ಕ್ರಿಸ್ಮಸ್ ಮತ್ತು ಹೊಸ ವರ್ಷದ ಪರವಾಗಿ ಶಾಲಾ ಕಾಲೇಜುಗಳಿ, ಹಲವಾರು ಕಂಪೆನಿಗಳಿಗೆ ಸಾಲಾಗಿ ರಜೆ ಇದೆ. ಹೀಗಾಗಿ ಅತಿ ಹೆಚ್ಚು ಜನರು ಕೊಡಗು ಪ್ರವಾಸಕ್ಕೆ ಸಿದ್ಧತೆ ನಡೆಸಿದ್ದಾರೆ. ಇದರಿಂದ ಡಿ.24ರಿಂದ ಜ.10ರ ವರೆಗೆ ಜಿಲ್ಲೆಯ ಬಹುತೇಕ ಹೋಂಸ್ಟೇ, ರೆಸಾರ್ಟ್ ಮತ್ತು ಹೋಟೆಲ್ಗಳು ಈಗಾಗಲೇ ಬುಕ್ಕಿಂಗ್ ಫುಲ್ ಆಗಿದೆ. ಕ್ರಿಸ್ಮಸ್ ಮತ್ತು ನ್ಯೂ ಇಯರ್ ಆಸುಪಾಸಿನ ದಿನಗಳಂತೂ ಬೇರೆ ಯಾವುದೋ ಕೆಲಸಕ್ಕಾಗಿ ಜಿಲ್ಲೆಗೆ ಬರುವವರಿಗೂ ರೂಂಗಳು ಸಿಗದಂತಹ ವಾತಾವರಣ ನಿರ್ಮಾಣವಾಗಲಿದೆ.
ಇಯರ್ ಎಂಡ್ಗೆ ದಿನಗಳಲ್ಲಿ ಐಶಾರಾಮಿ ಹೋಟೆಲ್ ಮತ್ತು ರೆಸಾರ್ಟ್ಗಳಲ್ಲಿನ ಎಲ್ಲಾ ರೂಂಗಳನ್ನೂ ಈಗಾಗಲೇ ಕಾಯ್ದಿರಿಸಲ್ಪಟ್ಟಿದ್ದು, ಮಧ್ಯಮ ಮತ್ತು ಸಾಧಾರಣ ಹೊಂ ಸ್ಟೇ, ಲಾಡ್ಜ್, ಹೋಟೆಲ್ಗಳಲ್ಲಿ ಮಾತ್ರ ಕೊಠಡಿಗಳು ಲಭ್ಯವಿದೆ. ಆನ್ಲೈನ್ ಮತ್ತು ಟೆಲಿಫೋನ್ ಮೂಲಕ ಸಾಕಷ್ಟು ವಿಚಾರಣೆಗಳು ಬರುತ್ತಿದ್ದು, ತಮ್ಮ ದರಕ್ಕೆ ಹೊಂದಾಣಿಕೆಯಾಗುವವರ ಬುಕ್ಕಿಂಗ್ ಸ್ವೀಕರಿಸುವಲ್ಲಿ ಹೋಟೆಲ್, ಲಾಡ್ಜ್ ಸಿಬ್ಬಂದಿ ನಿರತರಾಗಿದ್ದಾರೆ.
ಈ ಹಿಂದೆ ಕೋವಿಡ್ನ ನಿಯಮಗಳಿಂದಾಗಿ ಪ್ರವಾಸೋದ್ಯಮ ಎಲ್ಲವೂ ಮುಚ್ಚಲಾಗಿತ್ತು ಹಾಗೆಯೇ ಟೂರಿಸಂನಿಂದ ಯಾವುದೇ ಆದಾಯವಿಲ್ಲದೇ ಪ್ರವಾಸೋದ್ಯಮಿಗಳು ಕಂಗೆಟ್ಟಿದ್ದರು. ದಸರಾ, ದೀಪಾವಳಿಯ ವೈಬ್ನಿಂದ ಹೆಚ್ಚಿನ ಪ್ರವಾಸಿಗರ ಆಗಮನದಿಂದ ಕೂಲ್ ಆಗಿದ್ದಾರೆ. ನ್ಯೂ ಇಯರ್ಗೂ ಪ್ರವಾಸಿಗರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದನ್ನೇ ನಂಬಿಕೊಂಡು ಬಂಡಾವಾಳ ಸುರಿದಿರುವವರ ಮುಖದಲ್ಲಿ ಖುಷಿಯು ಕಾಣುತ್ತಿದೆ.
ಹೊಸವರ್ಷದ ದಿನದಂದು ಬೆಂಗಳೂರಿನಂತೆ ಕೊಡಗಿನಲ್ಲೂಸಮಯದ ಸಡಿಲಿಕೆ ಬೇಕೆಂದು ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಅಸೋಸಿಯೇಷನ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ಆ ದಿನ ಜಿಲ್ಲೆಗೆ ಹೆಚ್ಚಿನ ಪ್ರವಾಸಿಗರು ಆಗಮಿಸಲಿದ್ದು, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗಿಯಾಗುತ್ತಾರೆ. ಈ ಹಿನ್ನೆಲೆ ಬಾರ್ ಮತ್ತು ರೆಸ್ಟೋರೆಂಟ್ಗಳನ್ನು ರಾತ್ರಿ 2ರವರೆಗೆ ತೆರೆಯಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ.
ಕೊಡಗಿನಲ್ಲಿ ಇರುವ ಫೇಮಸ್ ಲಾಡ್ಜ್, ರೆಸಾರ್ಟ್, ಹೋಂ ಸ್ಟೇಗಳನ್ನು ಹೊರತುಪಡಿಸಿ ಬೇರೆ ಕಡೆಗಳಲ್ಲಿಏಕರೀತಿಯ ದರಪಟ್ಟಿ ಇರುವುದಿಲ್ಲ. ಇಲ್ಲಿ ಸೀಜನ್ಗೆ ಅನುಗುಣವಾಗಿ ಕೊಠಡಿಗಳ ದರವೂ ಬದಲಾಗುತ್ತಿರುತ್ತದೆ. ಮಳೆಗಾಲದಂತಹ ಸಮಯದಲ್ಲಿಒಂದು ರೂಂ ಬಾಡಿಗೆ 1000 ರೂ. ಇದ್ದರೆ, ಚಳಿಗಾಲದ ಸಮಯದಲ್ಲಿಅದೇ ರೂಂ ಬೆಲೆ 3000 ದಿಂದ 4000 ರೂ. ಗಳವರೆಗೆ ಹೆಚ್ಚಿಸಲಾಗುತ್ತದೆ. ಪ್ರವಾಸಿಗರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ದರ ಹೆಚ್ಚಿಸುವುದು ಮತ್ತು ಇಳಿಸುವುದು ಮಾಡಲಾಗುತ್ತದೆ. ಈ ಬಾರಿಯೂ ಅದೇ ರೀತಿಯಾಗಿದ್ದು, ಜಾಸ್ತಿಯಾಗಿ ಬುಕ್ಕಿಂಗ್ ಬರುತ್ತಿರುವ ಹಿನ್ನೆಲೆ ದರವೂ ದುಬಾರಿಯಾಗಿದೆ ಎಂದು ಹೊಟೆಲ್ ಸಿಬ್ಬಂದಿ ವರ್ಗದವರು ತಿಳಿಸಿದ್ದಾರೆ.