Junior Bruce Lee: ಬಾಡಿ ಬಿಲ್ಡರ್ಗಳೇ ನಾಚುವಂತೆ ದೇಹ ಹುರಿಗೊಳಿಸಿದ ಬಾಲಕ! ಇವನೇ ನೋಡಿ ಜೂನಿಯರ್ ಬ್ರೂಸ್ ಲೀ!
ಬ್ರೂಸ್ ಲೀ ಬಗ್ಗೆ ಎಲ್ಲರಿಗೂ ಗೊತ್ತು, ಆದ್ರೆ ಜೂನಿಯರ್ ಬ್ರೂಸ್ ಲೀ ಬಗ್ಗೆ ಗೊತ್ತಾ? ಇವನೇ ನೋಡಿ ಜೂನಿಯರ್ ಬ್ರೂಸ್ ಲೀ! ಬಾಡಿ ಬಿಲ್ಡರ್ ಆಗಿರುವ ಈತನ ವಯಸ್ಸು ಇನ್ನೂ 12! ಹಾಗಾದ್ರೆ ಈತ ಯಾರು? ಇವನ ಸಾಧನೆ ಏನು ಅಂತ ನೀವೇ ತಿಳಿದುಕೊಳ್ಳಿ...
ಈ 12ರ ಹರೆಯದ ಹುಡುಗನ ಬಗ್ಗೆಯೇ ಜಪಾನ್ನ ಎಲ್ಲೆಡೆ ಚರ್ಚೆಯಾಗುತ್ತಿದೆ. ಈತನ ಹೆಸರು Ryusei Imai. ನೀವು ಈತನ ದೇಹವನ್ನು ನೋಡಿ ಆಶ್ಚರ್ಯಚಕಿತರಾಗುವಿರಿ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ಹುಡುಗ ಬಾಡಿ ಬಿಲ್ಡ್ ಮಾಡಿದ್ದಾನೆ. ಈತ ಮಾರ್ಷಲ್ ಆರ್ಟ್ಸ್ ರಾಜ ಎಂದು ಕರೆಯಲ್ಪಡುವ ಬ್ರೂಸ್ ಲೀ ಆಗಲು ಬಯಸಿದ್ದಾನಂತೆ!
2/ 7
ಬ್ರೂಸ್ ಲೀ ತನ್ನ ಕಲೆಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದರು. ಹಾಗೆಯೇ ಜಪಾನ್ನಲ್ಲಿ ಜನರು ಇವನನ್ನು 'ಜೂನಿಯರ್ ಬ್ರೂಸ್ ಲೀ' ಎಂದು ಕರೆಯುತ್ತಾರೆ. ಬಾಲ್ಯದಿಂದಲೂ ನಿರಂತರವಾಗಿ ತರಬೇತಿ ಪಡೆಯುತ್ತಿದ್ದ ಈ ಬಾಲಕ, ಕೇವಲ ಎರಡು ಬೆರಳುಗಳಿಂದ ಪುಷ್-ಅಪ್ಗಳನ್ನು ಮಾಡುತ್ತಾನಂತೆ!
3/ 7
"ನಾನು ಬ್ರೂಸ್ ಲೀಯಂತೆ ಕೂಲ್ ಆಗಿರಲು ಬಯಸುತ್ತೇನೆ, ನಾನು ಅವನಂತೆ ವೇಗವಾಗಿ ಚಲಿಸಲು ಬಯಸುತ್ತೇನೆ." ಅಂತ ಈ ಬಾಲಕ ಹೇಳುತ್ತಾನೆ!
4/ 7
ತಮ್ಮ ಅಪಾರ ಶಕ್ತಿ ಪ್ರದರ್ಶನಗಳ ಮೂಲಕ ಖ್ಯಾತಿ ಗಳಿಸಿದ ಅವರು ಜಪಾನ್ನಲ್ಲಿ ಟಿವಿ ತಾರೆಯಾಗಿದ್ದಾರೆ. ಜನ ಈತನನ್ನು ಜೂನಿಯರ್ ಬ್ರೂಸ್ ಲೀ ಅಂತಾನೇ ಕರೆಯುತ್ತಾರೆ.
5/ 7
ಶಾಲೆಯಲ್ಲಿರುವ ಮಕ್ಕಳು ಅವನು ವಿಭಿನ್ನವಾಗಿರುವುದನ್ನು ನೋಡಿ, ಬೆರಗುಗೊಂಡಿದ್ದಾರಂತೆ. "ನಾನು ನನ್ನ ಬಟ್ಟೆಗಳನ್ನು ಬದಲಾಯಿಸಿದಾಗ, ನನ್ನ ಸ್ನೇಹಿತರು 'ನಿನ್ನ ಸ್ನಾಯುಗಳು ತುಂಬಾ ಚೆನ್ನಾಗಿವೆ' ಎಂದು ಹೇಳುತ್ತಾರಂತೆ!
6/ 7
ಬ್ರಿಟಿಷ್ ಪತ್ರಿಕೆ ಡೈಲಿ ಸ್ಟಾರ್ ಪ್ರಕಾರ, ಮಗುವಿನ ಯಶಸ್ಸಿನ ಹಿಂದೆ ಆತನ ತಂದೆ-ತಾಯಿ ಪಾತ್ರವಿದೆಯಂತೆ. ಈ ಕ್ಷೇತ್ರದಲ್ಲಿ ಬಾಲಕ ಸಾಧನೆ ಮಾಡಲು ತಂದೆ-ತಾಯಿ ಇಬ್ಬರೂ ಶ್ರಮಪಟ್ಟಿದ್ದಾರಂತೆ.
7/ 7
ರ್ಯುಚಿ ಅವರ ತಂದೆ ಕೂಡ ಬ್ರೂಸ್ ಲೀ ದೊಡ್ಡ ಅಭಿಮಾನಿಯಂತೆ. 1973 ರಲ್ಲಿ ಕೇವಲ 32 ನೇ ವಯಸ್ಸಿನಲ್ಲಿ ನಿಧನರಾದ ಬ್ರೂಸ್ ಲೀ ಮೇಲೆ ಇವರ ಕುಟುಂಬಕ್ಕೂ ವಿಶೇಷ ಅಭಿಮಾನವಂತೆ.