ನಿಮ್ಮ ಸಂಗಾತಿಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಕಿಸ್ ಅತ್ಯುತ್ತಮ ಮಾರ್ಗವಾಗಿದೆ. ಕಿಸ್ ಇಬ್ಬರು ಪ್ರೇಮಿಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಮತ್ತು ಅವರನ್ನು ಹತ್ತಿರ ತರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕಿಸ್ (Kiss) ಕೊಡುವಾಗ ಕಣ್ಣುಗಳು ಹೆಚ್ಚಾಗಿ ಮುಚ್ಚಿರುವುದನ್ನು ನೀವು ಚಲನಚಿತ್ರಗಳಲ್ಲಿ ನೋಡಿರಬಹುದು ಅಥವಾ ನೀವೇ ಅನುಭವಿಸಿರಬಹುದು. ಆದರೆ ಇದು ಯಾಕೆ ಹೀಗೆ ಅಂತ ಗೊತ್ತಾ?
ಮನಶ್ಶಾಸ್ತ್ರಜ್ಞರಾದ ಸಾಂಡ್ರಾ ಮರ್ಫಿ ಮತ್ತು ಪಾಲಿ ಡಾಲ್ಟನ್ ದಂಪತಿಗಳು ಪರಸ್ಪರ ಹತ್ತಿರವಾದಾಗ ಅನುಭವಿಸುವ ಭಾವನೆ 'ಸ್ಪರ್ಶದ ಭಾವನೆ' ಎಂದು ವಿವರಿಸಿದ್ದಾರೆ. ಹಾಗೆಯೇ ಹಲವಾರು ಕಪಲ್ಸ್ಗಳ ವಿಮರ್ಶೆಗಳನ್ನು ಇವರು ತಮ್ಮ ಸಂಶೋಧನೆಯಲ್ಲಿ ಉಲ್ಲೇಖಿಸಿದ್ದಾರೆ ಕೂಡ. ಇದರಿಂದ ತಿಳಿದು ಬಂದ ಉತ್ತರವೇನೆಂದರೆ, ಕಣ್ಣು ಮುಚ್ಚಿ ಕಿಸ್ ಕೊಡೋದ್ರಿಂದ ಸೇಫೆಸ್ಟ್ ಜಾಗ ಅಂತ ಅನಿಸುತ್ತೆ ಎಂದು ಹಲವಾರು ಜನರು ತಿಳಿಸಿದ್ದಾರಂತೆ.
ಕಣ್ಣು ಮುಚ್ಚಿ ಧ್ಯಾನ ಮಾಡೋದು ಗೊತ್ತು. ಯಾಕಂದ್ರೆ ಏಕಾಗ್ರತೆ ಬರುತ್ತದೆ ಮತ್ತು ನಮ್ಮ ಸುತ್ತಮುತ್ತಲಿನ ಎಲ್ಲಾ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿ ಬೇಕೆಂದು ಧ್ಯಾನ, ಪ್ರಾಣಾಯಾಮವನ್ನು ಮಾಡುತ್ತಾರೆ. ಈ ಸಮಯದಲ್ಲಿ ಕಣ್ಣು ಮುಚ್ಚುತ್ತೇವೆ ಅಲ್ವಾ? ಹಾಗೆಯೇ ಕಿಸ್ ಮಾಡ್ತಾ ಅಟೋಮ್ಯಾಟಿಕ್ ಕಣ್ಣುಗಳು ಕ್ಲೋಸ್ ಆಗುತ್ತೆ. ಹಾಗೆಯೇ ಚುಂಬಿಸೋದನ್ನೇ ಏಕಾಗ್ರತೆ ಮಾಡುತ್ತಾರೆ ಎಂದರ್ಥ.