ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಜಹಾದ್ ಹಾಗೂ ಗಂಡಾಗಿ ಹುಟ್ಟಿ ಹೆಣ್ಣಾಗಿಯೇ ಬದುಕು ನಡೆಸುತ್ತಿರುವ ಜಿಯಾ, ಬುಧವಾರ ಬೆಳಗ್ಗೆ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ತಂದೆ – ತಾಯಿಯಾಗಿದ್ದಾರೆ. ಅವರಿಬ್ಬರೂ ತೃತೀಯಲಿಂಗಿಗಳ ಪಟ್ಟಿಯಲ್ಲಿ ಗುರುತಿಸಿ ಕೊಂಡರು ಕೂಡ ಸಂಪೂರ್ಣವಾಗಿ ಜೈವಿಕ ಪರಿವರ್ತನೆಗೆ ಒಳಗಾಗಿಲ್ಲ. ಆದರೂ ಕೂಡ ಇವರಿಬ್ಬರೂ ಅನ್ಯೋನ್ಯವಾಗಿ ಜೀವಿಸುತ್ತ ಇರುವುದು ಗಮನಾರ್ಹ ಸಂಗತಿ.