Costly Watch: ಈ ವಾಚ್‌ನ ಬೆಲೆ ಬರೋಬ್ಬರಿ 164 ಕೋಟಿಯಂತೆ! 'ಟೈಮ್' ಚೆನ್ನಾಗಿರೋರು ಮಾತ್ರ ಇದನ್ನ ಖರೀದಿಸ್ತಾರೆ

Costly Watch | ಇದೀಗ ಜನಪ್ರಿಯ ವಾಚ್​​ ಕಂಪೆನಿಯೊಂದು ಬರೋಬ್ಬರಿ 164 ಕೋಟಿ ಮೌಲ್ಯದ ವಾಚ್​ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ವಿಶ್ವದ ದುಬಾರಿ ಬೆಲೆಯ ವಾಚ್​ಗಳಲ್ಲಿ ಒಂದಾಗಿದೆ.

First published:

 • 17

  Costly Watch: ಈ ವಾಚ್‌ನ ಬೆಲೆ ಬರೋಬ್ಬರಿ 164 ಕೋಟಿಯಂತೆ! 'ಟೈಮ್' ಚೆನ್ನಾಗಿರೋರು ಮಾತ್ರ ಇದನ್ನ ಖರೀದಿಸ್ತಾರೆ

  ಈ ವಾಚ್​ ನಮ್ಮನ್ನು ನೋಡುತ್ತಲೇ ಆಕರ್ಷಿಸುತ್ತದೆ. ಇದು ವಿಶ್ವದ ಅತ್ಯಂತ ದುಬಾರಿ ವಾಚ್‌ಗಳಲ್ಲಿ ಒಂದಾಗಿದೆ. ಈ ಗಡಿಯಾರದ ಬೆಲೆ 20 ಮಿಲಿಯನ್ ಡಾಲರ್. ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 164 ಕೋಟಿ ರೂ. ಅಮೆರಿಕದ ಜ್ಯುವೆಲರಿ ಮತ್ತು ರಿಸ್ಟ್ ವಾಚ್ ಕಂಪೆನಿಯಾದ ಜಾಕೋಬ್ ಅಂಡ್ ಕೋ ಈ ವಾಚ್ ಅನ್ನು ಬಿಲಿಯನೇರ್ ವಾಚ್ ಸರಣಿಯ ಭಾಗವಾಗಿ ತಯಾರಿಸಿದೆ.

  MORE
  GALLERIES

 • 27

  Costly Watch: ಈ ವಾಚ್‌ನ ಬೆಲೆ ಬರೋಬ್ಬರಿ 164 ಕೋಟಿಯಂತೆ! 'ಟೈಮ್' ಚೆನ್ನಾಗಿರೋರು ಮಾತ್ರ ಇದನ್ನ ಖರೀದಿಸ್ತಾರೆ

  ಜಾಕೋಬ್ ಅಂಡ್ ಕೋ ಕಂಪೆನಿ ತಯಾರಿಸಿರುವ ಈ ದುಬಾರಿ ವಾಚ್ ನಲ್ಲಿ 76 ಅಪರೂಪದ ರತ್ನಗಳು, 57 ಬಗೆಯ ವಜ್ರಗಳಿವೆ. ಇದಲ್ಲದೆ, 425 ಆಶರ್ ಕಟ್, ಅಲಂಕಾರಿಕ ಹಳದಿ ಮತ್ತು ಹಳದಿ ಬಣ್ಣದ ವಜ್ರಗಳಿವೆ. ಇನ್ನು ಈ ಎಲ್ಲಾ ವಜ್ರ, ರತ್ನಗಳನ್ನು ಸೇರಿಸಿ ಈ ದುಬಾರಿ ವಾಚ್ ತಯಾರಿಸಲು ಬರೋಬ್ಬರಿ 3 ವರ್ಷಗಳು ಬೇಕಾಯಿತು.

  MORE
  GALLERIES

 • 37

  Costly Watch: ಈ ವಾಚ್‌ನ ಬೆಲೆ ಬರೋಬ್ಬರಿ 164 ಕೋಟಿಯಂತೆ! 'ಟೈಮ್' ಚೆನ್ನಾಗಿರೋರು ಮಾತ್ರ ಇದನ್ನ ಖರೀದಿಸ್ತಾರೆ

  ಈ ದುಬಾರಿ ವಾಚ್ ಅನ್ನು ಸ್ವಿಜರ್​ಲೆಂಡ್​​ನ ಜಿನೀವಾದಲ್ಲಿ ನಡೆದ ವಾಚಸ್ ಆ್ಯಂಡ್ ವಂಡರ್ಸ್ ವಾರ್ಷಿಕ ಪ್ರದರ್ಶನದಲ್ಲಿ ಜಾಕೋಬ್ & ಕೋ ಕಂಪೆನಿ ಟೈಂಲೆಸ್ ಟ್ರೆಷರ್ ಹೆಸರಿನ ಈ ಐಷಾರಾಮಿ ವಾಚ್ ಅನ್ನು ಪರಿಚಯಿಸಿದೆ.

  MORE
  GALLERIES

 • 47

  Costly Watch: ಈ ವಾಚ್‌ನ ಬೆಲೆ ಬರೋಬ್ಬರಿ 164 ಕೋಟಿಯಂತೆ! 'ಟೈಮ್' ಚೆನ್ನಾಗಿರೋರು ಮಾತ್ರ ಇದನ್ನ ಖರೀದಿಸ್ತಾರೆ

  ಇನ್ನು ಈ ವಾಚ್ 216.89 ಕ್ಯಾರೆಟ್ ವಜ್ರಗಳನ್ನು ಹೊಂದಿದೆ ಎಂದು ಕಂಪೆನಿ ಹೇಳಿದೆ. ರತ್ನದ ಕಲ್ಲುಗಳನ್ನು ಕೆಲಿಡೋಸ್ಕೋಪ್ ಅನ್ನು ಹೋಲುವಂತೆ ಕತ್ತರಿಸಲಾಗುತ್ತದೆ ಎಂದು ಕಂಪೆನಿ ಹೇಳುತ್ತದೆ. ಬಿಲಿಯನೇರ್ ಟೈಮ್‌ಲೆಸ್ ಟ್ರೆಷರ್ ವಾಚ್ ಮಾಡಲು 25 ಹೆಚ್ಚು ನುರಿತ ವೃತ್ತಿಪರರು,  ವಜ್ರ ಕ್ಷೇತ್ರದಲ್ಲಿ ನುರಿತ 10 ತಜ್ಞರು ಮತ್ತು 15 ಕುಶಲಕರ್ಮಿಗಳು ಶ್ರಮಿಸಿದ್ದಾರೆ ಎಂದು ಕಂಪೆನಿ ಹೇಳಿದೆ.

  MORE
  GALLERIES

 • 57

  Costly Watch: ಈ ವಾಚ್‌ನ ಬೆಲೆ ಬರೋಬ್ಬರಿ 164 ಕೋಟಿಯಂತೆ! 'ಟೈಮ್' ಚೆನ್ನಾಗಿರೋರು ಮಾತ್ರ ಇದನ್ನ ಖರೀದಿಸ್ತಾರೆ

  Jacob & Co ನಲ್ಲಿ ವಾಚ್ ಉತ್ಪಾದನೆಯ ಮುಖ್ಯಸ್ಥರಾದ ಸೆರಿನಾ ವಿಚ್, ಈ ವಾಚ್​ನ ತಯಾರಿಕೆಯ ಬಗ್ಗೆ ಹೇಳಿದ್ದಾರೆ. ಇದರಲ್ಲಿ 880 ಕ್ಯಾರೆಟ್ ಹಳದಿ ವಜ್ರಗಳನ್ನು ಮೊದಲು ಸಂಗ್ರಹಿಸಲಾಯಿತು ಮತ್ತು ಅಂತಿಮವಾಗಿ 216.89 ಕ್ಯಾರೆಟ್‌ಗಳಿಗೆ ಇಳಿಸಲಾಗಿದೆ ಎಂದು ಹೇಳಿದ್ದಾರೆ.

  MORE
  GALLERIES

 • 67

  Costly Watch: ಈ ವಾಚ್‌ನ ಬೆಲೆ ಬರೋಬ್ಬರಿ 164 ಕೋಟಿಯಂತೆ! 'ಟೈಮ್' ಚೆನ್ನಾಗಿರೋರು ಮಾತ್ರ ಇದನ್ನ ಖರೀದಿಸ್ತಾರೆ

  ಇದು Jacob & Co ಮಾಡಿದ ಮೊದಲ ಬಿಲಿಯನೇರ್ ವಾಚ್ ಅಲ್ಲ. 2015 ರಲ್ಲಿ ಮೊದಲ ಬಿಲಿಯನೇರ್ ವಾಚ್​ ಅನ್ನು ಸಹ ಬಿಡುಗಡೆ ಮಾಡಿದೆ. ಇದು 260 ಕ್ಯಾರೆಟ್ ಬಿಳಿ ವಜ್ರಗಳನ್ನು ಹೊಂದಿದೆ. 2018 ರಲ್ಲಿ, ಕಂಪೆನಿಯು $ 6 ಮಿಲಿಯನ್ ಮೌಲ್ಯದ ಹಳದಿ ಡೈಮಂಡ್ ಮೆನಿಯರ್ ವಾಚ್ ಅನ್ನು ತಯಾರಿಸಿತು. ಇದು 127 ಕ್ಯಾರೆಟ್ ಹಳದಿ ವಜ್ರಗಳನ್ನು ಹೊಂದಿದೆ.

  MORE
  GALLERIES

 • 77

  Costly Watch: ಈ ವಾಚ್‌ನ ಬೆಲೆ ಬರೋಬ್ಬರಿ 164 ಕೋಟಿಯಂತೆ! 'ಟೈಮ್' ಚೆನ್ನಾಗಿರೋರು ಮಾತ್ರ ಇದನ್ನ ಖರೀದಿಸ್ತಾರೆ

  ಈ ಕಂಪೆನಿಯು 2015 ರಿಂದ 21 ಬಿಲಿಯನೇರ್ ವಾಚ್‌ಗಳನ್ನು ತಯಾರಿಸಿದೆ. ಒಂದನ್ನು ಹೊರತುಪಡಿಸಿ ಎಲ್ಲವೂ $18 ಮಿಲಿಯನ್‌ಗೆ ಮಾರಾಟವಾಗಿದೆ. ಬಾಕ್ಸಿಂಗ್ ಲೆಜೆಂಡ್​​ ಫ್ಲಾಯ್ಡ್ ಮೇವೆದರ್ ಮತ್ತು ಫುಟ್ಬಾಲ್ ಲೆಜೆಂಡ್​ ಕ್ರಿಸ್ಟಿಯಾನೋ ರೊನಾಲ್ಡೊ ಈ ಕಂಪೆನಿಯಿಂದ ವಾಚ್​ಗಳನ್ನು ಖರೀದಿಸಿದ್ದಾರೆ.

  MORE
  GALLERIES