ಅವನು..ಅವಳಾದ ಕಥೆ: ರಾಜ್ಯದ ಮೊದಲ ಟ್ರಾನ್ಸ್​​ಜೆಂಡರ್​ ಟ್ಯಾಟೂ ಆರ್ಟಿಸ್ಟ್​ ನೀತು

ಹುಟ್ಟುವಾಗ ಮಂಜುನಾಥ್​​, ಬೆಳೆಯುವಾಗ ನೀತು ಆಗಿ ಬದಲಾವಣೆಯಾದ ಈ ಹುಡುಗಿ ಮೂಲತಃ ಗದಗದವರು. ತನ್ನ ದೇಹದಲ್ಲಾಗುವ ಬದಲಾವಣೆಯಿಂದ ನೀತು ಆಗಿ ಪರಿವರ್ತನೆಯಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ನೀತು ಹೋಟೆಲ್ ಉದ್ಯಮ, ಪೈಟಿಂಗ್, ಬ್ಯೂಟಿ ಪಾರ್ಲರ್ ಪ್ರಾರಂಭಿಸುವುದರ ಜೊತೆಗೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಟ್ರಾನ್ಸ್​​ಜೆಂಡರ್ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. ಟ್ಯಾಟೂ ಮೇಲೆ ಆಸಕ್ತಿ ಬೆಳೆಸಿಕೊಂಡು ಟ್ಯಾಟೂ ಆರ್ಟಿಸ್ಟ್ ಕೆಲಸವನ್ನು ಪ್ರಾರಂಭಿಸುತ್ತಾರೆ . ಈ ಮೂಲಕ ರಾಜ್ಯದ ಮೊದಲ ಟ್ರಾನ್ಸ್​​ಜೆಂಡರ್ ಟ್ಯಾಟೂ ಆರ್ಟಿಸ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

First published: