ಬಹಳ ವರ್ಷಗಳ ನಂತರ Mahesh Babu ಜತೆ ಬಣ್ಣ ಹಚ್ಚಿದ ನಟಿ Namrata Shirodkar
ಟಾಲಿವುಡ್ನ ಕ್ಯೂಟ್ ಸೆಲೆಬ್ರಿಟಿ ಕಪಲ್ ಮಹೇಶ್ ಬಾಬು ಹಾಗೂ ನಮ್ರತಾ ಶಿರೋಡ್ಕರ್ ಸದ್ಯ ಸುದ್ದಿಯಲ್ಲಿದ್ದಾರೆ. ಮಹೇಶ್ ಬಾಬು ಜತೆ ಮದುವೆಯಾದ ನಂತರ ಸಿನಿರಂಗದಿಂದ ದೂರ ಕಾಯ್ದು ಕೊಂಡಿರುವ ನಮ್ರತಾ ಶಿರೋಡ್ಕರ್ ಈಗ ಮತ್ತೆ ಮಹೇಶ್ ಬಾಬು ಬಣ್ಣ ಹಚ್ಚಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
ಬಾಲಿವುಡ್ನಲ್ಲಿ ಸ್ಟಾರ್ ನಟರ ಜೊತೆ ಸಿನಿಮಾಗಳಲ್ಲಿ ನಟಿಸುತ್ತಿದ್ದ ನಟಿ ನಮ್ರತಾ ಶಿರೋಡ್ಕರ್ ತೆಲುಗಿನಲ್ಲೂ ನಟಿಸಿದ್ದಾರೆ. ಮಹೇಶ್ ಬಾಬು ಅವರ ಜೊತೆ ವಿವಾಹವಾದ ನಂತರ ಸಿನಿರಂಗದಿಂದ ದೂರ ಇದ್ದಾರೆ.
2/ 6
ಬಣ್ಣದ ಲೋಕದಿಂದ ದೂರ ಇದ್ದರೂ ಸಹ ನಮ್ರತಾ ಶಿರೋಡ್ಕರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿದ್ದಾರೆ. ಆದರೆ ಈಗ ಪತಿ ಮಹೇಶ್ ಬಾಬು ಜೊತೆ ನಮ್ರತಾ ಮತ್ತೆ ಬಣ್ಣ ಹಚ್ಚಿದ್ದಾರೆ.
3/ 6
ಹೌದು, ಮಹೇಶ್ ಬಾಬು ಜತೆ ಮದುವೆಗೆ ಮುನ್ನ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. 2000ರಲ್ಲಿ ತೆರೆಗೆ ಬಂದ ‘ವಂಶಿ’ ಸಿನಿಮಾದಲ್ಲಿ ಮಹೇಶ್ ಬಾಬು ಹಾಗೂ ನಮ್ರತಾ ಜತೆಯಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿ, 2005ರಲ್ಲಿ ಇಬ್ಬರೂ ಮದುವೆಯೂ ಆದರು.
4/ 6
ಆಗಿನಿಂದ ನಮ್ರತಾ ಸಿನಿಮಾಗಳಿಂದ ದೂರ ಇದ್ದರು. ಇಬ್ಬರು ಮಕ್ಕಳ ಆರೈಕೆಯಲ್ಲಿದ್ದ ನಮ್ರತಾ, ಕೆಲ ಸಮಯದ ಹಿಂದೆ ಮಹೇಶ್ ಬಾಬು ಹಾಗೂ ಮಕ್ಕಳ ಜೊತೆ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
5/ 6
ಆ ಜಾಹೀರಾತಿನ ನಂತರ ಈಗ ಮತ್ತೆ ನಮ್ರತಾ ಗಂಡನಿಗಾಗಿ ಬಣ್ಣ ಹಚ್ಚಿದ್ದಾರೆ. ಅದೂ ಕೂಡ ಮಹೇಶ್ ಬಾಬು ಅವರ ಜತೆಗಿನ ಫೋಟೋಶೂಟ್ನಲ್ಲಿ ನಮ್ರತಾ ಸಖತ್ ಕ್ಲಾಸಿ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
6/ 6
ನಮ್ರತಾ ಹಾಗೂ ಮಹೇಶ್ ಬಾಬು ಅವರ ಲೆಟೆಸ್ಟ್ ಫೋಟೋಶೂಟ್ನ ಚಿತ್ರಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಜತೆಗೆ ತಮ್ಮ ಚಿತ್ರಗಳನ್ನು ನಮ್ರತಾ ಹಾಗೂ ಮಹೇಶ್ ಬಾಬು ಸಹ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ಸಿನಿಮಾ ಸರ್ಕಾರು ವಾರಿ ಪಾಟ ಇನ್ನೇನು ರಿಲೀಸ್ ಆಗಲಿದೆ.