ಸಿಎಂ, ಪಿಎಂ, ಮಂತ್ರಿಗಳು, ರಾಜಕಾರಣಿಗಳು ಹಾಗೂ ಸೆಲೆಬ್ರೆಟಿಗಳಿಗೆ ಭದ್ರತೆ ನೀಡುವುದನ್ನ ನೀವು ನೋಡಿರುತ್ತೀರಾ ಅಥವಾ ಕೇಳಿರುತ್ತೀರಾ. ಆದರೆ ಮರವೊಂದಕ್ಕೆ ದಿನದ 24 ಗಂಟೆಗಳು ಭದ್ರತೆ ನೀಡಲಾಗುತ್ತಿದೆ. ಇದು ಆಶ್ಚರ್ಯವೆನಿಸಿದರೂ ಸತ್ಯ. ಮಧ್ಯಪ್ರದೇಶದಲ್ಲಿ ಭೋಪಾಲ್ ಮತ್ತು ವಿಧಿಶಾ ಮಧ್ಯೆ ಸಾಲ್ಮತ್ಪುರ್ ಎಂಬಲ್ಲಿ ಒಂದು ಅರಳಿ ಮರಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗುತ್ತಿದೆ.