ಫಜ್ಜಾ ಎಂದು ಪ್ರೀತಿಯಿಂದ ಕರೆಯುವ ರಾಜಕುಮಾರ: ಹಮ್ದಾನ್ ಬಿನ್ ಮೊಹಮ್ಮದ್ ಅಲ್ ಮಕ್ತೌಮ್ ಅವರು ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಮತ್ತು ಅವರ ಹಿರಿಯ ಪತ್ನಿ ಹಿಂದ್ ಬಿಂತ್ ಮಕ್ತೂಮ್ ಬಿನ್ ಜುಮಾ ಅಲ್ ಮಕ್ತೌಮ್ ಅವರ ಪುತ್ರ. ಇವರ 12 ಜನ ಮಕ್ಕಳಲ್ಲಿ ಎರಡನೆಯವರಾಗಿರುವ ಇವರಿಗೆ 39 ವರ್ಷ ವಯಸ್ಸಾಗಿದೆ. ಅಲ್ಲದೆ ಇವರನ್ನು "ಫಜ್ಜಾ" ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. 2008 ರಿಂದ ದುಬೈನ ಕ್ರೌನ್ ಪ್ರಿನ್ಸ್ ಆಗಿದ್ದಾರೆ. ಅವರು ಈ ಹಿಂದೆ 2006 ರಿಂದ 2008 ರವರೆಗೆ ದುಬೈನ ಉಪ ಆಡಳಿತಗಾರರಾಗಿ ಸೇವೆ ಸಲ್ಲಿಸಿದರು.