ಈ ಹಡುಗು ಸಂಪೂರ್ಣವಾಗಿ ಐಶಾರಾಮಿ ವ್ಯವಸ್ಥೆ ಹೊಂದಿದೆ. ಹಡಗಿನ ಒಳಗೆ ನಾನಾ ರೆಸ್ಟೊರೆಂಟ್ಗಳು, ಸ್ವಿಮ್ಮಿಂಗ್ ಪೂಲ್, ಜಿಮ್, ಮಕ್ಕಳ ಆಟದ ಸ್ಥಳ, ಚಿತ್ರಮಂದಿರ ಮುಂತಾದ ಸೌಕರ್ಯಗಳಿವೆ. ಇದರಲ್ಲಿ ಕೋವಿಡ್ ನಿಯಮಗಳ ಪಾಲನೆ ಆಗಲಿದೆ, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು ಎಂದು ತಿಳಿಸಲಾಗಿದೆ. ತುರ್ತು ಸಂದರ್ಭಕ್ಕಾಗಿ ಅಲ್ಲೇ ಒಂದು ವೈದ್ಯಕೀಯ ತಂಡವೂ ಇರಲಿದೆ. (Representational Image: Shutterstock)
ಆರಂಭಿಕ ಹಂತದಲ್ಲಿ ಈ ಹಡಗು ಮುಂಬೈನಿಂದ ಭಾರತದ ನಾನಾ ಸ್ಥಳಗಳಿಗೆ ಪ್ರಯಾಣ ಬೆಳೆಸಲಿದೆ. ಮೇ 2022ರಿಂದ ಚೆನ್ನೈನಿಂದ ಕೊಲಂಬೊ, ಗಲ್ಲೇ, ಟ್ರಿನ್ಕೊಮಾಲೇ ಮತ್ತು ಜಾಫ್ನಾಗೆ ಪ್ರಯಾಣ ಬೆಳೆಸಲಿದೆ. ಇವೆಲ್ಲವೂ ಶ್ರೀಲಂಕಾದ ಸ್ಥಳಗಳು. ಕಾರ್ಡಿಲಿಯಾ ಕ್ರೂಸ್ IRTCTC ಜೊತೆ ಈ ಒಡಂಬಡಿಕೆ ಮಾಡಿಕೊಂಡಿದ್ದು ಸದ್ಯ ಮುಂಬೈ-ಗೋವಾ-ಮುಂಬೈ, ಮುಂಬೈ-ಡಿಯು-ಮುಂಬೈ, ಮುಂಬೈ-ಸೀಫೇರಿಂಗ್-ಮುಂಬೈ, ಕೊಚ್ಚಿ-ಲಕ್ಷದ್ವೀಪ್-ಸೀಫೇರಿಂಗ್-ಮುಂಬೈ, ಮುಂಬೈ-ಸೀಫೇರಿಂಗ್-ಲಕ್ಷದ್ವೀಪ್-ಸೀಫೇರಿಂಗ್-ಮುಂಬೈ ಮಾರ್ಗಗಳಲ್ಲಿ ಪ್ರಯಾಣಿಸುತ್ತಿದೆ. (Representational Image: Shutterstock)
ಈ ಕ್ರೂಸ್ ವೀಕೆಂಡ್ ಗಾಗಿ ವಿಶೇಷ ಪ್ಯಾಕೇಜ್ ನೀಡುತ್ತಿದೆ. 2 ರಾತ್ರಿ ಮತ್ತು 3 ಹಗಲಿನ ಈ ಪ್ಯಾಕೇಜ್ ಬೆಲೆ 23,467 ರೂಪಾಯಿಗಳಾಗಿದೆ. ಈ ಬೆಲೆ ನೀವು ಆಯ್ಕೆ ಮಾಡುವ ಸೀಟಿನ ಆಧಾರದ ಮೇಲೆ ಬದಲಾಗುತ್ತದೆ. ಉದಾಹರಣೆಗೆ ಕ್ರೂಸ್ ಒಳಗೆ ಕುಳೀತುಕೊಳ್ಳುವ ಸೀಟಿಗೆ 23,467 ರೂಪಾಯಿಗಳಿದೆ. ಅದೇ ನೀವು ಸಮುದ್ರ ಕಾನು ಕಿಟಕಿ ಬದಿಯ ಸೀಟ್ ಬೇಕು ಎಂದರೆ ಅದರ ಬೆಲೆ 30,348 ರೂಪಾಯಿಗಳಾಗುತ್ತದೆ. ಅದೇ ಬಾಲ್ಕನಿಯ ಸೀಟಿಗಾದರೆ 43,092 ರೂಪಾಯಿಗಳು ಇದ್ದು ಸ್ವೀಟ್ ಗೆ 81,579 ರೂಪಾಯಿಗಳಿದೆ. ಎಲ್ಲಕ್ಕಿಂತ ಹೆಚ್ಚು ಐಶಾರಾಮಿ ಸ್ವೀಟ್ ಬೆಲೆ ರೂ 1.19,811 ರೂಪಾಯಿಗಳು ಇರಲಿದೆ.(Representational Image: Shutterstock)