Kerala: ಅದೃಷ್ಟ ಎಂದ್ರೆ ಇದು; ಸಿಗ್ನಲ್ನಲ್ಲಿ ಬಲೂನ್ ಮಾರುತ್ತಿದ್ದ ಹುಡುಗಿ ಇಂದು ಮಾಡೆಲ್
Kerala: ಅದೃಷ್ಟ ಅವಕಾಶ ಎನ್ನುವುದು ಯಾರ ಸ್ವತ್ತು ಅಲ್ಲ. ಅದು ಒಮ್ಮೆ ಬಂದರೆ ಆಯಿತು ಇಡೀ ಜೀವನವೇ ಬದಲಾಗುತ್ತದೆ. ಅಂತಹದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ. ರಸ್ತೆಯಲ್ಲಿ ಸಿಗ್ನಲ್ನಲ್ಲಿ ಬಲೂನ್ ಮಾರುತ್ತಿದ್ದ ಹುಡುಗಿ ಇದೀಗ ಮಾಡೆಲ್ ಆಗಿ ಎಲ್ಲರ ಗಮನ ಸಳೆದಿದ್ದಾಳೆ (Photos : photoman_official, ArjunKrishnan)
Kerala: ಕೇರಳದ ಬೀದಿ ವ್ಯಾಪಾರಿಯೊಬ್ಬರು ತನ್ನ ಮೇಕ್ ಓವರ್ನ ಫೋಟೋಗಳು ವೈರಲ್ ಆದ ನಂತರ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾಳೆ
2/ 8
ಕಿಸ್ಬು ದೇವಸ್ಥಾನದ ಬಳಿ ಬಲೂನ್ ಮಾರಾಟ ಮಾಡುತ್ತಿದ್ದಾಗ ಛಾಯಾಗ್ರಾಹಕ ಅರ್ಜುನ್ ಕೃಷ್ಣನ್ ಕಣ್ಣಿಗೆ ಬಿದ್ದಿದ್ದಾಳೆ. ಆಕೆ ಮುಗ್ದತೆ, ಚೆಲುವು ಕ್ಯಾಮೆರಾ ಕಣ್ಣಿನಲ್ಲಿ ಮೋಡಿ ಮಾಡಿದೆ.
3/ 8
ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರಕಟಿಸಿದ್ದಾರೆ. ಆಕೆಯನ್ನು ಗಮನಿಸಿದ ಅನೇಕರು ಆಕೆಯ ಪಾಲಿಗೆ ಹೊಸ ಅದೃಷ್ಟವನ್ನೇ ತೆರೆದರು.
4/ 8
ಆಕೆಯನ್ನು ಸಂಪರ್ಕಿಸಿ ಆಕೆ ಫೋಟೋಶೂಟ್ ನಡೆಸಿದ್ದಾರೆ. ಈಕೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ.
5/ 8
ಜನವರಿ 17 ರಂದು ಅಂಡಲೂರು ಕಾವು ಉತ್ಸವದಲ್ಲಿ ಕಿಸ್ಬು ಬಲೂನ್ಗಳನ್ನು ಮಾರುತ್ತಿದ್ದರು. ಆಕೆಯ ಭಾವನೆಗಳು ಏನನ್ನೋ ಹೇಳುವಂತಿತ್ತು. ತಕ್ಷಣಕ್ಕೆ ನಾನು ಆಕೆಯ ಫೋಟೋ ತೆಗೆದುಕೊಂಡೆ ಎಂದು ಅರ್ಜುನ್ ಕೃಷ್ಣನ್ ತಿಳಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ
6/ 8
ಒಂದೆರಡು ಛಾಯಾಚಿತ್ರಗಳನ್ನು ತೆಗೆದುಕೊಂಡ ನಂತರ, ಕಿಸ್ಬು ಮತ್ತು ಆಕೆಯ ತಾಯಿಗೆ ಈ ಫೋಟೋಗಳನ್ನು ತೋರಿಸಿದ ಅವರು ಖುಷಿಯಾದರು. ಇದಾದ ಬಳಿಕ ನಾನು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದೆ.
7/ 8
ಆಕೆಯ ತಾಯಿಯನ್ನು ಸಂಪರ್ಕಿಸಿ ಫೋಟೋಶೂಟ್ಗೆ ಮನವಿ ಮಾಡಿದ್ದಾರೆ. ಇದಾದ ಬಳಿಕ ಆಕೆ ಫೋಟೋಶೂಟ್ ನಡೆದಿದೆ. ಫೋಟೋ ಶೂಟ್ಗಾಗಿ, ಕಿಸ್ಬು ಸಾಂಪ್ರದಾಯಿಕ ಕಸವು ಸೀರೆಯಲ್ಲಿ ಚಿನ್ನದ ಆಭರಣಗಳೊಂದಿಗೆ ಗಮನ ಸೆಳೆದಿದ್ದಾರೆ.
8/ 8
ಫೋಟೋಗಳನ್ನು ಅರ್ಜುನ್ ಕೃಷ್ಣನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ಅರ್ಜುನ್ ಕೃಷ್ಣನ್ ಹಂಚಿಕೊಂಡಿದ್ದು, ಮೆಚ್ಚುಗೆ ಮಹಾಪೂರವೇ ಹರಿದು ಬಂದಿದೆ.