ಸಾಕಷ್ಟು ಜನರು ಹನಿಮೂನ್ಗೆಂದು ವಿದೇಶಕ್ಕೆ ತೆರಳುತ್ತಾರೆ. ಅದರಲ್ಲೂ ಸೆಲೆಬ್ರಿಟಿಗಳು ಹನಿಮೂನ್ ಎಂಜಾಯ್ ಮಾಡಲು ಮಾಲ್ಡೀವ್ಸ್. ಐರ್ಲ್ಯಾಂಡ್, ಇಟಲಿ,ಮೆಕ್ಸಿಕೊ, ಸೈಂಟ್ ಲೂಸಿಯಾ, ಸ್ಪೈನ್, ಫಿಜಿ ಮುಂತಾದ ಪ್ರವಾಸಿ ತಾಣಗಳಿಗೆ ತೆರಳಿ ಒಂದಿಷ್ಟು ಕಾಲ ಕಳೆಯುತ್ತಾ ಎಂಜಾಯ್ ಮಾಡುತ್ತಾ ಬರುತ್ತಾರೆ.
2/ 8
ಆದರೆ ವಿದೇಶದಂತೆ ಭಾರತದಲ್ಲೂ ಬೆಸ್ಟ್ ಹನಿಮೂನ್ಗೆ ಸೂಕ್ತವಾದ ಸ್ಥಳಗಳಿವೆ. ಅದರಲ್ಲೂ ಲಕ್ಷದೀಪ ಹನಿಮೂನ್ಗೆ ಹೇಳಿ ಮಾಡಿದ ಸ್ಥಳವಾಗಿದೆ. ಮತ್ತೊಂದೆಡೆ ಈ ಪ್ರದೇಶದಲ್ಲಿ ಕೊರೋನಾ ಸಂಖ್ಯೆ ಕೂಡ ಕಡಿಮೆಯಿದೆ.
3/ 8
ಹೌದು. ಲಕ್ಷದ್ವೀಪದಲ್ಲಿ ಸಾಕಷ್ಟು ಐಸ್ಲ್ಯಾಂಡ್ಗಳಿವೆ. ಹನಿಮೂನ್ಗೆ ಮಾತ್ರವಲ್ಲದೆ ಪ್ರವಾಸಿಗರು ಕೈಬೀಸಿ ಕರೆಯುವ ಈ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.
4/ 8
ಕವರತ್ತಿ ದ್ವೀಪ: ಲಕ್ಷದ್ವೀಪದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ದ್ವೀಪವೆಂದರೆ ಕವರತ್ತಿ ದ್ವೀಪ. ಉಜ್ರಾ ಮಸೀದಿ ಇಲ್ಲಿದೆ. ಮಾತ್ರವಲ್ಲದೆ ಸುಮಾರು 52 ಮಸೀದಿಯನ್ನು ಇಲ್ಲಿ ಕಾಣಬಹುದು.
5/ 8
ಮಿನಿಕಾಯ್: ಹನಿಮೂನ್ ಹೇಳಿ ಮಾಡಿಸಿದ ದ್ವೀಪ ಇದಾಗಿದೆ. ಇಲ್ಲಿ 10 ಹಳ್ಳಿಗಳಿವೆ.
6/ 8
ಅಗತ್ತಿ ದ್ವೀಪ: ಲಕ್ಷದ್ವೀಪಗಳಲ್ಲಿ ಕಂಡುಬರುವ ದ್ವೀಪಗಳಲ್ಲಿ ಇದು ಕೂಡ ಒಂದು ಇಲ್ಲಿ ಸ್ಕೂಬಾ ಡ್ರೈವಿಂಗ್ ಮಾಡುತ್ತಾರೆ
7/ 8
ಕಡ್ಮತ್ ದ್ವೀಪ; ಈ ದ್ವೀಪ ಕೂಡ ಜನಪ್ರಿಯವಾಗಿದೆ ಅನೇಕರು ಹನಿಮೂನಿಗೆಂದು ಕಡ್ಮತ್ ದ್ವೀಪಕ್ಕೆ ಹೋಗುತ್ತಾರೆ.
8/ 8
ಗೋಲ್ಡ್ ದ್ವೀಪ: ಕಣ್ಣೀರಿನ ಹನಿಯಂತೆ ಈ ದ್ವೀಪ ಕಾಣಿಸುತ್ತದೆ. ಹಾಗಾಗಿ ಗೋಲ್ಡ್ ದ್ವೀಪ ಎಂದು ಹೆಸರು ಬಂದಿದೆ