ಸ್ಟೈಲಿಶ್ ಲುಕ್ನಲ್ಲಿ 47 ವರ್ಷದ ನಟಿ Malaika Arora: ಟಾಕ್ ಆಫ್ ದ ಟೌನ್ ಆದ ನಟಿ..!
ನಟಿ ಮಲೈಕಾ ಅರೋರಾ (Malaika Arora) ತಮ್ಮ ಸ್ಟೈಲ್ ಹಾಗೂ ಫ್ಯಾಷನ್ ಆಯ್ಕೆಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. 47ನೇ ವಷಯಸ್ಸಿನಲ್ಲೂ ನಟಿಯ ಹಾಟ್ ಲುಕ್ ಚರ್ಚೆಯ ವಿಷಯವಾಗಿದೆ. ಇಲ್ಲಿದೆ ನಟಿಯ ಲೆಟೆಸ್ಟ್ ಚಿತ್ರಗಳು. (ಚಿತ್ರಗಳು ಕೃಪೆ: ಮಲೈಕಾ ಅರೋರಾ ಇನ್ಸ್ಟಾಗ್ರಾಂ ಖಾತೆ)
ಕಿರುತೆರೆಯ ರಿಯಾಲಿಟಿ ಕಾರ್ಯಕ್ರಮದ ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್ನ (India’s Best Dancer) ಮತ್ತೊಂದು ಸೀಸನ್ ಆರಂಭವಾಗಿದೆ. ಈ ಕಾರ್ಯಕ್ರಮ 16 ಅಕ್ಟೋಬರ್ನಿಂದ ಪ್ರಸಾರವಾಗಲಿದೆ. ಇದರಲ್ಲಿ ಮಲೈಕಾ ಅರೋರಾ ತೀರ್ಪುಗಾರರಾಗಿ ಕಾಣಿಸಿಕೊಳ್ಳಿದ್ದಾರೆ.
2/ 6
ಮಲೈಕಾ ಅರೋರಾ ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಾಕು, ಪಾಪರಾಜಿಗಳು ಅವರ ಬೆನ್ನು ಬೀಳುತ್ತಾರೆ. ಅವರ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಈ ನಟಿಯ ಸ್ಟೈಲ್ ಹಾಗೂ ಲುಕ್ಸ್ ಟಾಕ್ ಆಫ್ ದ ಟೌನ್ ಆಗಿರುತ್ತವೆ.
3/ 6
ಮಲೈಕಾ ಅರೋರಾರ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾದರೆ ಸಾಕು, ವೈರಲ್ ಆಗಿ ಬಿಡುತ್ತವೆ. ಇನ್ನು ಈ ನಟಿ ಇತ್ತೀಚೆಗೆ ವಿನ್ಯಾಸಿತ ಫೆದರ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದು, ಅವರ ಈ ಹಾಲಿವುಡ್ ಸ್ಟೈಲ್ನ ಲುಕ್ ನೆಟ್ಟಿಗರ ಗಮನ ಸೆಳೆದಿದೆ.
4/ 6
47ನೇ ವಯಸ್ಸಿನಲ್ಲೂ ಮಲೈಕಾ ಅರೋರಾ ಇಷ್ಟು ಫಿಟ್ ಹಾಗೂ ಹಾಟ್ ಆಗಿ ಕಾಣಲು ಅವರ ದೈನಂದಿನ ಅಭ್ಯಾಸಗಳೇ ಕಾರಣ. ಹೌದು, ವ್ಯಾಯಾಮ, ಯೋಗ ಅಂತ ಸದಾ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾ ತಮ್ಮ ವೃತ್ತಿಗೆ ತಕ್ಕಂತೆ ದೇಹ ಸಿರಿಯನ್ನೂ ಕಾಯ್ದುಕೊಂಡಿದ್ದಾರೆ.
5/ 6
ನಟ ಅರ್ಬಾಸ್ ಖಾನ್ ಅವರಿಂದ ವಿಚ್ಛೇದನ ಪಡೆದ ನಂತರ ಮಲೈಕಾ ಅರೋರಾ ತಮ್ಮ ಮಗನ ಜೊತೆ ಪ್ರತ್ಯೇಕವಾಗಿ ಜೀವಿಸುತ್ತಿದ್ದಾರೆ. ಇನ್ನು ಮಲೈಕಾ ಹಾಗೂ ನಟ ಅರ್ಜುನ್ ಕಪೂರ್ ಅವರ ಲವ್ ಸ್ಟೋರಿ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ.
6/ 6
ವಯಸ್ಸಿನಲ್ಲಿ ತಮಗಿಂತ ಚಿಕ್ಕವರಾಗಿರುವ ಅರ್ಜುನ್ ಕಪೂರ್ ಅವರನ್ನು ಮಲೈಕಾ ಅರೋರಾ ಅವರು ಡೇಟ್ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಆಗಾಗ ಈ ಜೋಡಿ ಸಾರ್ವಜನಿಕವಾಗಿಯೂ ಜೊತೆಗೆ ಕಾಣಿಸಿಕೊಳ್ಳುತ್ತಿರುತ್ತಾರೆ.