ಜಪಾನ್ನಲ್ಲಿ ಬುಲೆಟ್ ರೈಲುಗಳು ಮತ್ತು ಸ್ಮಾರ್ಟ್ ಸಾರ್ವಜನಿಕ ಶೌಚಾಲಗಳಿವೆ ಎಂಬುದು ಜಗತ್ತಿಗೆ ಗೊತ್ತಿರುವ ವಿಚಾರ. ಅದರೊಂದಿಗೆ ಜಪಾನ್ ಕೆಲವು ಹಳ್ಳಿಗಳು ಜನರಿಲ್ಲದೆ ಖಾಲಿ ಬಿದ್ದಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. Ngoro ಎಂಬ ಹೆಸರಿನ ಹಳ್ಳಿಯಲ್ಲಿ ಜನಸಂಖ್ಯೆ ಕಡಿಮೆಯಿದೆ. ಈ ಗ್ರಾಮದಲ್ಲಿ ಒಂದು ಕಾಲದಲ್ಲಿ 300 ಜನರು ವಾಸಿಸುತ್ತಿದ್ದರು, ಆದರೆ ಈಗ ಅಲ್ಲಿ ಮನುಷ್ಯರಿಗಿಂತ ಹೆಚ್ಚು ಗೊಂಬೆಗಳು ಕಂಡುಬರುತ್ತವೆ.