Road Trips: ಬೇಸಿಗೆ ಪ್ರವಾಸಕ್ಕೆ ಈ ರೋಡ್ ಬೆಸ್ಟ್, ಸುಂದರವಾದ ರಸ್ತೆಯಲ್ಲಿ ಹೋಗ್ತಿದ್ರೆ ಬಿಸಿಲ ಬೇಗೆಯೇ ತಾಗಲ್ಲ!

ಬೇಸಿಗೆ ಕಾಲದಲ್ಲಿ ಕಾಡಿನ ಮಧ್ಯೆ ಅಥವಾ ಗಿಡ ಮರಗಳ ನಡುವೆ ಇರುವ ರಸ್ತೆಗಳಲ್ಲಿ ಹೋಗುವುದು ಬೇರೆಯದ್ದೆ ರೀತಿಯ ಒಂದು ಅನುಭವವನ್ನು ಕಟ್ಟಿ ಕೊಡುತ್ತದೆ ಅಂತ ಹೇಳಬಹುದು.

First published:

 • 19

  Road Trips: ಬೇಸಿಗೆ ಪ್ರವಾಸಕ್ಕೆ ಈ ರೋಡ್ ಬೆಸ್ಟ್, ಸುಂದರವಾದ ರಸ್ತೆಯಲ್ಲಿ ಹೋಗ್ತಿದ್ರೆ ಬಿಸಿಲ ಬೇಗೆಯೇ ತಾಗಲ್ಲ!

  ಬೇಸಿಗೆ ಕಾಲದಲ್ಲಿ ಕಾಡಿನ ಮಧ್ಯೆ ಅಥವಾ ಗಿಡ ಮರಗಳ ನಡುವೆ ಇರುವ ರಸ್ತೆಗಳಲ್ಲಿ ಹೋಗುವುದು ಬೇರೆಯದ್ದೆ ರೀತಿಯ ಒಂದು ಅನುಭವವನ್ನು ಕಟ್ಟಿ ಕೊಡುತ್ತದೆ ಅಂತ ಹೇಳಬಹುದು. ನಮ್ಮ ಭಾರತದಲ್ಲಿ ಇಂತಹ ಸುಂದರವಾದ ರಸ್ತೆಗಳು ತುಂಬಾನೇ ಇವೆ. ಬನ್ನಿ ಹಾಗಾದರೆ ಭಾರತದ ಎಂಟು ಅತ್ಯಂತ ರಮಣೀಯ ಮತ್ತು ಬೆರಗುಗೊಳಿಸುವ ರಸ್ತೆಗಳನ್ನು ನಿಮಗಾಗಿ ಆರಿಸಿ ತಂದಿದ್ದೇವೆ. ನಿಮ್ಮ ಲಾಂಗ್ ಡ್ರೈವ್ ಸಮಯದಲ್ಲಿ ಈ ಆಯ್ಕೆಗಳನ್ನು ನೀವು ಪರಿಗಣಿಸಬಹುದು.

  MORE
  GALLERIES

 • 29

  Road Trips: ಬೇಸಿಗೆ ಪ್ರವಾಸಕ್ಕೆ ಈ ರೋಡ್ ಬೆಸ್ಟ್, ಸುಂದರವಾದ ರಸ್ತೆಯಲ್ಲಿ ಹೋಗ್ತಿದ್ರೆ ಬಿಸಿಲ ಬೇಗೆಯೇ ತಾಗಲ್ಲ!

  ವಿಶಾಖಪಟ್ಟಣಂ ನಿಂದ ಅರಕು ಕಣಿವೆಗೆ ಹೋಗುವ ರಸ್ತೆ: ಅರಕು ಕಣಿವೆ ವಿಶಾಖಪಟ್ಟಣಂ ನಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ ಸ್ವರ್ಗೀಯ ತಾಣವಾಗಿದೆ ಮತ್ತು ಇದು ವಾರಾಂತ್ಯದ ಪ್ರವಾಸಕ್ಕೆ ತುಂಬಾನೇ ಸೂಕ್ತವಾಗಿದೆ. ಪ್ರಯಾಣಿಕರು ಅರಕು ಕಣಿವೆಗೆ ಹೋಗಲು ಟ್ಯಾಕ್ಸಿ ಅಥವಾ ರೈಲು ಪ್ರಯಾಣವನ್ನು ಆಯ್ಕೆ ಮಾಡಿಕೊಳ್ಳಬಹುದು. ರೈಲಿನಲ್ಲಿ ಹೋದರಂತೂ ನಿಮಗೆ ದಾರಿಯುದ್ದಕ್ಕೂ ರಮಣೀಯ ದೃಶ್ಯಗಳು ನೋಡಲು ಸಿಗುತ್ತವೆ.

  MORE
  GALLERIES

 • 39

  Road Trips: ಬೇಸಿಗೆ ಪ್ರವಾಸಕ್ಕೆ ಈ ರೋಡ್ ಬೆಸ್ಟ್, ಸುಂದರವಾದ ರಸ್ತೆಯಲ್ಲಿ ಹೋಗ್ತಿದ್ರೆ ಬಿಸಿಲ ಬೇಗೆಯೇ ತಾಗಲ್ಲ!

  ಶಿಲ್ಲಾಂಗ್-ಚಿರಾಪುಂಜಿ ರಸ್ತೆ: ಆಧುನಿಕ ಭಾರತದ ಸ್ಕಾಟ್ಲೆಂಡ್ ಅಂತಾನೆ ಕರೆಯಲ್ಪಡುವ ಶಿಲ್ಲಾಂಗ್ ಉತ್ತಮವಾದ ಹವಾಮಾನ, ಮೊಮೊಸ್ ಮತ್ತು ಅದರ ಸುಂದರವಾದ ರಸ್ತೆಗಳು ಜನರ ಹೃದಯವನ್ನು ಸೆಳೆಯಲು ಎಂದಿಗೂ ಹಿಂದೆ ಬಿದ್ದಿಲ್ಲ. ಅತೀ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಒಂದು ಅಂತ ಪರಿಗಣಿಸಲ್ಪಟ್ಟಿರುವ ಚಿರಾಪುಂಜಿ ಅನೇಕ ಸಾಹಸ ಕ್ರೀಡೆಗಳಾದ ಬೋಟಿಂಗ್, ಕಯಾಕಿಂಗ್, ಕ್ಯಾನೋಯಿಂಗ್ ಮತ್ತು ಜಿಪ್ಲೈನಿಂಗ್ ಅನ್ನು ಸಹ ಹೊಂದಿದೆ. ಶಿಲ್ಲಾಂಗ್ ನಿಂದ ಚಿರಾಪುಂಜಿಗೆ ರಸ್ತೆ ಮೂಲಕ ಪ್ರಯಾಣಿಸಿದರೆ ವಾರ್ಡ್ಸ್ ಸರೋವರ, ಕುದುರೆ ಹೆಜ್ಜೆಯ ಆಕಾರದ ಕೃತಕ ಕೊಳ, ಶಿಲ್ಲಾಂಗ್ ಶಿಖರ, ವಾಹ್ ಕಾಬಾ ಜಲಪಾತಗಳು ಮತ್ತು ಡೈಂತ್ಲೆನ್ ಜಲಪಾತಗಳನ್ನು ನೋಡಬಹುದು.

  MORE
  GALLERIES

 • 49

  Road Trips: ಬೇಸಿಗೆ ಪ್ರವಾಸಕ್ಕೆ ಈ ರೋಡ್ ಬೆಸ್ಟ್, ಸುಂದರವಾದ ರಸ್ತೆಯಲ್ಲಿ ಹೋಗ್ತಿದ್ರೆ ಬಿಸಿಲ ಬೇಗೆಯೇ ತಾಗಲ್ಲ!

  ಬೆಂಗಳೂರಿನಿಂದ ಊಟಿಗೆ ಹೋಗುವ ರಸ್ತೆ: ನಿಮಗೆ ತಿರುಗುವ ರಸ್ತೆಗಳಲ್ಲಿ ಪ್ರಯಾಣಿಸಿದರೆ ವಾಂತಿ ಬರುವ ಹಾಗಿದ್ದರೆ, ಈ ರಸ್ತೆ ಪ್ರವಾಸವು ನಿಮಗಾಗಿ ಅಲ್ಲದಿರಬಹುದು. ಏಕೆಂದರೆ ಬೆಂಗಳೂರಿನಿಂದ ಊಟಿಗೆ ಹೋಗುವ ರಸ್ತೆಯಲ್ಲಿ ಸುಮಾರು 36 ತಿರುವುಗಳಿವೆ. ಈ ರಸ್ತೆಯಲ್ಲಿ ಪ್ರಯಾಣಿಸುವುದು ನಿಮಗೆ ರೋಲರ್ ಕೋಸ್ಟರ್ ಆಟ ಆಡಿದ ಹಾಗೆ ಅನ್ನಿಸಬಹುದು. ಈ ರಸ್ತೆ ಪ್ರವಾಸದ ಹೆಚ್ಚು ಆಕರ್ಷಕ ಅಂಶವೆಂದರೆ ಊಟಿ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸುಂದರವಾದ ದೃಶ್ಯಗಳು ಅಂತ ಹೇಳಬಹುದು.

  MORE
  GALLERIES

 • 59

  Road Trips: ಬೇಸಿಗೆ ಪ್ರವಾಸಕ್ಕೆ ಈ ರೋಡ್ ಬೆಸ್ಟ್, ಸುಂದರವಾದ ರಸ್ತೆಯಲ್ಲಿ ಹೋಗ್ತಿದ್ರೆ ಬಿಸಿಲ ಬೇಗೆಯೇ ತಾಗಲ್ಲ!

  ಚಂಡೀಗಢ ದಿಂದ ಕಸೋಲ್ : ಕಸೋಲ್ ಗೆ ಒಮ್ಮೆ ಭೇಟಿ ನೀಡಿದರೆ ಸಾಕು, ಅವರು ಅಲ್ಲಿಂದ ಮತ್ತೆ ಮನೆಗೆ ಹಿಂದಿರುಗಿ ಬರಲು ಇಷ್ಟಪಡುವುದಿಲ್ಲ, ಅಷ್ಟರ ಮಟ್ಟಿಗೆ ಇಲ್ಲಿನ ಸ್ಥಳ ರಮಣೀಯವಾಗಿವೆ. ಅದರಲ್ಲೂ ಚಂಡೀಗಢ ದಿಂದ ಕಸೋಲ್ ಗೆ ಹೋಗುವ ರಸ್ತೆಯಂತೂ ತುಂಬಾನೇ ಚೆನ್ನಾಗಿದೆ. ಚಂಡೀಗಢದ ರಸ್ತೆಯ ಎರಡು ಬದಿಗಳಲ್ಲಿರುವ ಆ ವಿಶಾಲವಾದ ಹಸಿರು ಗದ್ದೆಗಳನ್ನು ದಾಟಿಕೊಂಡು ಕಸೋಲ್ ನ ಬೆಟ್ಟಗಳಿಗೆ ಪ್ರಯಾಣಿಸುತ್ತಿರುವಾಗ, ದೃಶ್ಯಗಳು ಒಳ್ಳೆ ಚಲನಚಿತ್ರದ ಚಿತ್ರೀಕರಣಕ್ಕೆ ಸೆಟ್ ಹಾಕಿದಂತೆ ಅನ್ನಿಸುತ್ತದೆ. ಕಸೋಲ್ ತನ್ನ ಅದ್ಭುತ ಚಾರಣಗಳು ಮತ್ತು ರುಚಿಕರವಾದ ಇಸ್ರೇಲಿ ಆಹಾರಕ್ಕೆ ತುಂಬಾನೇ ಹೆಸರುವಾಸಿಯಾಗಿದೆ.

  MORE
  GALLERIES

 • 69

  Road Trips: ಬೇಸಿಗೆ ಪ್ರವಾಸಕ್ಕೆ ಈ ರೋಡ್ ಬೆಸ್ಟ್, ಸುಂದರವಾದ ರಸ್ತೆಯಲ್ಲಿ ಹೋಗ್ತಿದ್ರೆ ಬಿಸಿಲ ಬೇಗೆಯೇ ತಾಗಲ್ಲ!

  ದೆಹಲಿಯಿಂದ ಪರ್ವಾನೂಗೆ ಹೋಗುವ ರಸ್ತೆ: ಪರ್ವಾನೂ ಹಿಮಾಚಲ ಪ್ರದೇಶದ ಒಂದು ಗಿರಿಧಾಮವಾಗಿದ್ದು, ದೆಹಲಿಯಿಂದ ಆರು ಗಂಟೆಗಳ ಮನಮೋಹಕ ಪ್ರಯಾಣ. ಈ ಸ್ಥಳದ ವಿಶೇಷತೆ ಏನು ಅಂತ ದೆಹಲಿಯಲ್ಲಿ ಇರುವ ಜನರಿಗೆ ಸರಿಯಾಗಿ ತಿಳಿದಿರುತ್ತದೆ. ಏಕೆಂದರೆ ರಜೆ ಸಿಕ್ಕರೆ ಸಾಕು ದೆಹಲಿ ಜನರು ಈ ಸ್ಥಳಕ್ಕೆ ಹೋಗಲು ಇಷ್ಟಪಡುತ್ತಾರೆ. ಈ ಸ್ಥಳವು ಹಿಮಾಚಲದ ಅತಿದೊಡ್ಡ ಸಗಟು ಮಾರುಕಟ್ಟೆಗೆ ನೆಲೆಯಾಗಿದೆ, ನೀವು ನಿಮ್ಮ ದಿನಸಿ ಸ್ಟಾಕ್ ಅನ್ನು ಇಲ್ಲಿ ಖರೀದಿಸಬಹುದು. ಪರ್ವಾನೂ ಹಸಿರು ಬೆಟ್ಟಗಳು ಮತ್ತು ಕಣಿವೆಗಳ ರಮಣೀಯ ನೋಟವನ್ನು ನೀಡುತ್ತದೆ.

  MORE
  GALLERIES

 • 79

  Road Trips: ಬೇಸಿಗೆ ಪ್ರವಾಸಕ್ಕೆ ಈ ರೋಡ್ ಬೆಸ್ಟ್, ಸುಂದರವಾದ ರಸ್ತೆಯಲ್ಲಿ ಹೋಗ್ತಿದ್ರೆ ಬಿಸಿಲ ಬೇಗೆಯೇ ತಾಗಲ್ಲ!

  ದೆಹಲಿಯಿಂದ ಮೊರ್ನಿ ಹಿಲ್ಸ್ : ಮೊರ್ನಿ ಹಿಲ್ಸ್ ದೆಹಲಿ ನಗರದಿಂದ ಐದು ಗಂಟೆಗಳ ಪ್ರಯಾಣ. ಮೊರ್ನಿ ಹಿಲ್ಸ್ ಹರಿಯಾಣದ ಏಕೈಕ ಗಿರಿಧಾಮವಾಗಿದೆ. ಲಾಂಗ್ ಡ್ರೈವ್ ಹೊರತಾಗಿ, ಠಾಕೂರ್ ದ್ವಾರ ದೇವಾಲಯದಂತಹ ಇನ್ನೂ ಅನೇಕ ಅದ್ಭುತಗಳನ್ನು ಇಲ್ಲಿ ನೀವು ನೋಡಬಹುದು, ಇದಕ್ಕೆ ಹತ್ತಿರದಲ್ಲಿ 7ನೇ ಶತಮಾನದ ಕೆತ್ತನೆಗಳು ಸಹ ನೀವು ನೋಡಬಹುದು.

  MORE
  GALLERIES

 • 89

  Road Trips: ಬೇಸಿಗೆ ಪ್ರವಾಸಕ್ಕೆ ಈ ರೋಡ್ ಬೆಸ್ಟ್, ಸುಂದರವಾದ ರಸ್ತೆಯಲ್ಲಿ ಹೋಗ್ತಿದ್ರೆ ಬಿಸಿಲ ಬೇಗೆಯೇ ತಾಗಲ್ಲ!

  ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ: ಭಾರತದ ಅತ್ಯಂತ ಜನನಿಬಿಡ ರಸ್ತೆಗಳಲ್ಲಿ ಒಂದಾದ ಮುಂಬೈ-ಪುಣೆ ಎಕ್ಸ್‌ಪ್ರೆಸ್ ವೇ ಈ ಎರಡು ನಗರಗಳ ನಡುವೆ ಸಂಚರಿಸುವ ಜನರಿಗೆ ತುಂಬಾನೇ ಸಹಾಯಕಾರಿಯಾಗಿದೆ. ಕಲಾಂಬೋಲಿಯಿಂದ ಪುಣೆಯ ಕಿವಾಲೆಗೆ ಕೇವಲ ಎರಡು ಗಂಟೆಗಳಲ್ಲಿ ಪ್ರಯಾಣಿಸಬಹುದು. ಆದರೆ ಈ ರಸ್ತೆಯ ಬಗ್ಗೆ ತುಂಬಾ ಆಕರ್ಷಣೀಯವಾದ ವಿಷಯವೆಂದರೆ ರಸ್ತೆ ಬದಿಗಳಲ್ಲಿರುವ ಸುಂದರವಾದ ಹಸಿರು ದೃಶ್ಯ, ಸುರಂಗ ಮಾರ್ಗಗಳು ಮತ್ತು ಅಂಡರ್ ಪಾಸ್ ಗಳು, ಇದು ಭವ್ಯವಾದ ಸಹ್ಯಾದ್ರಿ ಪರ್ವತ ಶ್ರೇಣಿಗಳ ಮೂಲಕ ಹಾದು ಹೋಗುತ್ತದೆ.

  MORE
  GALLERIES

 • 99

  Road Trips: ಬೇಸಿಗೆ ಪ್ರವಾಸಕ್ಕೆ ಈ ರೋಡ್ ಬೆಸ್ಟ್, ಸುಂದರವಾದ ರಸ್ತೆಯಲ್ಲಿ ಹೋಗ್ತಿದ್ರೆ ಬಿಸಿಲ ಬೇಗೆಯೇ ತಾಗಲ್ಲ!

  ಓಲ್ಡ್ ಸಿಲ್ಕ್ ರೂಟ್: ಈ ಓಲ್ಡ್ ಸಿಲ್ಕ್ ರೂಟ್ ಟಿಬೆಟ್ ಮತ್ತು ಭಾರತದ ಲಾಸಾ ನಡುವಿನ ವ್ಯಾಪಾರವನ್ನು ಉತ್ತೇಜಿಸಿದೆ ಅಂತಾನೆ ಹೇಳಬಹುದು. ಆದರೆ ಇಂದು ವ್ಯಾಪಾರಕ್ಕಾಗಿ ಇತರ ಆಧುನಿಕ ಮಾರ್ಗಗಳಿವೆಯಾದರೂ, ಓಲ್ಡ್ ಸಿಲ್ಕ್ ರೂಟ್ ದೇಶದ ಅತ್ಯಂತ ರಮಣೀಯ ಮಾರ್ಗಗಳಲ್ಲಿ ಒಂದಾಗಿದೆ, ಏಕೆಂದರೆ ಇಲ್ಲಿ ನಮಗೆ ಉತ್ತರದ ಭವ್ಯವಾದ ಪರ್ವತ ಶ್ರೇಣಿಗಳ ನೋಟ ನೋಡಲು ಸಿಗುತ್ತದೆ. ವಾಸ್ತವವಾಗಿ, ನಾಥಾಂಗ್ ಕಣಿವೆ, ನಿಮ್ಮ ಡ್ರೈವ್ ನಲ್ಲಿ ನೀವು ಹಾದು ಹೋಗುವ ಸ್ಥಳಗಳಲ್ಲಿ ಒಂದಾಗಿದೆ, ಇದು ಜಲಪಾತಗಳ ಕೇಂದ್ರವಾಗಿದ್ದು, ಇಲ್ಲಿ ನಿಲ್ಲಿಸಿ ನೀವು ಕೆಲವು ಬೆರಗುಗೊಳಿಸುವ ಫೋಟೋಗಳನ್ನು ಸಹ ಕ್ಲಿಕ್ ಮಾಡಿಕೊಳ್ಳಬಹುದು.

  MORE
  GALLERIES