ಒಂದು ದಿನ ಇಸಾ ಬೇಗ ಮನೆಗೆ ಬಂದ. ಎಷ್ಟೇ ಬೆಲ್ ಮಾಡಿದರೂ ಹೆಂಡತಿ ಬಾಗಿಲು ತೆಗೆಯುತ್ತಿಲ್ಲ. ಸ್ವಲ್ಪ ಸಮಯದ ನಂತರ ಆಕೆ ಡೋರ್ ತೆಗೆದಳು. ಹೆಂಡತಿ ಜೊತೆಗೆ ಶಕೀರ್ ಕೂಡ ಇದ್ದ. ‘ನಮ್ಮನ್ನು ಭೇಟಿ ಮಾಡಲೆಂದು ಶಕೀರ್ ಬಂದಿದ್ದ’ ಎಂದು ಪತ್ನಿ ಸಮಜಾಯಿಶಿ ನೀಡಿದಳು. ಆಗ ಆತನಿಗೆ ಅನುಮಾನ ಕಾಡಲು ಆರಂಭವಾಗಿತ್ತು. ಈ ಬಗ್ಗೆ ಅವಳಲ್ಲಿ ಪದೇ ಪದೇ ಕೆಳುತ್ತಿದ್ದ. ಶಕೀರ್ ಬಗ್ಗೆ ಇಸಾಗೆ ಕೋಪ ಬಂದಿತ್ತು.
ಎಲ್ಲ ಸಿನಿಮಾಗಳಲ್ಲಿ ಮಾಡಿದಂತೆ ಶಕೀರ್ ಕಪಾಟಿನಲ್ಲಿ ಅಡಗಿದ್ದ. ಆತನನ್ನು ಹಿಡಿದು ಇಸಾ ಹೊರಗೆಳೆದ. ಹೆಂಡತಿ ಜೊತೆಗೆ ಈತ ಸರಸವಾಡುತ್ತಾನೆ ಎಂಬುದನ್ನು ನೆನೆದು ಇಸಾ ಕೋಪ ನೆತ್ತಿಗೇರಿತ್ತು. ಮೈರಾ ತಡೆಯುವುದರೊಳಗೆ ಬಂದೂಕಿನ ಟ್ರಿಗರ್ ಒತ್ತಿಯಾಗಿತ್ತು. ಪಿಸ್ತೂಲ್ನಿಂದ ಹಾರಿದ ಗುಂಡು ನೇರವಾಗಿ ಶಕೀರ್ ಹೃದಯಕ್ಕೆ ನಾಟಿತ್ತು. ಆ ಕೋಣೆಯಲ್ಲಿ ರಕ್ತದ ಕೋಡಿಯೇ ಹರಿದಿತ್ತು. ಶಕೀರನ ಮೃತದೇಹ ಹಿಡಿದು ಮೈರಾ ಅಳಲು ಆರಂಭಿಸಿದಳು.