2. ರಾಜಧಾನಿ ಎಕ್ಸ್‌ಪ್ರೆಸ್ (Rajadhani Express), ಶತಾಬ್ಧಿ ಎಕ್ಸ್‌ಪ್ರೆಸ್ (Shatabdi Express), ದುರಂತೋ ಎಕ್ಸ್‌ಪ್ರೆಸ್‌ನಂತಹ (Duronto Express) ರೈಲುಗಳು ಪ್ರಯಾಣಿಕರಿಗೆ ಸೇವೆ ನೀಡುತ್ತಿವೆ. ಈ ಮೂರು ರೈಲುಗಳು ವೇಗ ಮತ್ತು ಸೌಲಭ್ಯಗಳ ವಿಷಯದಲ್ಲಿ ವಂದೇ ಭಾರತ್ ರೈಲಿಗೆ ಸ್ಪರ್ಧೆ ನೀಡುತ್ತವೆ. ಇವುಗಳಿಗೆ ಹೇಗೆ ಈ ಹೆಸರು ಬಂತು ಅನ್ನೋದರ ಮಾಹಿತಿ ಇಲ್ಲಿದೆ. (ಸಾಂದರ್ಭಿಕ ಚಿತ್ರ)
4. Shatabdi Express: ರಾಜಧಾನಿ ಎಕ್ಸ್‌ಪ್ರೆಸ್ ರೈಲು ಸಾವಿರಾರು ಕಿಲೋಮೀಟರ್‌ಗಳನ್ನು ಕ್ರಮಿಸಿದರೆ, ಶತಾಬ್ದಿ ಎಕ್ಸ್‌ಪ್ರೆಸ್ ರೈಲು 400 ಕಿಲೋಮೀಟರ್‌ಗಳಿಂದ 800 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ. ಇದು ಸಂಪೂರ್ಣವಾಗಿ ಚೇರ್ ಕಾರ್ ಕೋಚ್‌ಗಳನ್ನು ಒಳಗೊಂಡಿರುವ ರೈಲು. ಈ ರೈಲನ್ನು 1989 ರಲ್ಲಿ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 100 ನೇ ಜನ್ಮದಿನದಂದು ಉದ್ಘಾಟಿಸಲಾಯಿತು. ಹೀಗಾಗಿ ಈ ರೈಲಿಗೆ ಶತಾಬ್ಧಿ ಎಕ್ಸ್ ಪ್ರೆಸ್ ಎಂಬ ಹೆಸರು ಬಂದಿದೆ. ಈ ರೈಲು ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಶತಾಬ್ಧಿ ಎಕ್ಸ್‌ಪ್ರೆಸ್ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. (ಸಾಂದರ್ಭಿಕ ಚಿತ್ರ)
5. Duronto Express: ಮೇಲಿನ ಎರಡು ರೈಲುಗಳಿಗಿಂತ ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುವ ರೈಲು ದುರಂತೋ ಎಕ್ಸ್‌ಪ್ರೆಸ್. ದುರಂತೋ ಎಂಬುದು ಬಂಗಾಳಿ ಪದ. ಈ ಪದದ ಅರ್ಥ ನಿರಂತರ. ಇ-ರೈಲು ಕೆಲವೇ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಇದು ಗಂಟೆಗೆ 140 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ದುರಂತೋ ಎಕ್ಸ್‌ಪ್ರೆಸ್ ರೈಲು ವಾರಕ್ಕೆ ಎರಡು ಅಥವಾ ಮೂರು ಬಾರಿ ಮಾತ್ರ ಪ್ರಯಾಣಿಕರಿಗೆ ಲಭ್ಯವಿದೆ. (ಸಾಂದರ್ಭಿಕ ಚಿತ್ರ)