ಯಕ್ತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ಆದರೆ 45 ವರ್ಷದ ವ್ಯಕ್ತಿ ಯಾಕಾಗಿ ಈ ರೀತಿ ಮಾಡಿದ್ದಾನೆ ಎಂಬುದಕ್ಕೆ ಕಾರಣವನ್ನು ತಿಳಿಸದೆ ಸುಮ್ಮನಾಗಿದ್ದಾನಂತೆ.
5/ 6
ಕೊಯಿರಾಲ ಆರೋಗ್ಯ ವಿಜ್ನಾನ ಸಂಸ್ಥೆ ಹೇಳಿದಂತೆ ರಕ್ತದ ಹರಿವಿನ ಕೊರತೆಯಿಂದ ವ್ಯಕ್ತಿ ಶಿಶ್ನವು ಊದಿಕೊಂಡಿತ್ತು. ಮಾತ್ರವಲ್ಲದೆ ರೋಗಿ ನೋವಿನಿಂದ ಬಳಲುತ್ತಿದ್ದನು ಎಂಬುದು ವೈದ್ಯರ ಬಳಿ ಹೇಳಿಕೊಂಡಿದ್ದನು. ಪರೀಕ್ಷೆ ನಡೆಸಿದ ಬಳಿಕ ಜೀವಹಾನಿಯಿದೆ ಎಂಬುದನ್ನು ಅರಿತು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಮತ್ತು ವ್ಯಕ್ತಿಯನ್ನು ಪ್ರಾಣಪಾಯದಿಂದ ಕಾಪಾಡಲಾಗಿದೆ.
6/ 6
ಮಾನಸಿಕ ಅಸ್ವಸ್ಥತೆ ಮತ್ತು ಲೈಂಗಿಕ ಪ್ರಚೋದನೆ ಹೆಚ್ಚಿಸುವ ಪ್ರಯತ್ನದಿಂದಾಗಿ ಅನೇಕರು ಇಂತಹ ಸಮಸ್ಯೆ ಬಲಿಯಾದವರು ಇದ್ದಾರೆ. ಬಾಟಲಿ, ವೈರ್, ಮೊಬೈಲ್ ಕೇಬಲ್, ಪೈಪ್ ಹೀಗೆ ನಾನಾ ವಸ್ತುಗಳನ್ನು ಬಳಸಿ ಸಮಸ್ಯೆಗೆ ಸಿಲುಕಿ ಹಾಕಿಕೊಂಡವರ ಪ್ರಕರಣಗಳ ಬೆಳಕಿಗೆ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ