ನೀವು ಆರ್ಡರ್ ಮಾಡಿದ ಜಸ್ಟ್ 10 ನಿಮಿಷದಲ್ಲೇ ನಿಮ್ಮಿಷ್ಟದ ಎಣ್ಣೆ ಬಾಟಲಿ ನಿಮ್ಮ ಮನೆಗೆ ತಲುಪುತ್ತದೆ. ಹೈದರಾಬಾದ್ ಮೂಲದ ಸ್ಟಾರ್ಟ್ ಅಪ್ ಕಂಪನಿಯೊಂದು ವಿನೂತನ ಪ್ರಯತ್ನದ ಮೂಲಕ ಮದ್ಯಪ್ರಿಯರ ಮನಸ್ಸು ಗೆಲ್ಲುವುದಕ್ಕೆ ಮುಂದಾಗಿದೆ. ಆನ್ಲೈನ್ನಲ್ಲಿ ನೀವು ಎಣ್ಣೆಯನ್ನು ಬುಕ್ ಮಾಡಿದರೆ, ನೀವು ನೀಡಿದ ವಿಳಾಸಕ್ಕೆ ಎಣ್ಣೆಯನ್ನು ತಲುಪಿಸಲಾಗುವುದು ಎಂದು ಕಂಪನಿಯು ಹೇಳಿಕೊಂಡಿದೆ.
ಮದ್ಯವನ್ನು ಗ್ರಾಹಕರ ಮನೆಯ ಬಾಗಿಲಿಗೆ ಕೇವಲ 10 ನಿಮಿಷಗಳಲ್ಲಿ ತಲುಪಿಸಲಾಗುತ್ತದೆ. ಇನ್ನೋವೆಂಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಪ್ರಮುಖ ಬ್ರ್ಯಾಂಡ್ ಬೂಜಿಯಾಗಿದ್ದು, ಇದು ಭಾರತದಲ್ಲಿ 10 ನಿಮಿಷದಲ್ಲೇ ಮದ್ಯವನ್ನು ವಿತರಿಸುವ ಮೊದಲ ಮದ್ಯ ವಿತರಣಾ ವೇದಿಕೆಯಾಗಿದೆ. ಆನ್ಲೈನ್ ಮದ್ಯದ ವಿತರಣೆಯನ್ನು ಈಗಾಗಲೇ ದೇಶದ ಹಲವಾರು ಭಾಗಗಳಲ್ಲಿ ಶುರು ಮಾಡಲಾಗಿದೆ. ಆದರೆ ಯಾವುದೇ ಕಂಪನಿಗಳು ಬೂಜಿ ಮಾಡುವಷ್ಟು ವೇಗವಾಗಿ ಮದ್ಯವನ್ನು ವಿತರಣೆಯನ್ನು ಮಾಡುವುದಿಲ್ಲ ಎಂದು ಸ್ಟಾರ್ಟ್ಅಪ್ ಹೇಳಿಕೊಂಡಿದೆ.
ಇನ್ನೊವೆಂಟ್ ಟೆಕ್ನಾಲಜೀಸ್ ಇದು B2B ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ ಪ್ಲಾಟ್ಫಾರ್ಮ್ ಅನ್ನು ರಚಿಸಿದೆ ಎಂದು ಹೇಳಿದೆ, ಇದು ವಿತರಣಾ ವೆಚ್ಚವನ್ನು ಉತ್ತಮಗೊಳಿಸುತ್ತದೆ ಮತ್ತು Booozie ಅನ್ನು ಕೈಗೆಟುಕುವ ವೇದಿಕೆಯನ್ನಾಗಿ ಮಾಡುತ್ತದೆ. "ಗ್ರಾಹಕ ಬೇಡಿಕೆ ಮತ್ತು ಮಾರುಕಟ್ಟೆಯಲ್ಲಿನ ಪ್ರಸ್ತುತ ಪೂರೈಕೆಯಲ್ಲಿನ ಕೊರತೆಯನ್ನು ತಗ್ಗಿಸಲು ಅಗ್ರಿಗೇಟರ್ಗಳಿಗೆ ಬಾಗಿಲು ತೆರೆಯುವ ಪಶ್ಚಿಮ ಬಂಗಾಳ ಸರ್ಕಾರದ ಕ್ರಮವನ್ನು ನಾವು ಸ್ವಾಗತಿಸುತ್ತೇವೆ" ಎಂದು ಕಂಪನಿ ಹೇಳಿದೆ.