ನೀವು ವಿವಿಧ ಉದ್ಯಾನಗಳ ಬಗ್ಗೆ ಕೇಳಿರಬಹುದು ಆದರೆ ನೀವು ಎಂದಾದರೂ ಬೆಕ್ಕಿನ ಗಾರ್ಡನ್ ಬಗ್ಗೆ ಕೇಳಿದ್ದೀರಾ? ಬೆಕ್ಕಿನ ಗಾರ್ಡನ್ ಹೊಸ ಪದವಾಗಿರಬಹುದು ಆದರೆ ಗುಜರಾತಿನ ಕಚ್ ನಲ್ಲಿ ಉಪೇಂದ್ರ ಗೋಸ್ವಾಮಿ ಎಂಬುವರು ತಮ್ಮ ಮನೆಯಲ್ಲಿ ಬೆಕ್ಕಿನ ಗಾರ್ಡನ್ ನ ನಿರ್ಮಿಸಿದ್ದಾರೆ. ತನ್ನ ಮೃತ ಸಹೋದರಿ ಬೆಕ್ಕಿನ ರೂಪದಲ್ಲಿ ಮರಳಿದ್ದಾಳೆ ಎಂದು ನಂಬಿ ಬೆಕ್ಕುಗಳೊಂದಿಗೆ ವಾಸಿಸುತ್ತಿದ್ದಾರೆ.
[caption id="attachment_612491" align="aligncenter" width="1200"] ಇವರ ಮನೆಯಲ್ಲಿ 28 ಪರ್ಷಿಯನ್ ಬೆಕ್ಕುಗಳು ಸೇರಿದಂತೆ 200 ಬೆಕ್ಕುಗಳು, 6 ನಾಯಿಗಳು ಇವೆ.
[/caption]
2/ 7
ಕಸ್ಟಮ್ ಹೌಸ್ ಏಜೆಂಟ್ ಆಗಿರುವ ಗೋಸ್ವಾಮಿ ಅವರ ಸಹೋದರಿ ಸಾವಿನ ಬಳಿಕ ಬೆಕ್ಕಿನ ರೂಪದಲ್ಲಿ ಬಂದಿದ್ದಾರೆ ಎಂದು ಅವರು ಬಲವಾಗಿ ನಂಬಿದ್ದಾರೆ. ಅಂದಿನಿಂದ ಅವರು ಬೆಕ್ಕುಗಳನ್ನು ಪ್ರೀತಿಸಲು ಪ್ರಾರಂಭಿಸಿದರು. ಈಗ ಬೆಕ್ಕಿನ ಗಾರ್ಡನ್ನೇ ನಿರ್ಮಿಸಿದ್ದಾರೆ.
3/ 7
ಉಪೇಂದ್ರ ಗೋಸ್ವಾಮಿ ಒಂದು ಸುಂದರ ಪ್ಲಾಟ್ ಖರೀದಿಸಿ, ಅದರಲ್ಲಿ ಮಾರ್ಡನ್ ಆಗಿ ಬೆಕ್ಕಿನ ಗಾರ್ಡನ್ ನಿರ್ಮಿಸಿದ್ದಾರೆ.
4/ 7
ಬೆಕ್ಕುಗಳಿಗಾಗಿ ಮಲಗುವ ಸ್ಥಳಗಳನ್ನು ನಿರ್ಮಿಸಲಾಗಿದೆ. ಈ ಕ್ಯಾಟ್ ಗಾರ್ಡನ್ ಎಲ್ಲಾ ಕಡೆ ಎಸಿ ಅಳವಡಿಸಲಾಗಿದೆ. ಸತ್ತ ಬೆಕ್ಕುಗಳಿಗೆ ಸಮಾಧಿಯನ್ನು ಕೂಡ ನಿರ್ಮಿಸಿದ್ದಾರೆ.
5/ 7
ಬೆಕ್ಕುಗಳ ಸಾಮ್ರಾಜ್ಯವನ್ನು ನಿರ್ವಹಿಸಲು ಇವರಿಗೆ ತಿಂಗಳಿಗೆ 1.5 ಲಕ್ಷ ವೆಚ್ಚವಾಗುತ್ತಿದೆ.
6/ 7
ಗೋಸ್ವಾಮಿ ಮತ್ತು ಅವರ ಪತ್ನಿ ಪೂಜಾ ಈ ಬೆಕ್ಕುಗಳನ್ನು ನೋಡಿಕೊಳ್ಳುತ್ತಾರೆ.
7/ 7
ಇನ್ನು ಆಸಕ್ತಿ ಇರುವವರು ಬೆಕ್ಕಿನ ಗಾರ್ಡನ್ ಗೆ ಭೇಟಿ ನೀಡಬಹುದು. ಭಾನುವಾರ ಬೆಕ್ಕಿನ ಉದ್ಯಾನವನವನ್ನು ನೋಡಲು ಪ್ರಾಣಿಪ್ರಿಯರಿಗೆ ಅವಕಾಶವಿದೆ